ತಮಿಳು ನಟನ ಪತ್ನಿ ನೇಣಿಗೆ ಶರಣು: ಕಾರಣವೇನು.?
Recommended Video

ತಮಿಳು ನಟ ಸಿದ್ಧಾರ್ಥ್ ಗೋಪಿನಾಥ್ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸುದ್ದಿ ವರದಿಯಾಗಿದೆ. ಅನುಮಾನಾಸ್ಪದವಾದ ನಟನ ಪತ್ನಿಯ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಿನ್ನೆ ಸಂಜೆ ಗಂಡ-ಹೆಂತಿ ಇಬ್ಬರು ಹೊರಗೆ ಹೋಗಿ ಬಂದಿದ್ದರು. ಮನೆಗೆ ಬಂದ ನಂತರ ಖಾಸಗಿ ವಿಚಾರವಾಗಿ ಇಬ್ಬರಿಗೂ ಜಗಳ ಉಂಟಾಗಿದೆ. ಪರಸ್ಪರ ಇಬ್ಬರು ಕಿತ್ತಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನಂತರ ಪತಿ ಸಿದ್ಧಾರ್ಥ್ ಮನೆಯ ಹಾಲ್ ನಲ್ಲಿ ಮಲಗಿದರು. ಪತ್ನಿ ಸ್ಮ್ರಿಜಾ ರೂಂನಲ್ಲಿ ಮಲಗಿದ್ದರು. ಬೆಳಿಗ್ಗೆ ಎದ್ದು ನೋಡಿದ್ರೆ, ಸ್ಮ್ರಿಜಾ ಕೋಣೆಯ ಬಾಗಿಲು ತೆಗೆಯಲಿಲ್ಲ. ನಂತರ ಬಾಗಿಲು ಹೊಡೆದು ನೋಡಿದಾಗ ಫ್ಯಾನ್ ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸ್ಮ್ರಿಜಾ ಮೃತದೇಹ ಇತ್ತಂತೆ.

ಇನ್ನು ಪತಿ ಮನೆಯಲ್ಲಿರುವಾಗಲೇ ಸ್ಮ್ರಿಜಾ ಸಾವನ್ನಪಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದ್ದು, ಕುಟುಂಬ ಮತ್ತು ಅಕ್ಕ ಪಕ್ಕದವರ ಬಳಿ ಪೊಲೀಸರು ವಿಚಾರಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ಸಿದ್ಧಾರ್ಥ್ ಗೋಪಿನಾಥ್ ಸಹನಟನಾಗಿ ಗುರುತಿಸಿಕೊಂಡಿದ್ದಾರೆ.


Click it and Unblock the Notifications











