'ಕೆ.ಜಿ.ಎಫ್' ಚಿತ್ರ ವೀಕ್ಷಿಸಿ ಶಿಳ್ಳೆ ಹೊಡೆದ ತಮಿಳು ನಟ ವಿಜಯ್.!

Recommended Video

KGF Kannada movie : 'ಕೆ.ಜಿ.ಎಫ್' ಚಿತ್ರ ವೀಕ್ಷಿಸಿ ಶಿಳ್ಳೆ ಹೊಡೆದ ತಮಿಳು ನಟ ವಿಜಯ್.!

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ಚಿತ್ರ ಗ್ರ್ಯಾಂಡ್ ರಿಲೀಸ್ ಆಗಿ ಇನ್ನೇನು ಒಂದು ತಿಂಗಳಾಗುತ್ತಾ ಬಂತು. ನಾಲ್ಕು ವಾರಗಳು ಉರುಳಿದರೂ, 'ಕೆ.ಜಿ.ಎಫ್' ಮೇನಿಯಾ, ಮಾಸ್ ಹಿಸ್ಟೀರಿಯಾ ಮಾತ್ರ ಇನ್ನೂ ಕಮ್ಮಿ ಆಗಿಲ್ಲ.

'ಕೆ.ಜಿ.ಎಫ್' ಚಿತ್ರವನ್ನ ಮನಸಾರೆ ಮೆಚ್ಚಿಕೊಂಡಿರುವ ಕನ್ನಡಿಗರು ಥಿಯೇಟರ್ ನಲ್ಲಿ ಹಲವು ಬಾರಿ ಸಿನಿಮಾವನ್ನ ವೀಕ್ಷಿಸಿದ್ದಾರೆ. ಐದು ಭಾಷೆಗಳಲ್ಲಿ ತೆರೆಕಂಡ 'ಕೆ.ಜಿ.ಎಫ್' ಸಿನಿಮಾ ಹಿಂದಿ, ತೆಲುಗು, ತಮಿಳಿನಲ್ಲೂ ಮ್ಯಾಜಿಕ್ ಮಾಡುತ್ತಿದೆ.

ಶಾರುಖ್ ಖಾನ್ ಅಭಿನಯದ 'ಝೀರೋ' ಚಿತ್ರಕ್ಕೆ 'ಕೆ.ಜಿ.ಎಫ್' ಸೆಡ್ಡು ಹೊಡೆದಿದೆ ಅಂದ್ರೆ ನೀವೇ ಊಹಿಸಿ ಕನ್ನಡ ಚಿತ್ರದ ಕಮಾಲ್ ಹೇಗಿದೆ ಅಂತ.!

ಅಂದ್ಹಾಗೆ, 'ಕೆ.ಜಿ.ಎಫ್' ಬಗ್ಗೆ ನಾವು ಇಷ್ಟೆಲ್ಲಾ ಪೀಠಿಕೆ ಹಾಕುವುದಕ್ಕೆ ಕಾರಣ ತಮಿಳು ನಟ ವಿಜಯ್. ಕನ್ನಡದ ಸೆನ್ಸೇಷನಲ್ ಚಿತ್ರ 'ಕೆ.ಜಿ.ಎಫ್'ನ ತಮಿಳು ನಟ ವಿಜಯ್ ವೀಕ್ಷಿಸಿ ಕೊಂಡಾಡಿದ್ದಾರೆ. ಮುಂದೆ ಓದಿರಿ...

ಕೆ.ಜಿ.ಎಫ್' ನೋಡಲು ಕಾಯುತ್ತಿದ್ದ ವಿಜಯ್

''ಕನ್ನಡದ ಸೆನ್ಸೇಷನ್ 'ಕೆ.ಜಿ.ಎಫ್' ಚಿತ್ರವನ್ನು ದಳಪತಿ ವಿಜಯ್ ವೀಕ್ಷಿಸಿ ಚಿತ್ರತಂಡಕ್ಕೆ ಭೇಷ್ ಎಂದಿದ್ದಾರೆ. ಅಂದ್ಹಾಗೆ, 'ಕೆ.ಜಿ.ಎಫ್' ಬಿಡುಗಡೆ ಆದಾಗಿನಿಂದಲೂ, ಚಿತ್ರವನ್ನು ನೋಡಲು ವಿಜಯ್ ಕಾಯುತ್ತಿದ್ದರು'' ಎಂದು ಹರಿಚರಣ್ ಪುಡಿಪೆಡ್ಡಿ ಟ್ವೀಟ್ ಮಾಡಿದ್ದಾರೆ.

ಚೆನ್ನೈನಲ್ಲಿ ಸ್ಪೆಷಲ್ ಸ್ಕ್ರೀನಿಂಗ್

''ಚೆನ್ನೈನಲ್ಲಿದ್ದ ಸ್ಪೆಷಲ್ ಸ್ಕ್ರೀನಿಂಗ್ ನಲ್ಲಿ ತಮಿಳು ನಟ ವಿಜಯ್ ಕನ್ನಡದ ಹಿಟ್ ಸಿನಿಮಾ 'ಕೆ.ಜಿ.ಎಫ್' (ತಮಿಳು ವರ್ಷನ್) ವೀಕ್ಷಿಸಿದ್ದಾರೆ. ವಿಜಯ್ 'ಕೆ.ಜಿ.ಎಫ್' ನಿಜಕ್ಕೂ ಇಷ್ಟವಾಗಿದೆ'' ಅಂತ ರಮೇಶ್ ಬಾಲಾ ಟ್ವೀಟ್ ಮಾಡಿದ್ದಾರೆ.

ಕಂಪ್ಲೀಟ್ ಆಗಿ ಎಂಜಾಯ್ ಮಾಡಿದರು.!

''ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ 'ಕೆ.ಜಿ.ಎಫ್'ನ ನಟ ವಿಜಯ್ ಕಣ್ತುಂಬಿಕೊಂಡರು. ಅವರಿಗೆ ಚಿತ್ರ ತುಂಬಾ ಇಷ್ಟವಾಯಿತು. 'ಕೆ.ಜಿ.ಎಫ್'ನ ಅವರು ಕಂಪ್ಲೀಟ್ ಆಗಿ ಎಂಜಾಯ್ ಮಾಡಿದರು'' ಎಂದು ಕೌಶಿಕ್ ಎಲ್.ಎಮ್ ಟ್ವೀಟ್ ಮಾಡಿದ್ದಾರೆ.

ಇಡೀ ತಂಡಕ್ಕೆ ಶುಭ ಹಾರೈಸಿದರು.!

''ಕೆ.ಜಿ.ಎಫ್' ಚಿತ್ರವನ್ನ ನೋಡಿದ್ಮೇಲೆ, ಇಡೀ ಚಿತ್ರತಂಡಕ್ಕೆ ತಮಿಳು ನಟ ವಿಜಯ್ ಶುಭ ಹಾರೈಸಿದರು'' ಎಂದು ರಾಜಶೇಖರ್ ಟ್ವೀಟ್ ಮಾಡಿದ್ದಾರೆ.

More from Filmibeat

English summary
Tamil Actor Vijay watched Tamil version of Kannada Movie KGF at special screening in Chennai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X