ಕನ್ನಡ ಸಿನಿಮಾ ಹಾಡು ಹಾಡಿಯೇ ಬಿಟ್ಟರು ತಮಿಳು ನಟ ಸಿಂಬು

By Naveen

Recommended Video

ಕನ್ನಡ ಹಾಡಿಗೆ ಸಿಂಭು ಧ್ವನಿ | Silambarasan aka simbu sings kannada song | FIlmibeat Kannada

ಕಾವೇರಿ ನದಿ ನೀರು ವಿಚಾರದಲ್ಲಿ ತನ್ನ ಹೇಳಿಕೆ ಮೂಲಕ ಕನ್ನಡಿಗರ ಪ್ರೀತಿಗಳಿಸಿದ್ದ ತಮಿಳು ನಟ ಸಿಂಬು ಈಗ ಕನ್ನಡ ಸಿನಿಮಾಗೆ ಹಾಡು ಕೂಡ ಹಾಡಿದ್ದಾರೆ. ಕಾಂತ ಕನ್ನಲಿ ನಿರ್ದೇಶನದ 'ಇರುವುದೆಲ್ಲವ ಬಿಟ್ಟು ಇರುವ ಬಿಟ್ಟುಕೊಳ್ಳುವುದೇ ಜೀವನ' ಸಿನಿಮಾದ ಹಾಡಿನ ಮೂಲಕ ಸಿಂಬು ಕನ್ನಡಕ್ಕೆ ಕಾಲಿಟ್ಟಿದ್ದಾರೆ.

ಸಿನಿಮಾದಲ್ಲಿ ಇರುವ ''ಊರ ಸುದ್ದಿ ಕೇಳ್ತಾ ಇರುವೆ, ಎಲ್ಲರಿಗೂ ಹೇಳ್ತಾ ಇರುವೆ, ನಿಂದು ಸ್ವಲ್ಪ ಸೇರ್ಸುತ್ತಿರುವೆ ಯಾಕೆ ಬಿಟ್ಟು ಕೊಳ್ತಿ ಇರುವೆ... ಕುಣಿರಿ ತಕಥ ಕುಣಿಸಿ ತಕಥೈ ಕುಣಿರಿ ತಕಥ ಕುಣಿಸಿ ತಕಥೈ...'' ಎಂಬ ವಿಶೇಷ ಹಾಡಿಗೆ ಸಿಂಬು ಧ್ವನಿ ನೀಡಿದ್ದಾರೆ. ವಿ ಶ್ರೀಧರ್ ಸಂಭ್ರಮ್ ಸಂಗೀತ ಮತ್ತು ವಿ.ನಾಗೇಂದ್ರ ಪ್ರಸಾದ್ ಮುದ್ದಾದ ಸಾಹಿತ್ಯ ಹಾಡಿನಲ್ಲಿ ಇದೆ.

ಕಾವೇರಿ ಬಗ್ಗೆ ಮಾತನಾಡಿದ್ದ ಸಿಂಬು ಹಾಡುತ್ತಿರುವ ಮೊದಲ ಕನ್ನಡ ಗೀತೆ ಇದಾಗಿದ್ದು, ಹಾಡಿನ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಚಿತ್ರದ ನಿರ್ದೇಶಕ ಕಾಂತ ಕೂಡ ಹಾಡು ಹಿಟ್ ಆಗುತ್ತದೆ ಎಂಬ ಭರವಸೆ ಹೊಂದಿದ್ದಾರೆ. ಇನ್ನು ಹಾಡಿನ ರೆಕಾರ್ಡಿಂಗ್ ವೇಳೆ ಸಿಂಬು ಜೊತೆಗೆ ನಿರ್ದೇಶಕ ಕಾಂತ ಮತ್ತು ಸಂಗೀತ ನಿರ್ದೇಶಕ ವಿ ಶ್ರೀಧರ್ ಸಂಭ್ರಮ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

tamil actor Simbu croons for kannada movie Iruvudellava Bittu Iruve Bittukolluvude Jeevana

'ಇರುವುದೆಲ್ಲವ ಬಿಟ್ಟು ಇರುವ ಬಿಟ್ಟುಕೊಳ್ಳುವುದೇ ಜೀವನ' ಸಿನಿಮಾ ಈಗಾಗಲೇ ಅನೇಕ ವಿಚಾರಗಳಿಗೆ ದೊಡ್ಡ ಸುದ್ದಿ ಮಾಡಿದೆ. ನಟಿ ಮೇಘನಾ ರಾಜ್ ಈ ಚಿತ್ರದ ನಾಯಕಿ ಆಗಿದ್ದಾರೆ. ಇತ್ತೀಚಿಗಷ್ಟೆ ತಮ್ಮ ಮದುವೆಯ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ನನ್ನ ಕೆರಿಯರ್ ನಲ್ಲಿ ಬಂದಿರುವ ಬೆಸ್ಟ್ ಸಿನಿಮಾ ಇದು ಅಂತ ಹೇಳಿಕೊಂಡಿದ್ದಾರೆ. ಇನ್ನು ಚಿತ್ರತಂಡ ಮೇಘನಾ ಮದುವೆಗೆ ಸಿನಿಮಾ ಟ್ರೇಲರ್ ಬಿಡುಗಡೆ ಮಾಡುವ ಪ್ಲಾನ್ ನಲ್ಲಿ ಇದೆ.

tamil actor Simbu croons for kannada movie Iruvudellava Bittu Iruve Bittukolluvude Jeevana

Bilwa Creations ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಿದ್ದು, ದೇವರಾಜ್ ದಾವಣಗೆರೆ ಬಂಡವಾಳ ಹಾಕಿದ್ದಾರೆ. 'ರಂಗಿತರಂಗ' ಚಿತ್ರಕ್ಕೆ ಕೆಲಸ ಮಾಡಿದ್ದ ಸಿನಿಮಾಟೋಗ್ರಾಫರ್ ವಿಲಿಯಮ್ ಡೇವಿದ್ ಈ ಚಿತ್ರದ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿದಿದೆ. ಬೆಂಗಳೂರು, ಊಟಿ, ಮಂಗಳೂರು ನಲ್ಲಿ 45 ದಿನ ಚಿತ್ರೀಕರಣ ಮಾಡಲಾಗಿದೆ. ಅಚ್ಚುತ್ ಕುಮಾರ್ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರ ಮಾಡಿದ್ದಾರೆ. 'ಡ್ರಾಮಾ ಜೂನಿಯರ್ಸ್' ರನ್ನರ್ ಅಪ್ ಅಭಿಶೇಕ್ ರಾಯನ್ ಸಿನಿಮಾದಲ್ಲಿ ನಟಿಸಿದ್ದಾರೆ.

More from Filmibeat

English summary
Tamil actor Simbu croons for Actress Meghana Raj and Tilak Shekar starring 'Iruvudellava Bittu Iruve Bittukolluvude Jeevana'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X