ನಿಶ್ಚಿತಾರ್ಥದ ನಂತರ ಕೈ-ಕಾಲು ಮುರಿದುಕೊಂಡ ನಟ ವಿಶಾಲ್

ಕಾಲಿವುಡ್ ನಟ ವಿಶಾಲ್ ಇತ್ತೀಚಿಗಷ್ಟೆ ಪ್ರೇಯಸಿ ಅನಿಶಾ ರೆಡ್ಡಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಸಂಭ್ರಮದಲ್ಲಿದ್ದರು. ಇದಾಗಿ ಕೆಲವೇ ದಿನದಲ್ಲಿ ಕೈ ಕಾಲು ಮುರಿದುಕೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ನಿಶ್ಚಿತಾರ್ಥಕ್ಕೂ ಕೈ ಕಾಲು ಮುರಿಯುವುದಕ್ಕೂ ಏನು ಸಂಬಂಧ ಅಂತ ಅಚ್ಚರಿ ಪಡಬೇಡಿ.

ಅನಿಶಾ ರೆಡ್ಡಿ ಜೊತೆ ಅಧಿಕೃತವಾಗಿ ಎಂಗೇಜ್ ಆದ ನಂತರ ವಿಶಾಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಸುಂದರ್ ಸಿ ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ವಿಶಾಲ್ ಅಭಿನಯಿಸುತ್ತಿದ್ದರು. ಈ ಸಿನಿಮಾದ ಚಿತ್ರೀಕರಣದ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೊಸ ಚಿತ್ರದ ಚೀತ್ರೀಕರಣ ಟರ್ಕಿಯಲ್ಲಿ ನಡೆಯುತ್ತಿತ್ತು. ಚಿತ್ರದ ಹೈ ವೋಲ್ಟೇಜ್ ಆಕ್ಷನ್ ದೃಶ್ಯವನ್ನು ಸೆರೆಹಿಡಿಯಲಾಗುತ್ತಿತ್ತು. ಈ ಸಮಯದಲ್ಲಿ ಎಟಿವಿ ಬೈಕ್ ಮೇಲಿದ್ದ ವಿಶಾಲ್ ಆಯಾತಪ್ಪಿ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ವಿಶಾಲ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಿಶಾಲ್ ಕೈ ಮತ್ತು ಕಾಲಿಗೆ ಹೆಚ್ಚು ಪೆಟ್ಟಾಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ.

Tamil actor Vishal injured on the sets of his upcoming film

ಆಸ್ಪೆತ್ರೆಯಲ್ಲಿರುವ ವಿಶಾಲ್ ಫೋಟೋವನ್ನು ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. ಅಲ್ಲದೆ ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ವಿಶಾಲ್ ಆರೋಗ್ಯವಾಗಿದ್ದಾರೆ ಎಂದು ಚಿತ್ರತಂಡ ಹೇಳಿದೆ. ಸದ್ಯ ವಿಶಾಲ್ ವಿಶ್ರಾಂತಿ ಪಡೆಯುತ್ತಿದ್ದು ಇನ್ನೂ ಕೆಲವು ದಿನಗಳ ಕಾಲ ರೆಸ್ಟ್ ಮಾಡಲು ವೈದ್ಯರು ಸೂಚಿಸಿದ್ದಾರೆ.

More from Filmibeat

English summary
Tamil actor Vishal injured on the sets of his upcoming film. currently film is shooting in Turkey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X