»   » ಎನ್.ಆರ್.ಐ ವ್ಯಕ್ತಿಗೆ ವಂಚಿಸಿದ ಖತರ್ನಾಕ್ ನಟಿ

ಎನ್.ಆರ್.ಐ ವ್ಯಕ್ತಿಗೆ ವಂಚಿಸಿದ ಖತರ್ನಾಕ್ ನಟಿ

Posted By:
Subscribe to Filmibeat Kannada
ಎನ್.ಆರ್.ಐ ವ್ಯಕ್ತಿಗೆ ವಂಚಿಸಿದ ಖತರ್ನಾಕ್ ನಟಿ | Filmibeat Kannada

ಜರ್ಮನ್ ಮೂಲದ ಸಾಫ್ಟ್ ವೇರ್ ವ್ಯಕ್ತಿಗೆ ಮದುವೆಯಾಗುವುದಾಗಿ ನಂಬಿಸಿ ನಟಿಯೊಬ್ಬಳು ವಂಚನೆ ಮಾಡಿರುವ ಘಟನೆ ತಮಿಳು ಚಿತ್ರರಂಗದಲ್ಲಿ ನಡೆದಿದೆ. ಸಿನಿಮಾ ಸ್ಟೈಲ್ ನಲ್ಲೇ ಸಂಚು ಹಾಕಿ, ಎನ್.ಆರ್.ಐ ಗೆ ಮೋಸ ಮಾಡಿರುವ ನಟಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಜರ್ಮನಿಯ ಆಟೋಮೊಬೈಲ್ ಸಾಫ್ಟ್ ವೇರ್ ಆಗಿ ಕೆಲಸ ಮಾಡುತ್ತಿದ್ದ ಜಿ ಬಾಲಮುರುಗನ್, ಮ್ಯಾಟ್ರಿಮೇನಿಯಾದಲ್ಲಿ ತಮ್ಮ ವಿವರಗಳನ್ನ ಹಾಕಿಕೊಂಡಿದ್ದರು. ಅಲ್ಲಿಂದ ಪರಿಚಯವಾದ ಶ್ರುತಿ, ತನ್ನನ್ನು ಮೈಥಲಿ ವೆಂಕಟೇಶ್ ಎಂದು ಹೇಳಿಕೊಂಡು ಸ್ನೇಹ ಬೆಳಸಿದ್ದಳು. ಮದುವೆ ಆಗೋಣ ಎಂದು ನಂಬಿಸಿ ಮೋಸ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

ಬಾಲಮುರುಗನ್ ಜೊತೆಗಿನ ಸ್ನೇಹವನ್ನ ಚೆನ್ನಾಗಿ ಬಳಸಿಕೊಂಡ ಶ್ರುತಿ, ತನಗೆ ಬ್ರೈನ್ ಟ್ಯೂಮರ್ ಇದೆ ಹಾಗೂ ನನ್ನ ತಾಯಿಗೆ ಹೃದಯ ಸಮಸ್ಯೆ ಇದೆ ಎಂದು ನಂಬಿಸಿ, ಸುಮಾರು 41 ಲಕ್ಷ ರೂಪಾಯಿಯನ್ನ ನಾಮಹಾಕಿದ್ದಾರೆ.

Tamil Actress cheated to nri with marriage promise

ನಂತರ ಶ್ರುತಿ ಫೋಟೋವನ್ನ ಸ್ನೇಹಿತರಿಗೆ ಕಳುಹಿಸಿದ್ದ ಬಾಲಮುರಗನ್ ಗೆ ದೊಡ್ಡ ಆಶ್ಚರ್ಯ ಕಾದಿತ್ತು. ಶ್ರುತಿ ಇದೇ ರೀತಿ ಹಲವರಿಗೆ ವಂಚನೆ ಮಾಡಿರುವ ಬಗ್ಗೆ ತಿಳಿಯಿತು. ನಂತರ ಪೊಲೀಸರಿಗೆ ದೂರು ನೀಡಿದ ಬಾಲಮುರುಗನ್. ದೂರು ದಾಖಲಿಸಿಕೊಂಡ ಪೊಲೀಸರು ಶ್ರುತಿಯನ್ನ ಬಂಧಿಸಿದ್ದಾರೆ.

ಪೊಲೀಸರು ಈಕೆಯನ್ನ ಬಂಧಿಸಿದ್ದು, ಶ್ರುತಿ ತಮಿಳು ಚಿತ್ರದ ನಟಿ ಎಂದು ಗುರುತಿಸಿದ್ದಾರೆ. ಇನ್ನು ಬಿಡುಗಡೆಯಾಗದ 'ಆಡಿ ಪೋನ ಅವನಿ' ಚಿತ್ರದಲ್ಲಿ ನಟಿಸಿರುವ ಶ್ರುತಿ ಹಾಗೂ ಈಕೆಯ ತಂದೆ, ತಾಯಿ, ಮತ್ತು ಸಹೋದರ ಎಂದು ಹೇಳಿದ್ದ ಮೂರು ಮಂದಿಯನ್ನ ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

English summary
Police on Thursday arrested a Kollywood actor, her mother, brother, and a man posing as her father for cheating a Germany-based software engineer of Rs 41 lakh. Police identified the actor as Shruthi P, 21, a star of unreleased movie 'Aadi Pona Aavani'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X