ನಟ ವಿಶಾಲ್ ನಿಶ್ಚಿತಾರ್ಥ ಮುರಿದುಬಿದ್ದ ವದಂತಿ ಬಗ್ಗೆ ತಂದೆ ಹೇಳಿದ್ದೇನು?

ತಮಿಳು ನಟ ವಿಶಾಲ್ ಮತ್ತು ಅನಿಶಾ ಅಲ್ಲ ರೆಡ್ಡಿ ನಡುವಿನ ನಿಶ್ಚಿತಾರ್ಥ ಮುರಿದುಬಿದ್ದಿದೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಅನಿಶಾ ತನ್ನ ಇನ್ಸ್ಟಾಗ್ರಾಮ್ ನಲ್ಲಿದ್ದ ನಿಶ್ಚಿತಾರ್ಥದ ಫೋಟೋಗಳು ಸೇರಿದಂತೆ ಇಬ್ಬರು ಜೊತೆಗಿರುವ ಎಲ್ಲಾ ಫೋಟೋಗಳನ್ನು ಡಿಲಿಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ನಿಶ್ಚಿತಾರ್ಥ ಮುರಿದು ಬಿದ್ದಿದೆ ಎನ್ನುವ ಸುದ್ದಿ ಅನೇಕ ದಿನಗಳಿಂದ ವೈರಲ್ ಆದರು ಈ ಬಗ್ಗೆ ನಟ ವಿಶಾಲ್ ಎಲ್ಲಿಯೂ ತುಟಿಬಿಚ್ಚಿಲ್ಲ. ಆದ್ರೀಗ ವಿಶಾಲ್ ತಂದೆ ಜಿ.ಕೆ ರೆಡ್ಡಿ ಮಗನ ಮದುವೆ ಬ್ರೇಕ್ ಅಪ್ ವದಂತಿ ಬಗ್ಗೆ ಮೌನ ಮುರಿದಿದ್ದಾರೆ. ಈ ವಿಚಾರವಾಗಿ ವಿಶಾಲ್ ತಂದೆ ಮೊದಲ ಬಾರಿಗೆ ಮಾತನಾಡಿದ್ದಾರೆ.

ನಿಶ್ಚಿತಾರ್ಥ ಮುರಿದು ಬಿದ್ದಿದೆ ಎನ್ನುವ ಸುದ್ದಿಯನ್ನು ತಳ್ಳಿ ಹಾಕಿರುವ ವಿಶಾಲ್ ತಂದೆ ಜಿಕೆ ರೆಡ್ಡಿ ಸಧ್ಯದಲ್ಲೇ ಮದುವೆ ದಿನಾಂಕ ನಿಗದಿ ಪಡಿಸುವುದಾಗಿ ಹೇಳಿದ್ದಾರೆ. ಸದ್ಯ ನಾಡಿಗರ್ ಸಂಘದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರಂತೆ. ಇದು ಕೋರ್ಟ್ ನಲ್ಲಿ ಇರುವ ಕಾರಣ ಇನ್ನು ತಡವಾಗುವ ಸಾಧ್ಯತೆ ಇದೆ. ಜೊತೆಗೆ ನಾಡಿಗರ್ ಸಂಘದ ಬಿಲ್ಡಿಂಗ್ ಕೆಲಸ ಕೂಡ ನಡೆಯುತ್ತಿದೆಯಂತೆ. ಈ ಎಲ್ಲಾ ಕೆಲಸಗಳು ಮುಗಿದ ಬಳಿಕ ವಿಶಾಲ್ ಮದುವೆ ದಿನಾಂಕ ನಿಗದಿ ಮಾಡುವುದಾಗಿ ಹೇಳಿದ್ದಾರೆ.

Tamil Actor Vishal Father G.K Reddy Clarified About Vishal Marriage

ತಮಿಳು ನಟ ವಿಶಾಲ್ ಮತ್ತು ಅನಿಶಾ ಇಬ್ಬರು ಪರಸ್ಪರ ಪ್ರೀತಿಸಿ, ಮನೆಯವರನ್ನ ಒಪ್ಪಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2019 ಮಾರ್ಚ್ ನಲ್ಲಿ ವಿಶಾಲ್ ಮತ್ತು ಅನಿಶಾ ಅವರ ನಿಶ್ಚಿತಾರ್ಥ ನಡೆದಿತ್ತು. ಎಲ್ಲ ಅಂದುಕೊಂಡಂತೆ ಆದರೆ ಅಕ್ಟೋಬರ್ ತಿಂಗಳಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆಯಬೇಕಿತ್ತು. ಆದ್ರೀಗ ವಿಶಾಲ್ ಮತ್ತು ಅನಿಶಾ ಮದುವೆ ಬ್ರೇಕ್ ಅಪ್ ಸುದ್ದಿ ಹರಿದಾಡುತ್ತಿದೆ.

More from Filmibeat

English summary
Tamil Actor Vishal Father G.K Reddy clarified about Vishal Marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X