For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕದಲ್ಲಿ 'ಕಾಲಾ' ನಿಷೇಧವನ್ನ ಪ್ರಶ್ನಿಸಿದ ತಮಿಳು ನಟ ವಿಶಾಲ್

  By Bharath Kumar
  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲಾ' ಸಿನಿಮಾವನ್ನ ಕರ್ನಾಟಕದಲ್ಲಿ ನಿಷೇಧ ಮಾಡಲಾಗಿದೆ. ಕಾವೇರಿ ವಿವಾದದ ಬಗ್ಗೆ ಕರ್ನಾಟಕದ ವಿರುದ್ಧ ಹೇಳಿಕೆ ನೀಡಿದ್ದ ಹಿನ್ನೆಲೆ ಕನ್ನಡ ಪರ ಸಂಘಟನೆಗಳು ರಜನಿ ಚಿತ್ರವನ್ನ ಬ್ಯಾನ್ ಮಾಡಲು ನಿರ್ಧರಿಸಿದೆ.

  ಈ ನಿರ್ಧಾರಕ್ಕೆ ಕರ್ನಾಟಕ ಜನ, ಕನ್ನಡದ ಹೋರಾಟಗಾರರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ಸೂಚಿಸಿದೆ. ಕರ್ನಾಟಕದಲ್ಲಿ ಕಾಲಾ ನಿಷೇಧ ಮಾಡಿರುವುದನ್ನ ತಮಿಳು ನಟ ವಿಶಾಲ್ ಖಂಡಿಸಿದ್ದಾರೆ.

  'ಕಾಲಾ' ವಿವಾದ: ಅವರು ಮಾಡಿದ್ರೆ ಸರಿ, ನಾವ್ ಮಾಡಿದ್ರೆ ತಪ್ಪಾ.? 'ಕಾಲಾ' ವಿವಾದ: ಅವರು ಮಾಡಿದ್ರೆ ಸರಿ, ನಾವ್ ಮಾಡಿದ್ರೆ ತಪ್ಪಾ.?

  ತಮಿಳು ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷನಾಗಿರುವ ವಿಶಾಲ್ ಕಾಲಾ ಚಿತ್ರವನ್ನ ರಿಲೀಸ್ ಮಾಡಬೇಕು. ಹೀಗೆ ಮಾಡುತ್ತಿರುವುದು ಸರಿಯಿಲ್ಲ'' ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ವಿಶಾಲ್ ಅಭಿವ್ಯಕ್ತಿ ಸ್ವಾತಂತ್ಯದ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ, ವಿಶಾಲ್ ಏನಂದ್ರು.? ಮುಂದೆ ಓದಿ....

  ರಜನಿ ಮಾತನಾಡಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯ

  ರಜನಿ ಮಾತನಾಡಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯ

  ಸೂಪರ್ ಸ್ಟಾರ್ ರಜನಿಕಾಂತ್ ಕಾವೇರಿ ವಿವಾದದ ವಿಚಾರದಲ್ಲಿ ಕರ್ನಾಟಕದ ವಿರುದ್ಧ ಮಾತನಾಡಿರುವುದರ ಪರವಾಗಿ ವಕಾಲತ್ತು ವಹಿಸಿರುವ ತಮಿಳು ನಟ ವಿಶಾಲ್ ''ಕಾವೇರಿ ವಿಷ್ಯದ ಬಗ್ಗೆ ರಜನಿಕಾಂತ್ ಅವರು ಮಾತನಾಡಿರುವುದು ಅವರ ಜವಾಬ್ದಾರಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ
  '' ಎಂದು ಹೇಳಿದ್ದಾರೆ.

  'ಕಾಲಾ' ಯಾಕೆ ನಿಷೇಧ ಮಾಡಲಾಗುತ್ತಿದೆ.?

  'ಕಾಲಾ' ಯಾಕೆ ನಿಷೇಧ ಮಾಡಲಾಗುತ್ತಿದೆ.?

  ರಜನಿಕಾಂತ್ ಅವರ ಅಭಿಪ್ರಾಯವನ್ನ ವಿರೋಧಿಸಿ ''ಅದರ ಪ್ರತೀಕಾರವಾಗಿ 'ಕಾಲಾ' ಚಿತ್ರವನ್ನ ಹೇಗೆ ಕರ್ನಾಟಕದಲ್ಲಿ ತಡೆಯುತ್ತಿದ್ದಾರೆ. ಕರ್ನಾಟಕ ವಾಣಿಜ್ಯ ಮಂಡಳಿ ಮತ್ತು ನನ್ನ ಸಹೋದರರು ಈ ಸಮಸ್ಯೆಯನ್ನ ಬಗೆಹರಿಸುತ್ತಾರೆ ಎಂಬ ಭರವಸೆ ನನಗೆ ಇದೆ'' ಎಂದು ವಿಶಾಲ್ ಟ್ವೀಟ್ ಮಾಡಿದ್ದಾರೆ.

  ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದ ತಮಿಳು ಚಿತ್ರಗಳುಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದ ತಮಿಳು ಚಿತ್ರಗಳು

  ನಾವೆಲ್ಲ ಭಾರತೀಯರು

  ಇನ್ನು ಇಷ್ಟೆಲ್ಲಾ ಹೇಳಿದ ನಟ ವಿಶಾಲ್ ''ಅಂತಿಮವಾಗಿ ನಾವೆಲ್ಲ ಭಾರತೀಯರು'' ಎಂದು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಇದು ಸಹಜವಾಗಿ ಕನ್ನಡಿಗರನ್ನ ಮತ್ತು ಕರ್ನಾಟಕ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಟ್ವೀಟ್ ಮೂಲಕವೇ ಕಿಡಿಕಾರುತ್ತಿದ್ದಾರೆ.

  ಮುಖ್ಯಮಂತ್ರಿಯನ್ನ ಭೇಟಿ ಮಾಡುತ್ತೇವೆ

  ಮುಖ್ಯಮಂತ್ರಿಯನ್ನ ಭೇಟಿ ಮಾಡುತ್ತೇವೆ

  ಅಗತ್ಯ ಬಿದ್ದರೇ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯನ್ನ ಭೇಟಿ ಮಾಡುತ್ತೇವೆ ತಮಿಳು ನಟ ಹಾಗೂ ತಮಿಳು ನಿರ್ಮಾಪಕರ ಸಂಘದ ಅಧ್ಯಕ್ಷ ವಿಶಾಲ್ ಹೇಳಿದ್ದಾರೆ. ಮತ್ತೊಂದೆಡೆ ಕರ್ನಾಟಕ ಸಿಎಂ ಎಚ್.ಡಿ ಕುಮಾರಸ್ವಾಮಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಜನ ನಿಷೇಧ ಮಾಡಲು ತೀರ್ಮಾನಿಸಿದ್ದಾರೆ ಎಂಬುದು ಗಮನಕ್ಕೆ ಬಂದಿದೆ, ಚರ್ಚೆ ಮಾಡುತ್ತೇವೆ ಎಂದಿದ್ದರು.

  ಕಾಲಾ ಸಿನಿಮಾ ಪ್ರದರ್ಶನದ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆಕಾಲಾ ಸಿನಿಮಾ ಪ್ರದರ್ಶನದ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ

  ನಾವೆಲ್ಲ ಭಾರತೀಯರು ಎಂದು ಈಗ ಅರ್ಥವಾಯಿತು

  ''ಡಿಯರ್ ವಿಶಾಲ್ ಅವರೇ ನಾವೆಲ್ಲ ಭಾರತೀಯರು ಎಂದು ತಮಿಳುನಾಡಿನ ಜನತೆಗೆ ಈಗ ಅರ್ಥವಾಯಿತಾ. ಕರ್ನಾಟಕದಲ್ಲಿ ಯಾರೋಬ್ಬರು ರಜನಿಕಾಂತ್ ಸಿನಿಮಾ ನೋಡುವುದಿಲ್ಲ. ನೋಡಬೇಕಾ ಅಥವಾ ಬೇಡವಾ ಎನ್ನುವುದು ನಮ್ಮ ಸ್ವಾತಂತ್ಯ. ನಮಗೆ ಹೇಳಲು ಬರಬೇಡಿ. ನಾವು ಕಾಲಾ ಚಿತ್ರವನ್ನ ನಿಷೇಧ ಮಾಡುತ್ತೇವೆ'' ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  "ಕಾಲಾ" ಚಿತ್ರ ಬಿಡುಗಡೆ ವಿರೋಧಿಸಿ ಪ್ರತಿಭಟನೆ

  ಅವಶ್ಯಕತೆ ಇದ್ದಾಗ ಸಹೋದರ ಅಂತೀರಾ.?

  ನಿಮ್ಮ ಸಿನಿಮಾಗಳ ಬಂಡವಾಳ ಗಳಿಸಲು ಕರ್ನಾಟಕ ಬೇಕು, ಆಗ ಇಲ್ಲಿಯವರನ್ನ ಸಹೋದರರು ಎನ್ನುತ್ತೀರಾ. ಅದೇ ಕಾವೇರಿ ವಿಷ್ಯ ಬಂದಾಗ, ಇಲ್ಲಿಯವರನ್ನ ಶತ್ರುಗಳಂತೆ ಕಾಣುತ್ತೀರಾ. ಹೀಗಿದ್ದ ಮೇಲೆ ನೀವು ಬಿಸಿನೆಸ್ ಮಾಡಲು ನಾವು ಯಾಕೆ ಅವಕಾಶ ಕೊಡಬೇಕು ಎನ್ನುವುದಕ್ಕೆ ಒಂದೇ ಒಂದು ಕಾರಣ ನೀಡಿ ನೋಡೋಣ'' ಎಂದು ಪ್ರಶ್ನಿಸುತ್ತಿದ್ದಾರೆ.

  English summary
  Pro-Kannada Organisations has called for a ban on Rajinikanth's upcoming film Kaala, actor and President of the Tamil Film Producers' Council Vishal has said that he will meet the Chief Minister of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X