ಕೊನೆಯುಸಿರೆಳೆದ ಅಭಿಮಾನಿಗೆ ಸಿಂಬು ನೀಡಿದ ಗೌರವ
Recommended Video

ಕಾವೇರಿ ವಿಚಾರದಲ್ಲಿ ಮಾತನಾಡಿ ಕನ್ನಡಿಗರ ಪ್ರೀತಿ ಗಳಿಸಿದ್ದ ಸಿಂಬು ಈಗ ಮತ್ತೆ ತಮ್ಮ ಒಳ್ಳೆತನದ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಅಭಿಮಾನಿಗಳು ಸ್ಟಾರ್ ಗಳ ಪೋಸ್ಟರ್ ಗಳನ್ನು ಅಂಟಿಸುವುದು ಸಾಮಾನ್ಯವಾಗಿರುತ್ತದೆ. ಆದರೆ ಇಲ್ಲಿ ಸಿಂಬು ತನ್ನ ಅಭಿಮಾನಿಯ ಪೋಸ್ಟರ್ ಅನ್ನು ಅಂಟಿಸಿ ಮಾನವೀಯತೆ ತೋರಿದ್ದಾರೆ.
ಮದನ್ ಎಂಬುವವರು ನಟ ಸಿಂಬು ಅವರ ಅಪ್ಪಟ್ಟ ಅಭಿಮಾನಿ. ಸಿಂಬು ಅವರ ಫ್ಯಾನ್ಸ್ ಕ್ಲಬ್ ನಲ್ಲಿಯೂ ಗುರುತಿಸಿಕೊಂಡಿದ್ದ ಈ ಅಭಿಮಾನಿ ಕಳೆದ ವಾರ ಚೆನೈನಲ್ಲಿ ನಿಧನ ಹೊಂದಿದ್ದರು. ಆ ವೇಳೆ ಸಿಂಬು ಮಣಿರತ್ನಂ ನಿರ್ದೇಶನದ ಸಿನಿಮಾದ ಶೂಟಿಂಗ್ ಗಾಗಿ ಬೇರೆ ಕಡೆ ತೆರಳಿದ್ದರು. ಹೀಗಾಗಿ ಈ ವಿಷಯ ಸಿಂಬುಗೆ ತಲುಪಿರಲಿಲ್ಲ. ಆದರೆ ಶೂಟಿಂಗ್ ಮುಗಿಸಿ ರಾತ್ರಿ ವೇಳೆ ಕಾರ್ ನಲ್ಲಿ ಪ್ರಯಾಣ ಮಾಡುವಾಗ ಮದನ್ ಗೆಳೆಯರು ಆತನ ಪೋಸ್ಟರ್ ಗಳನ್ನು ರಸ್ತೆ ಬಳಿ ಅಂಟಿಸುತ್ತಿದ್ದ ದೃಶ್ಯ ಕಂಡ ಸಿಂಬು ತಕ್ಷಣ ಕಾರ್ ನಿಂದ ಇಳಿದು ತಾವೇ ಗೋಡೆಗಳಿಗೆ ಅಭಿಮಾನಿಯ ಪೋಸ್ಟರ್ ಅಂಟಿಸಿ ಗೌರವ ಸೂಚಿಸಿದ್ದಾರೆ.

ಸಿಂಬು ಅವರ ಈ ಕೆಲಸಕ್ಕೆ ಎಲ್ಲರೂ ಮೆಚ್ಚಿದ್ದಾರೆ. ಅಭಿಮಾನಿಯ ಅಗಲಿಕೆಗೆ ಸಿಂಬು ವಿಷಾದ ವ್ಯಕ್ತಪಡಿದಿದ್ದಾರೆ. ಈ ರೀತಿ ಅನೇಕ ಬಾರಿ ಸಿಂಬು ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ವಿಶೇಷ ಅಂದರೆ ಸಿಂಬು ಈಗ ಕನ್ನಡಕ್ಕೆ ಹಾಡುಗಾರನಾಗಿ ಎಂಟ್ರಿ ಕೊಟ್ಟಿದ್ದಾರೆ. ಮೇಘನಾ ರಾಜ್ ಮತ್ತು ತಿಲಕ್ ನಟನೆಯ 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಸಿನಿಮಾದ ಹಾಡನ್ನು ಸಿಂಬು ಹಾಡಿದ್ದಾರೆ. ಕಾಂತ ಕನ್ನಲ್ಲಿ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಇನ್ನು ಈ ಸಿನಿಮಾದ ಆಡಿಯೋ ಬಿಡುಗಡೆ ಇದೇ ಶುಕ್ರವಾರ ನಡೆಯಲಿದ್ದು, ಸಿಂಬು ಅವರೇ ಆಡಿಯೋ ಲಾಂಚ್ ಮಾಡಲಿದ್ದಾರೆ.


Click it and Unblock the Notifications











