ಕೆಜಿಎಫ್ ಚಾಪ್ಟರ್ 2ನಲ್ಲಿ ನಾನು ಜೂ. ರಾಕಿ ಭಾಯ್ ಅಲ್ಲಾ ಎಂದ ತಮಿಳು ನಟ ಶರಣ್!
ಕೆಜಿಎಫ್ ಚಾಪ್ಟರ್ 2 ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದೆ. ದಿನ ಕಳೆದಂತೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ದಿನಾಂಕ ಕೂಡ ಹತ್ತಿರವಾಗುತ್ತಿದ್ದು, ರಾಖಿ ಬಾಯ್ ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ. ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಅಷ್ಟೇ ಅಲ್ಲದೇ ಕೆಜಿಎಫ್ ಚಾಪ್ಟರ್ 2 ನಲ್ಲಿ ಸಾಕಷ್ಟು ದೊಡ್ಡ ದೊಡ್ಡ ತಾರಾಬಳಗವೂ ಈ ಬಾರಿ ಪ್ರೇಕ್ಷಕರನ್ನು ರಂಜಿಸಲಿದೆ. ಬಾಲಿವುಡ್‌ನ ತಾರೆಯರಿಂದ ಹಿಡಿದು ಕನ್ನಡದ ಅದೆಷ್ಟೋ ನಟ ನಟಿಯರು ಬಣ್ಣ ಹಚ್ಚಿದ್ದಾರೆ. ಈ ವಿಚಾರದ ಬಗ್ಗೆ ಈಗ ಮತ್ತೊಂದು ಅಪ್‌ಡೇಟ್ ಸಿಕ್ಕಿದ್ದು ಭಾರೀ ಆಶ್ಚರ್ಯಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣರಾಗಿರೋದು ನಟ ಶರಣ್.
ಹೌದು ತಮಿಳಿನ ಯುವ ಪ್ರತಿಭೆ, ತನ್ನ ನಡನೆ ಮೂಲಕವೇ ಮ್ಯಾಜಿಕ್ ಮಾಡುತ್ತಿರುವ ಟ್ಯಾಲೆಂಟೆಡ್ ಯುವ ನಟ ಶರಣ್ ಈಗ ಕೆಜಿಎಫ್ 2 ನಲ್ಲಿ ತನ್ನ ಪಾತ್ರ ಏನು ಎಂಬುವ ಬಗ್ಗೆ ಮಾತನಾಡಿದ್ದಾರೆ. ನಟ ಶರಣ್ ಈ ಹಿಂದೆಯೇ ಕೆಜಿಎಫ್ ಚಾಪ್ಟರ್ 2 ನಲ್ಲಿ ಅಭಿನಯಿಸುತ್ತಿರುವ ಬಗ್ಗೆ ತಿಳಿಸಿದ್ದರು. ಆದರೇ ಈಗ ಜನ ಅಂದುಕೊಂಡಿರುವಂತೆ ಇಲ್ಲ ನನ್ನ ಪಾತ್ರ, ನನ್ನ ಪಾತ್ರ ಸಸ್ಪೆನ್ಸ್ ಆಗಿ ಇರಲಿದೆ ಎಂದಿದ್ದಾರೆ.
ಹೌದು ಈ ಬಗ್ಗೆ 'ಕೆಜಿಎಫ್ ಅನಲಿಸ್ಟ್' ಹೆಸರಿನ ಈ ಟ್ವಿಟ್ಟರ್ ಖಾತೆಯಲ್ಲಿ ಒಂದು ಪೋಸ್ಟ್ ಮಾಡಲಾಗಿದೆ. ಬಹುತೇಕ ಕೆಜಿಎಫ್ ಚಾಪ್ಟರ್ 2 ನಲ್ಲಿ ಯಾರ್ಯಾರು ಅಭಿನಯಿಸುತ್ತಿದ್ದಾರೆ ಅನ್ನೋದು ಎಲ್ಲರಿಗೂ ತಿಳಿದಿದೆ. ಕೆಜಿಎಫ್ ಚಾಪ್ಟರ್ 2ನ ಶೂಟಿಂಗ್, ಡಬ್ಬಿಂಗ್ ಎಲ್ಲವೂ ಮುಕ್ತಾಯಾ ವಾಗಿ ರಿಲೀಸ್‌ಗೆ ಕಾಯುತ್ತಿರುವಾಗ ಶರಣ್ ಕೆಜಿಎಫ್ ಚಾಪ್ಟರ್ 2ನಲ್ಲಿ ತನ್ನ ಪಾತ್ರ ಏನಿರಬಹುದು ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.
