'ಅರ್ಜುನ್ ರೆಡ್ಡಿ' ನಟಿ ಜೊತೆ ತಮಿಳು ನಟ ವಿಶಾಲ್ ಮದುವೆ
ತಮಿಳು ನಟ ವಿಶಾಲ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ವಿಶಾಲ್ ಮದುವೆ ಸುದ್ದಿ ತಮಿಳು ಮಾಧ್ಯಮಗಳಲ್ಲಿ ಹೆಡ್ ಲೈನ್ ಆಗಿತ್ತು. ಇದೀಗ, ಆ ಅಂತೆ ಕಂತೆಗಳಿಗೆಲ್ಲಾ ಬ್ರೇಕ್ ಹಾಕಿದ ವಿಶಾಲ್ ಮದುವೆ ಬಗ್ಗೆ ಖಚಿತ ಪಡಿಸಿದ್ದಾರೆ.
'ಅರ್ಜುನ್ ರೆಡ್ಡಿ' ಚಿತ್ರದಲ್ಲಿ ನಟಿಸಿರುವ ಅನಿಶ್ ರೆಡ್ಡಿ ಜೊತೆ ವೈವಾಹಿಕ ಜೀವನ ಆರಂಭಿಸುತ್ತಿರುವ ವಿಶಾಲ್, ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ತಮ್ಮ ಹುಡುಗಿಯನ್ನ ಪರಿಚಯ ಮಾಡಿಕೊಟ್ಟಿದ್ದಾರೆ.
ಈ ಮೂಲಕ ವಿಶಾಲ್ ಮದುವೆ ಬಗ್ಗೆ ಇದ್ದ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಅಂದ್ಹಾಗೆ, ವಿಶಾಲ್ ಮದ್ವೆ ಆಗ್ತಿರುವ ಆ ನಟಿ ಯಾರು? ಇದಕ್ಕೂ ಮುಂಚೆ ಯಾವ ಯಾವ ಸಿನಿಮಾದಲ್ಲಿ ನಟಿಸಿದ್ದಾರೆ? ಯಾವಾಗ ನಿಶ್ಚಿತಾರ್ಥ, ಯಾವಾಗ ಮದ್ವೆ ಎಂದೆಲ್ಲ ತಿಳಿದುಕೊಳ್ಳಲು ಮುಂದೆ ಓದಿ......

ವಿಶಾಲ್ ವೆಡ್ಸ್ ವಿತ್ ಅನಿಶಾ
ತೆಲುಗು ಚಿತ್ರರಂಗದಲ್ಲಿ ನಟಿಯಾಗಿರುವ ಅನಿಶಾ ಅಲ್ಲ ರೆಡ್ಡಿ ಜೊತೆ ತಮಿಳು ನಟ ವಿಶಾಲ್ ದಾಂಪತ್ಯ ಜೀವನ ಆರಂಭಿಸಲಿದ್ದಾರೆ. ಈ ಬಗ್ಗೆ ಸ್ವತಃ ವಿಶಾಲ್ ಮತ್ತು ಅನಿಶಾ ಖಚಿತಪಡಿಸಿದ್ದಾರೆ.

ಸದ್ಯದಲ್ಲೇ ಮದುವೆ ದಿನಾಂಕ ಪ್ರಕಟ
ಈ ಬಗ್ಗೆ ತಮಿಳು ಮಾಧ್ಯಮವೊಂದಕ್ಕೆ ಪ್ರತಿಕ್ರಿಸಿರುವ ನಟ ವಿಶಾಲ್ ''ಮದುವೆ ಹಾಗೂ ನಿಶ್ಚಿತಾರ್ಥದ ದಿನಾಂಕ ಸದ್ಯಕ್ಕೆ ಚರ್ಚೆ ಮಾಡಿಲ್ಲ. ಈ ವರ್ಷದಲ್ಲೇ ಮದುವೆ ಆಗುತ್ತೇವೆ. ಶುಕ್ರವಾರ ಎರಡು ಕುಟುಂಬದವರು ಒಟ್ಟಿಗೆ ಸೇರಿ ಈ ಬಗ್ಗೆ ಚರ್ಚೆ ಮಾಡ್ತೀವಿ. ನಂತರ ಅಧಿಕೃತವಾಗಿ ದಿನಾಂಖ ಘೋಷಿಸುತ್ತೇವೆ'' ಎಂದಿದ್ದಾರೆ.

