ತಮಿಳು ನಟ ವಿಶಾಲ್ ತಂದೆಯ ಕನ್ನಡ ಪ್ರೇಮ ತಿಳಿದರೆ ಶಿಳ್ಳೆ ಹೊಡೆಯುತ್ತೀರಾ.!
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ಚಿತ್ರದ ತಮಿಳು ಅವತರಣಿಕೆ ಹಕ್ಕುಗಳು ಕಾಲಿವುಡ್ ನಟ ವಿಶಾಲ್ ಒಡೆತನದ 'ವಿಶಾಲ್ ಫಿಲ್ಮ್ ಫ್ಯಾಕ್ಟರಿ' ಪಾಲಾಗಿದೆ.
'ಕೆ.ಜಿ.ಎಫ್' ಚಿತ್ರದ ಮೇಲೆ ವಿಶಾಲ್ ಗೆ ಬೆಟ್ಟದಷ್ಟು ನಂಬಿಕೆ ಇದೆ. ಹೀಗಾಗಿ, ತಮಿಳುನಾಡಿನಲ್ಲಿ 'ಕೆ.ಜಿ.ಎಫ್' ಚಿತ್ರವನ್ನ ವಿಶಾಲ್ ಬಿಡುಗಡೆ ಮಾಡಲಿದ್ದಾರೆ. ಪುತ್ರ ವಿಶಾಲ್ ತೆಗೆದುಕೊಂಡ ಈ ನಿರ್ಧಾರಕ್ಕೆ ಅವರ ತಂದೆ ಖ್ಯಾತ ನಿರ್ಮಾಪಕ ಜಿ.ಕೆ.ರೆಡ್ಡಿ ಧನ್ಯವಾದ ತಿಳಿಸಿದ್ದಾರೆ. ಯಾಕಂದ್ರೆ, ವಿಶಾಲ್ ತಂದೆ ಜಿ.ಕೆ.ರೆಡ್ಡಿ ಅಪ್ಪಟ ಕನ್ನಡ ಪ್ರೇಮಿ.
ಹಾಗ್ನೋಡಿದ್ರೆ, ವಿಶಾಲ್ ತಂದೆ ಜಿ.ಕೆ.ರೆಡ್ಡಿ ಓದಿ, ಬೆಳೆದಿದ್ದೆಲ್ಲ ಕರ್ನಾಟಕದಲ್ಲಿ. ಹೀಗಾಗಿ, ಕನ್ನಡ ಅಂದ್ರೆ ಅವರಿಗೆ ಸಿಕ್ಕಾಪಟ್ಟೆ ಅಭಿಮಾನ. ಸ್ವಚ್ಛ ಕನ್ನಡದಲ್ಲಿಯೇ 'ಕೆ.ಜಿ.ಎಫ್' ಚಿತ್ರದ ಟ್ರೈಲರ್ ಲಾಂಚ್ ವೇಳೆ ಮಾತನಾಡಿದ ಜಿ.ಕೆ.ರೆಡ್ಡಿ ಅವರ ಕನ್ನಡ ಪ್ರೇಮ ಕಂಡು ನಿಜಕ್ಕೂ ನೀವು ಶಿಳ್ಳೆ ಹೊಡೆಯುತ್ತೀರಾ. ಮುಂದೆ ಓದಿರಿ...

ಹುಟ್ಟಿ-ಬೆಳೆದಿದ್ದು ಕರ್ನಾಟಕದಲ್ಲಿ
''ನಾನು ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಿ. ವೈಟ್ ಫೀಲ್ಡ್, ವರ್ತೂರಿನಲ್ಲಿ ಓದಿದ್ದು. ಎಚ್.ಎ.ಎಲ್ ನಲ್ಲಿ ಕೆಲಸ ಮಾಡಿದ್ದು. ಅಲ್ಲಿಂದ ನಾನು ಮದ್ರಾಸ್ ಗೆ ಹೋದೆ. ನನಗೆ ಕನ್ನಡ ಅಂದ್ರೆ ತುಂಬಾ ಇಷ್ಟ. ತುಂಬಾ ಇಷ್ಟ ಅಂದ್ರೆ, ವಿದೇಶದಲ್ಲಿ ಕನ್ನಡಿಗರು ಸಿಕ್ಕರೆ ಬೆಲ್ಲ ತಿಂದಷ್ಟೇ ಖುಷಿ ಆಗುತ್ತೆ'' ಅಂತಾರೆ ನಿರ್ಮಾಪಕ ಜಿ.ಕೆ.ರೆಡ್ಡಿ.

ಕನಸು ನನಸು ಮಾಡಿದ ಮಗ
''ಕನ್ನಡದ ಮೇಲೆ ನನಗೆ ಅಭಿಮಾನ ಇದೆ. ಸಿನಿಮಾ ಅಂದ್ರೆ ಬಹಳ ಹುಚ್ಚು. ದೊಡ್ಡ ಆಕ್ಟರ್ ಆಗಬೇಕು ಅಂದುಕೊಂಡೆ. ಆದರೆ ಆಗಲಿಲ್ಲ. ನನ್ನ ಕನಸನ್ನು ನನಸು ಮಾಡಿದ್ದು ನನ್ನ ಮಗ'' - ಜಿ.ಕೆ.ರೆಡ್ಡಿ, ತಮಿಳು ನಟ ವಿಶಾಲ್ ತಂದೆ

ಕನ್ನಡದಲ್ಲಿ ಸಿನಿಮಾ ಮಾಡುವ ಆಸೆ
''ಕನ್ನಡದಲ್ಲಿ ಒಂದು ಸಿನಿಮಾ ಮಾಡಬೇಕು, ತೆಲುಗಿನಲ್ಲಿ ಒಂದು ಸಿನಿಮಾ ಮಾಡಬೇಕು ಅಂತ ನನಗೆ ಆಸೆ ಇದೆ. ಡಾ.ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಅಂಬರೀಶ್, ರವಿಚಂದ್ರನ್, ಹಂಸಲೇಖ ನನಗೆ ಒಳ್ಳೆಯ ಫ್ರೆಂಡ್ಸ್'' - ಜಿ.ಕೆ.ರೆಡ್ಡಿ, ತಮಿಳು ನಟ ವಿಶಾಲ್ ತಂದೆ

ಹೆಮ್ಮೆ ಇದೆ
''ನನಗೆ ಇಂದು ಒಳ್ಳೆ ಚಾನ್ಸ್ ಕೊಟ್ಟಿದ್ದು ಯಶ್. ಆತ ನನ್ನ ಮಗ ಇದ್ದ ಹಾಗೆ. ಐ ಲವ್ ಹಿಮ್. ನಾವೆಲ್ಲರೂ ಭಾರತೀಯರು. ಯಶ್ ಚಿತ್ರವನ್ನ ಪ್ರಮೋಟ್ ಮಾಡಲು ನನಗೆ ನಿಜಕ್ಕೂ ಹೆಮ್ಮೆ ಇದೆ. ಕೆ.ಜಿ.ಎಫ್ ಚಿತ್ರದಿಂದ ಆತನಿಗೆ ಒಳ್ಳೆಯ ಹೆಸರು ಬರಲಿದೆ'' ಎಂದು ಹಾರೈಸಿದರು ಜಿ.ಕೆ.ರೆಡ್ಡಿ


Click it and Unblock the Notifications