'ಕೆಜಿಎಫ್ ಅನಲಿಸ್ಟ್' ಅನ್ನುವ ಈ ಟ್ವಿಟ್ಟರ್ ಖಾತೆ ಇಂದು ಈ ಪೋಸ್ಟ್ ಅನ್ನು ಹಂಚಿಕೊಂಡಿದೆ. ಇದರಲ್ಲಿ "ಕೆಜಿಎಫ್ 2 ನಲ್ಲಿ ಯಶ್ ಜೊತೆ ಕೆಲಸ ಮಾಡುವ ಬಗ್ಗೆ ನಟ ಶರಣ್ ಮಾತನಾಡಿದ್ದಾರೆ ಮತ್ತು ಅವರು ಕಿರಿಯ ರಾಕಿ ಪಾತ್ರದಲ್ಲಿ ನಟಿಸುತ್ತಿಲ್ಲ ಎಂದು ಮರು ದೃಢೀಕರಿಸಿದ್ದಾರೆ" ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೇ ಒಂದು ಸ್ಕ್ರೀನ್ ಶಾಟ್ ಕೂಡ ಹಂಚಿಕೊಂಡಿದ್ದು ಇದರಲ್ಲಿ ಕೆಜಿಎಫ್ 2 ನಲ್ಲಿ ಯಶ್ ಜೊತೆ ಅಭಿನಯಿಸಿರುವ ನಿಮ್ಮ ಅನುಭವ ಹೇಗಿತ್ತು ಎಂದು ಶರಣ್ ಅವರಿಗೆ ಅಭಿಮಾನಿಯೊಬ್ಬ ಕೇಳಿದ್ದಾನೆ.

ಇದಕ್ಕೆ ಉತ್ತರಿಸಿರುವ ಶರಣ್ "ಕೆಜಿಎಫ್ 2 ನಲ್ಲಿ ಅಭಿನಯಿಸಿರೋದು ಅದ್ಭುತ ಅನುಭವ ನೀಡಿದೆ. ಯಶ್ ಒಬ್ಬ ವ್ಯಕ್ತಿಯಾಗಿ ಅತ್ಯಂತ ಸಿಹಿ ಮತ್ತು ಸಾಧಾರಣ ಮತ್ತು ನಾನು ಅವರ ಗುಣಗಳನ್ನು ನಿಜವಾಗಿಯೂ ಮೆಚ್ಚುತ್ತೇನೆ. ಮತ್ತು ನೀವೆಲ್ಲರೂ ಚಲನಚಿತ್ರ ಮತ್ತು ನಾನು ಮಾಡಿದ ಕೆಲಸವನ್ನು ನೋಡಲು ಕಾಯಲು ಸಾಧ್ಯವಿಲ್ಲ. ಮತ್ತು ನಾನು ನೀವಂದುಕೊಂಡಂತೆ ಜೂನಿಯರ್ ರಾಕಿ ಅಲ್ಲ. ನನ್ನ ಪಾತ್ರ ಸಸ್ಪೆನ್ಸ್" ಎಂದು ಶರಣ್ ಹೇಳಿದ್ದಾರೆ. ಹೀಗಾಗಿ ಅಭಿಮಾನಿಗಳಲ್ಲಿ ಶರಣ್ ಪಾತ್ರ ಹೇಗಿರಬಹುದು ಎಂಬ ಬಗ್ಗೆ ಕುತೂಹಲ ಮೂಡಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲ. ಇಡೀ ಭಾರತದಲ್ಲೇ ಧೂಳೆಬ್ಬಿಸಿತ್ತು. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 1 ಎಲ್ಲಾ ಭಾಷೆಗಳಲ್ಲೂ ಕಮಾಲ್ ಮಾಡಿತ್ತು. ಇದೀಗ ಕೆಜಿಎಫ್ ಚಾಪ್ಟರ್ 2 ಚಿತ್ರದ ಬಿಡುಗಡೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ರಾಕಿ ಭಾಯ್ ಆಗಿ ಯಶ್ ಕಾಣಿಸಿಕೊಂಡಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ಏಪ್ರಿಲ್ 14, 2022 ರಂದು ರಿಲೀಸ್ ಆಗಲಿದೆ.


Click it and Unblock the Notifications











