ಬೆಂಗಳೂರಿನತ್ತ ತಮಿಳು ನಟ ಶಿವಕಾರ್ತಿಕೇಯನ್: ಅಪ್ಪು ಸಮಾಧಿಗೆ ಪೂಜೆ ಸಲ್ಲಿಕೆ

ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇನ್ನು ದಿವಂಗತ. ಪುನೀತ್ ರಾಜಕುಮಾರ್ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಕೂಡ ಇಷ್ಟವಾಗುವಂತಹ ವ್ಯಕ್ತಿತ್ವ. ಪ್ರತಿಯೊಬ್ಬರೂ ಕೂಡ ಸೆಳೆಯುವಂತಹ ಸರಳ ವ್ಯಕ್ತಿತ್ವ ಅವರದ್ದಾಗಿತ್ತು. ಹಾಗಾಗಿ ಅವರಿಗೆ ಲಕ್ಷಾಂತರ, ಕೋಟ್ಯಂತರ ಅಭಿಮಾನಿಗಳಿದ್ದಾರೆ. ಕೇವಲ ಅವರನ್ನು ತೆರೆಯ ಮೇಲೆ ನೋಡಿ ಮೆಚ್ಚಿಕೊಂಡು ದೇವರು ಎಂದು ಪೂಜಿಸುವ ಸಹಸ್ರಾರು ಅಭಿಮಾನಿಗಳಿದ್ದಾರೆ. ಇನ್ನು ಸಿನಿಮಾ ಇಂಡಸ್ಟ್ರಿ ಅಂತ ಬಂದಾಗ ಸಾಕಷ್ಟು ಜನ ಅಪ್ಪು ಅವನ್ನು ಮಾದರಿಯಾಗಿ ಸ್ವೀಕರಿಸುತ್ತಾರೆ.

ಭಾಷೆ, ಗಡಿಯ ಮಿತಿ ಇಲ್ಲದೆ ಪ್ರತಿ ಚಿತ್ರರಂಗದಲ್ಲೂ ಅಪ್ಪು ಅವರನ್ನ ಇಷ್ಟ ಪಡುವವರು ಬಹಳ ಮಂದಿ ಇದ್ದಾರೆ. ಬಾಲಿವುಡ್‌ನ ಟಾಪ್‌ ಸ್ಟಾರ್‌ಗಳಿಂದ ಹಿಡಿದು, ತಮಿಳು, ತೆಲುಗು, ಮಲಯಾಳಂ ಚಿತ್ರರಂಗಗಳಲ್ಲಿ ಕೂಡ ಅಪ್ಪುವನ್ನು ಇಷ್ಟಪಡುವವರು ಇದ್ದಾರೆ. ಹಾಗಾಗಿಯೇ ಪುನೀತ್ ರಾಜಕುಮಾರ್ ಇನ್ನಿಲ್ಲ ಎಂದಾಗ ಪ್ರತಿಯೊಬ್ಬರಿಗೂ ಕೂಡ ನೋವಾಗಿದ್ದು, ಪುನೀತ್ ರಾಜಕುಮಾರ ಅಂತಿಮ ದರ್ಶನವನ್ನು ಪಡೆಯಲು ಪರಭಾಷೆಯ ಸ್ಟಾರ್ ನಟರುಗಳು ದಂಡು ದಂಡಾಗಿ ಬಂದೇ ಬಿಟ್ಟರು. ಜೂನಿಯರ್ ಎನ್‌ಟಿಆರ್ , ಚಿರಂಜೀವಿ ಸೇರಿದಂತೆ ಸಾಕಷ್ಟು ನಟರು ಬೆಂಗಳೂರಿಗೆ ಬಂದು ಪುನೀತ್ ಅಂತಿಮ ದರ್ಶನವನ್ನು ಪಡೆದುಕೊಂಡರು. ಅತ್ತ ಅಲ್ಲುಅರ್ಜುನ್ ಪುನೀತ್ ಬಗ್ಗೆ ಭಾವುಕರಾಗಿ ಮಾತನಾಡಿದರು. ಇನ್ನು ನಟ ವಿಶಾಲ್ ಕೂಡ ಅಪ್ಪು ಜೊತೆಗಿನ ಬಾಂಧವ್ಯವನ್ನು ಹಂಚಿಕೊಂಡು ಅವರ ಸಾಮಾಜಿಕ ಕಾರ್ಯಕ್ಕೆ ಕೈ ಜೋಡಿಸಿರುವುದು ವಿಶೇಷ.

