'ಕೆಜಿಎಫ್-2' ಚಿತ್ರತಂಡ ಸೇರಿಕೊಂಡ ತಮಿಳು ನಟ
Recommended Video
ರಾಕಿಂಗ್ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷೆಯ ಕೆಜಿಎಫ್ ಚಾಪ್ಟರ್-2 ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಮೊನ್ನೆ ಮೊನ್ನೆಯಷ್ಟೆ ಕೆಜಿಎಫ್-2ಗೆ ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್ ಎಂಟ್ರಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲೆ ಈಗ ಮತ್ತೊಬ್ಬ ತಮಿಳು ನಟ ಚಿತ್ರತಂಡ ಸೇರಿಕೊಂಡಿದ್ದಾರೆ.
ಹೌದು, ತಮಿಳು ನಟ ಸರಣ್ ಕೆಜಿಎಫ್-2 ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಸರಣ್ ಕಾಣಿಸಿಕೊಳ್ಳಲಿದ್ದಾರಂತೆ. ಸಖತ್ ಖದರ್ ಇರುವ ಪಾತ್ರದಲ್ಲಿ ಮಿಂಚಲಿದ್ದಾರಂತೆ ಸರಣ್. ತಮಿಳಿನಲ್ಲಿ ಈಗಾಗಲೆ ಕಾದಲ್, ವಿಶ್ವರೂಪಂ, ವಡಾಚೆನ್ನೈ ಚಿತ್ರಗಳಲ್ಲಿ ಅಭಿನಯಿಸಿರುವ ಸರಣ್ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಸಂತಸವನ್ನು ನಟ ಸರಣ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. "ತುಂಬ ವಿನಮ್ರ ಮತ್ತು ಅದ್ಭುತ ವ್ಯಕ್ತಿಯೊಂದಿಗೆ ಕೆಲಸ ಮಾಡಲು ಸಂತೋಷವಾಗುತ್ತಿದೆ. ಯಶ್ ತೆರೆ ಮೇಲೆ ಮಾತ್ರ ಸ್ಫೂರ್ತಿ ಅಲ್ಲದೆ, ಪರದೆ ಹಿಂದೆಯೂ ಸ್ಫೂರ್ತಿಯಾಗಲಿದ್ದಾರೆ. ಕೆಜಿಎಫ್-2 ತಂಡದ ಜೊತೆ ಕೆಲಸ ಮಾಡಲು ಸಖತ್ ಎಕ್ಸೈಟ್ ಆಗಿದ್ದೀನಿ" ಎಂದು ಹೇಳಿಕೊಂಡಿದ್ದಾರೆ.

ಕೆಜಿಎಫ್-2 ಚಿತ್ರೀಕರಣ ಕೋಲಾರ ಗೋಲ್ಡ್ ಫೀಲ್ಡ್ ನಲ್ಲಿ ನಡೆಯುತ್ತಿದೆ. ಆದ್ರೆ ಇದರ ನಡುವೆ ಕೋಲಾರ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಚಿತ್ರೀಕರಣದಿಂದ ಸ್ಥಳಿಯ ಆಸ್ತಿಪಾಸ್ತಿ ಹಾನಿಯಾಗುತ್ತಿದೆ ಎಂದು ಶ್ರೀನಿವಾಸ್ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದಾರೆ.


Click it and Unblock the Notifications