ಯಾರು ಈ ಅನಿಶಾ
ಅನಿಶಾ ಅಲ್ಲ ರೆಡ್ಡಿ ತೆಲುಗು ಇಂಡಸ್ಟ್ರಿಯಲ್ಲಿ ನಟಿಯಾಗಿದ್ದಾರೆ. 2016ರಲ್ಲಿ ತೆರೆಕಂಡಿದ್ದ 'ಪೆಳ್ಳಿ ಚೂಪುಲು' ಚಿತ್ರದಲ್ಲಿ ನಾಯಕ ವಿಜಯ್ ದೇವರಕೊಂಡಗೆ ಮಾಜಿ ಗೆಳತಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಂತರ 2017ರಲ್ಲಿ ರಿಲೀಸ್ ಆಗಿದ್ದ 'ಅರ್ಜುನ್ ರೆಡ್ಡಿ' ಚಿತ್ರದಲ್ಲೂ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕರ್ನಾಟಕದ ಜೊತೆ ನಂಟಿದೆ
ಅಂದ್ಹಾಗೆ, ಅನಿಶಾ ಅಲ್ಲ ರೆಡ್ಡಿ ಸದ್ಯ ಹೈದ್ರಾಬಾದ್ ನಲ್ಲಿ ನೆಲೆಸಿದ್ದರೂ ಹುಟ್ಟಿದ್ದು ಕರ್ನಾಟಕದಲ್ಲಿ ಎಂದು ಹೇಳಲಾಗ್ತಿದೆ. ವಿಜಯ್ ರೆಡ್ಡಿ ಮತ್ತು ಪದ್ಮಜಾ ದಂಪತಿಗಳ ಏಕೈಕ ಪುತ್ರಿ ಅನಿಶಾ. ಹೈದ್ರಾಬಾದ್ ನಲ್ಲಿ ಬಾಲ್ಯ ಶಿಕ್ಷಣ ಮುಗಿಸಿದ ಅನಿಶಾ, ಚಿಕಾಗೋದಲ್ಲಿ ಪದವಿ ಮಾಡಿದ್ದಾರೆ.

ಮಾಡಿದ್ದು ಎರಡೇ ಸಿನಿಮಾ
ಅನಿಶಾ ಇಲ್ಲಿಯವರೆಗೂ ಮಾಡಿರುವುದು ಎರಡೇ ಸಿನಿಮಾ. ಆ ಎರಡು ಚಿತ್ರದಲ್ಲೂ ಪೋಷಕ ಪಾತ್ರ ನಿರ್ವಹಿಸಿದ್ದಾರೆ. ಹಾಡುಗಳನ್ನ ಕೇಳುವುದು, ಸಿನಿಮಾಗಳನ್ನ ನೋಡುವುದು, ಟ್ರಾವಲ್ ಮಾಡುವುದು ಈಕೆಯ ಹವ್ಯಾಸ. 28 ವರ್ಷದ ಈಕೆ ತಮಿಳು ನಟ ವಿಶಾಲ್ ಜೊತೆ ಪ್ರೀತಿಯಲ್ಲಿದ್ದರು ಎನ್ನಲಾಗುತ್ತಿದೆ. ಆ ಪ್ರೀತಿಯೇ ಈಗ ಮದ್ವೆಗೆ ತಿರುಗಿದೆ.

ಯಶ್ ಕೂಡ ಹೇಳಿದ್ದರು
ಕಳೆದ ಕೆಲ ತಿಂಗಳ ಹಿಂದೆ ಕೆಜಿಎಫ್ ಚಿತ್ರದ ಸುದ್ದಿಗೋಷ್ಠಿಯಲ್ಲಿ ತಮಿಳು ಮಾಧ್ಯಮದವರು ನಟ ಯಶ್ ಬಳಿ ಕೇಳಿದ್ದರು. ''ನಿಮ್ಮ ಗೆಳೆಯ ವಿಶಾಲ್ ಮದುವೆ ಆಗೋಕೆ ಹೇಳಿ, ಯಾವಾಗ ಮದ್ವೆ ಆಗ್ತಾರೆ'' ಅಂತ. ಅದಕ್ಕೆ ಯಶ್, ''ಸದ್ಯದಲ್ಲೇ ಆಗ್ತಾರೆ, ನಾವು ಹೇಳಿದ್ದೀವಿ'' ಅಂದಿದ್ದರು.

ವಿಶಾಲ್ ತಂದೆ ಕರ್ನಾಟಕದವರು
ಅಂದ್ಹಾಗೆ, ತಮಿಳು ನಿರ್ಮಾಪಕರ ಸಂಘದ ಅಧ್ಯಕ್ಷ ಹಾಗೂ ತಮಿಳು ಕಲಾವಿದರ ಸಂಘದ ಕಾರ್ಯದರ್ಶಿಯಾಗಿರುವ ನಟ ವಿಶಾಲ್ ಅವರ ತಂದೆ ಜಿಕೆ ರೆಡ್ಡಿ ಮೂಲತಃ ಕರ್ನಾಟಕದವರು. ಚೆನ್ನೈಗೆ ಹೋಗಿ ನೆಲೆಸಿರುವ ವಿಶಾಲ್ ತಂದೆ ತೆಲುಗು ಮತ್ತು ತಮಿಳು ಸಿನಿಮಾಗಳನ್ನ ನಿರ್ಮಾಣ ಮಾಡಿದ್ದರು. ನಂತರ ಮಗನನ್ನು ಹೀರೋ ಆಗಿ ಪರಿಚಯ ಮಾಡಿದ್ರು.


Click it and Unblock the Notifications











