ತಮಿಳು ನಟ ವಿಜಯ್ ಕೇರಳಗೆ ಕೊಟ್ಟಿದ್ದು 14 ಕೋಟಿಯಲ್ಲ.! ಮತ್ತೆಷ್ಟು.?

By Bharath Kumar

ಕೇರಳ ಸಂತ್ರಸ್ಥರ ಪರಿಹಾರ ನಿಧಿಗೆ ತಮಿಳು ನಟ ವಿಜಯ್ ಸುಮಾರು 14 ಕೋಟಿ ನೀಡಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿದೆ. ಆದ್ರೆ, ಈ ಬಗ್ಗೆ ಯಾವುದೇ ಅಧಿಕೃತವಾಗಿ ಮಾಹಿತಿ ಸಿಕ್ಕಿರಲಿಲ್ಲ.

ಕೇರಳ ಪ್ರವಾಹ ಪೀಡಿತರ ನಿಧಿಗೆ ವಿಜಯ್ ಅತಿ ದೊಡ್ಡ ಮೊತ್ತವನ್ನ ನೀಡಿದ್ದಾರೆ ಎನ್ನಲಾಗಿತ್ತು. ಇದೀಗ, ವಿಜಯ್ ಅವರ ಅಭಿಮಾನಿ ಸಂಘಗಳು ವಿಜಯ್ ಅವರ ನೀಡಿರುವ ಹಣದ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ.

ಈ ಸುದ್ದಿಯನ್ನ ತಮಿಳಿನ ಖ್ಯಾತ ಚಿತ್ರ ವಿಶ್ಲೇಷಕ ರಮೇಶ್ ಬಾಲ ಅವರು ತಮ್ಮ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ. ಇವರ ಪ್ರಕಾರ ವಿಜಯ್ ಅವರ 14 ಕೋಟಿ ಕೊಟ್ಟಿಲ್ಲವಾದರೂ, ಅತಿ ದೊಡ್ಡ ಮೊತ್ತವನ್ನ ನೀಡುವ ಮೂಲಕ ನೆರವಾಗಿದ್ದಾರೆ ಎನ್ನುವುದು ಖುಷಿ ನೀಡಿದೆ.

70 ಲಕ್ಷ ಹಣ ನೀಡಿದ ವಿಜಯ್

70 ಲಕ್ಷ ಹಣ ನೀಡಿದ ವಿಜಯ್

ಈ ಸುದ್ದಿಯನ್ನ ತಮಿಳಿನ ಖ್ಯಾತ ಚಿತ್ರ ವಿಶ್ಲೇಷಕ ರಮೇಶ್ ಬಾಲ ಅವರು ತಮ್ಮ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ. ಅವರು ತಿಳಿಸಿರುವ ಪ್ರಕಾರ, ವಿಜಯ್ ಅವರು ಇದುವರೆಗೂ 70 ಲಕ್ಷ ಹಣವನ್ನ ಕೇರಳ ಸಂತ್ರಸ್ಥರಿಗೆ ನೀಡಿದ್ದಾರಂತೆ.

ಫ್ಯಾನ್ಸ್ ಕ್ಲಬ್ ಖಾತೆಗೆ ಹಣ ಪಾವತಿ

ಫ್ಯಾನ್ಸ್ ಕ್ಲಬ್ ಖಾತೆಗೆ ಹಣ ಪಾವತಿ

ರಾಜ್ಯದ 14 ಜಿಲ್ಲೆಗಳ ವಿಜಯ್ ಅವರ ಅಭಿಮಾನಿ ಸಂಘಗಳ ಮೂಲಕ ತಲಾ 3 ಲಕ್ಷ ಎನ್ನುವಂತೆ ಅವರ ಖಾತೆಗಳಿಗೆ ವಿಜಯ್ ಹಣ ಪಾವತಿಸಿದ್ದಾರೆ. ಫ್ಯಾನ್ಸ್ ಕ್ಲಬ್ ಗಳ ಮೂಲಕ ದೇವರನಾಡಿನ ಮಕ್ಕಳಿಗೆ ಸಹಾಯ ಮಾಡಿದ್ದಾರೆ.

ಅಗತ್ಯ ವಸ್ತುಗಳ ಪೂರೈಕೆ

ಅಗತ್ಯ ವಸ್ತುಗಳ ಪೂರೈಕೆ

ಕೇವಲ ಹಣ ಮಾತ್ರವಲ್ಲದೇ ಅಗತ್ಯ ವಸ್ತುಗಳನ್ನ ಕೂಡ ಪೂರೈಸಿದ್ದಾರೆ. ತಮಿಳುನಾಡಿನಿಂದ 15 ಟ್ರಕ್ ಗಳಲ್ಲಿ ಅಕ್ಕಿ, ಸಕ್ಕರೆ, ಬೆಡ್ ಶೀಟ್, ಬಟ್ಟೆ, ಹಾಲಿನ ಪುಡಿ ಹೀಗೆ ಮೂಲಭೂತ ಅಗತ್ಯ ವಸ್ತುಗಳನ್ನ ಕಳುಹಿಸಿಕೊಟ್ಟಿದ್ದಾರೆ.

ಸ್ಟಾರ್ ನಟರಿಂದ ಹಣದ ಸಹಾಯ

ಸ್ಟಾರ್ ನಟರಿಂದ ಹಣದ ಸಹಾಯ

ವಿಜಯ್ ಹೊರತುಪಡಿಸಿದ್ರೆ, ಅಲ್ಲು ಅರ್ಜುನ್ 25 ಲಕ್ಷ, ಕಾರ್ತಿ ಹಾಗೂ ಸೂರ್ಯ ತಲಾ 25 ಲಕ್ಷ, ಮೋಹನ್ ಲಾಲ್ 25, ಕಮಲ್ ಹಾಸನ್ 25 ಲಕ್ಷ, ನಾಗಾರ್ಜುನ 28 ಲಕ್ಷ, ಮಹೇಶ್ ಬಾಬು 25 ಲಕ್ಷ, ಪ್ರಭಾಸ್ 25 ಲಕ್ಷ, ಎನ್.ಟಿ.ಆರ್ 25 ಲಕ್ಷ, ಚಿರಂಜೀವಿ 25 ಲಕ್ಷ, ರಾಮ್ ಚರಣ್ ಮತ್ತು ಪತ್ನಿ ಸೇರಿ 35 ಲಕ್ಷ, ಕಲ್ಯಾಣ್ ರಾಮ್ 10 ಲಕ್ಷ ಸೇರಿದಂತೆ ಸಾಕಷ್ಟು ನಟರು ಕೇರಳ ಜನರಿಗೆ ನೆರವು ನೀಡಿದ್ದಾರೆ.

More from Filmibeat

English summary
Tamil actor Thalapathy Vijay has donated a Massive 70 Lakhs to Kerala Flood Relief.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X