ಈಗ ತಮಿಳು ನಟ ಶಿವಕಾರ್ತಿಕೇಯನ್ ಕೂಡ ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ. ಪುನೀತ್‌ ರಾಜಕುಮಾರ್ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿಲ್ಲ. ಹಾಗಾಗಿ ಈಗ ಬೆಂಗಳೂರಿಗೆ ಬಂದು ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಸಮಾಧಿಗೆ ಗೌರವ ಸಲ್ಲಿಸಲಿದ್ದಾರೆ. ಬೆಂಗಳೂರಿಗೆ ಬಂದ ಬಳಿಕ ಶಿವಕಾರ್ತಿಕೇಯನ್ ಮೊದಲು ಶಿವರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಲಿದ್ದಾರೆ. ಶಿವಣ್ಣನ ನೋವು ಎಂಥಹದ್ದು ಎನ್ನುವುದು ಪ್ರತಿಯೊಬ್ಬರಿಗೂ ಅರ್ಥವಾಗುವಂಥದ್ದು. ಹಾಗಾಗಿ ಶಿವಕಾರ್ತಿಕೇಯನ್ ಮೊದಲು ಶಿವರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿ ಶಿವಣ್ಣನಿಗೆ ಸಾಂತ್ವನದ ಮಾತುಗಳನ್ನು ಹೇಳಲಿದ್ದಾರೆ.

Tamil Actor Sivakarthikeyan To Visit Kanteerava Studio

ನಂತರ ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ಶಿವಕಾರ್ತಿಕೇಯನ್ ಭೇಟಿ ನೀಡಲಿದ್ದಾರೆ. ಅಲ್ಲಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಲಿದ್ದಾರೆ ಶಿವಕಾರ್ತಿಕೇಯನ್. ಬಳಿಕ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ, ಅಲ್ಲಿ ಪುನೀತ್‌ ರಾಜ್‌ಕುಮಾರ್‌ ಸಮಾಧಿಗೆ ನಮನ ಸಲ್ಲಿಸಿ, ಪೂಜೆ ಮಾಡಲಿದ್ದಾರೆ. ಎಲ್ಲರಂತೆ ಅಪ್ಪು ಶಿವಕಾರ್ತಿಯನ್‌ ಜೊತೆಗೂ ಕೂಡ ಒಳ್ಳೆಯ ಬಾಂಧವ್ಯವನ್ನು ಹೊಂದಿದವರು. ಹಾಗಾಗಿಯೇ ಪುನೀತ್ ರವರ ಸಮಾಧಿಗೆ ನಮಸ್ಕರಿಸಬೇಕು ಎನ್ನುವ ಕಾರಣಕ್ಕೆ ಶಿವಕಾರ್ತಿಕೇಯನ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇಂತಹವರ ಪ್ರೀತಿ, ವಿಶ್ವಾಸವೇ ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವ ಎಂಥಾದ್ದು ಎಂಬುದನ್ನು ಸಾರಿ ಹೇಳುತ್ತದೆ. ಪುನೀತ್ ರಾಜ್‌ಕುಮಾರ್‌ ಜೊತೆಗೆ ಕೇವಲ ಪರಿಚಯ ಇದ್ದರೆ ಸಾಕು ಅವರು ಅಪ್ಪುವನ್ನ ಎಂದಿಗೂ ಮರೆಯಲು ಆಗೋದಿಲ್ಲ. ಈ ವಿಚಾರವನ್ನ ಈಗಾಗಲೇ ಸಾಕಷ್ಟು ಮಂದಿ ಹೇಳಿಕೊಂಡಿದ್ದಾರೆ. ಈಗ ಶಿವಕಾರ್ತಿಕೇಯನ್‌ ಕೂಡ ಅದೇ ಬಾಂಧ್ಯ ಇರುವ ಕಾರಣಕ್ಕೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

Tamil Actor Sivakarthikeyan To Visit Kanteerava Studio

ಇಂದು ಮಧ್ಯಾಹ್ನ 3ಗಂಟೆಯ ಸುಮಾರಿಗೆ ಶಿವಕಾರ್ತಿಕೇಯನ್‌ ಬೆಂಗಳೂರು ತಲುಪಲಿದ್ದಾರೆ. ಇಂದೇ ಶಿವರಾಜ್‌ಕುಮಾರ್, ಪುನೀತ್‌ ರಾಜ್‌ಕುಮಾ ಮನೆಗೆ ಭೇಟಿ ನೀಡಿ. ಕಂಠೀರವ ಸ್ಟೂಡಿಯೋದಲ್ಲಿ ಇರುವ ಅಪ್ಪು ಸಮಾಧಿಗೆ ಪೂಜೆ ಮಾಡಲಿದ್ದಾರೆ. ಬಳಿಕಾ ಅಪ್ಪು ಕುರಿತಾಗಿ ಮಾತನಾಡಲಿದ್ದಾರೆ.

More from Filmibeat

English summary
Tamil Actor Shivakarthikeyan Comming To Bangalore To Vist Shivaraj Kumar, Kanteerava Studio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X