RCB ಸೋತಿದ್ದಕ್ಕೆ ತಮಿಳು ನಟಿ ಕಸ್ತೂರಿ ಶಂಕರ್ ವ್ಯಂಗ್ಯ: ಅಣಕಿಸೋದ್ರಲ್ಲೂ ಸ್ವಂತಿಕೆ ಇಲ್ವಾ?

By ಫಿಲ್ಮಿಬೀಟ್ ಡೆಸ್ಕ್

2024 ಐಪಿಎಲ್‌ನಿಂದ ಆರ್‌ಸಿಬಿ ಹೊರಬಿದ್ದಿದೆ. ಈ ಬಾರಿಯಾದರೂ ಕಪ್ ಗೆಲ್ಲಬಹುದು ಅನ್ನೋ ನಿರೀಕ್ಷೆಯಲ್ಲಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ಆದರೆ, ಸತತ ಸೋಲುಗಳನ್ನು ಕಂಡಿದ್ದ ಆರ್‌ಸಿಬಿ ನಿರಂತರ ಆರು ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ಗೆ ಪ್ರವೇಶ ಮಾಡಿತ್ತು. ಈ ವೇಳೆ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತ್ತು.

ಆರ್‌ಸಿಬಿಯ ಸಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್‌ ಕಿಂಗ್ಸ್ ಅನ್ನು ಸೋಲಿಸಿದ ಬೆನ್ನಲ್ಲೇ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಇಡೀ ರಾತ್ರಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. ಸತತ ಸೋಲುಗಳಿಂದ ಕೆಂಗಣ್ಣಿಗೆ ಗುರಿಯಾಗಿದ್ದ ಆರ್‌ಸಿಬಿ ಗ್ರೇಟ್ ಕಮ್‌ಬ್ಯಾಕ್‌ಗೆ ಅಭಿಮಾನಿಗಳು ಥ್ರಿಲ್ ಆಗಿದ್ದರು.

Tamil actress Kasthuri Shankar made a satirical post about RCB losing the match against RR in IPL

ಆದರೆ, ಸಿಎಸ್‌ಕೆ ತಂಡವನ್ನು ಸೋಲಿಸಿದ ಬಳಿಕ ಹಳೆಯ ಸಿಟ್ಟುಗಳನ್ನು ಆರ್‌ಸಿಬಿ ಫ್ಯಾನ್ಸ್ ತೀರಿಸಿಕೊಂಡಿದ್ದರು. ಸಿಎಸ್‌ಕೆ ಫ್ಯಾನ್ಸ್ ಅನ್ನು ಸೋಶಿಯಲ್ ಮೀಡಿಯಾಗಳಲ್ಲಿ ರೋಸ್ಟ್ ಮಾಡಿ ಸೇಡು ತೀರಿಸಿಕೊಂಡಿದ್ದರು. ಇದರಿಂದ ಬೇಸತ್ತು ಹೋಗಿದ್ದ ಫ್ಯಾನ್ಸ್ ಈಗ ಆರ್‌ಸಿಬಿ ಸೋಲನ್ನು ಸಂಭ್ರಮಿಸುತ್ತಿದ್ದಾರೆ. ಅದರಲ್ಲೂ ತಮಿಳು ನಟಿ ಕಸ್ತೂರಿ ಶಂಕರ್ ಆರ್‌ಸಿಬಿ ಸೋಲನ್ನು ಸಂಭ್ರಮಿಸಿ ಹಾಕಿದ ಪೋಸ್ಟ್ ಬಗ್ಗೆ ಕಾಮೆಂಟ್‌ಗಳು ವ್ಯಕ್ತವಾಗುತ್ತಿವೆ.

ಇನ್ನು ಕಸ್ತೂರಿ ಶಂಕರ್ ಯಾರು ಅಂತ ವಿಶೇಷವಾಗಿ ಹೇಳಬೇಕಿಲ್ಲ. ತಮಿಳಿನ ನಟಿಯಾಗಿದ್ದರೂ, ಕನ್ನಡದಲ್ಲೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಜಾಣ' ಸಿನಿಮಾದಲ್ಲಿ ನಟಿಸಿದ್ದರು. ಹಾಗೇ 'ತುತ್ತಾಮುತ್ತ', 'ಹಬ್ಬ', ಪ್ರೇಮಕ್ಕೆ ಸೈ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೇ ನಟಿಯೀಗ ಆರ್‌ಸಿಬಿ ಸೋತಿದ್ದನ್ನು ಸಂಭ್ರಮಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

Tamil actress Kasthuri Shankar made a satirical post about RCB losing the match against RR in IPL

ನಟಿ ಕಸ್ತೂರಿ ಶಂಕರ್ ಬೆಂಗಳೂರು ರೈಲು ನಿಲ್ದಾಣದಲ್ಲಿದ್ದ ಬೋರ್ಡ್‌ ಫೋಟೊ ಹಾಕಿ "ಸ್ಥಳೀಯರಿಗೆ ವರ್ಷಗಳಿಂದ ಇದು ತಿಳಿದಿದೆ" ಎಂದು ಬರೆದು, ಈ ಸಲ, ಇಲ್ಲ ಎಂದು ಹ್ಯಾಶ್‌ ಟ್ಯಾಗ್ ಮಾಡಿದ್ದಾರೆ. ಈ ಪೋಸ್ಟ್ ನೋಡಿ ಸಿಎಸ್‌ಕೆ ಅಭಿಮಾನಿಗಳು ಸಾಥ್ ಕೊಟ್ಟಿದ್ದಾರೆ. ಆದರೆ, ಕೆಲವರು ಕಸ್ತೂರಿ ಶಂಕರ್ ಆರ್‌ಸಿಬಿ ಆಡಿಕೊಂಡಿದ್ದೇನೋ ಸರಿ. ಇದರಲ್ಲಾದರೂ ಸ್ವಂತಿಕೆ ತೋರಿಸಬಾರದಿತ್ತಾ? ಅಂತ ಪ್ರಶ್ನೆ ಮಾಡುತ್ತಿದ್ದಾರೆ.

ಆರ್‌ಸಿಬಿ ಸೋಲು ಕಾಣುತ್ತಿದ್ದಂತೆ ಸಿಎಸ್‌ಕೆಯ ಆಟಗಾರ ತುಷಾರ್ ದೇಶಪಾಂಡೆ ಇದೇ ರೈಲ್ವೆ ನಿಲ್ದಾಣದ ಫೋಟೊ ಹಂಚಿಕೊಂಡಿದ್ದ. ಅದರಲ್ಲಿ ಇಂಗ್ಲಿಷ್‌ನಲ್ಲಿ BENGALURU CANT(Cantonment)ಎಂದು ಬರೆಯಲಾಗಿದೆ. ಇದನ್ನು ಸಾಂಕೇತಿಕವಾಗಿ ಬಳಿಸಿಕೊಂಡ "ಬೆಂಗಳೂರಿಗೆ ಆಗಲ್ಲ" ಎಂಬ ಅರ್ಥದಲ್ಲಿ ಪೋಸ್ಟ್ ಮಾಡಲಾಗಿತ್ತು. ಅದನ್ನು ಕಸ್ತೂರಿ ಶಂಕರ್ ಕಾಪಿ ಮಾಡಿ, ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

ಈ ಕಾಪಿ ಪೋಸ್ಟ್‌ಗೆ ಸಿಎಸ್‌ಕೆ ಫ್ಯಾನ್ಸ್ ಸಾಥ್ ಕೊಟ್ಟಿದ್ದರೆ, ಮತ್ತೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಮೊದಲು ತುಷಾರ್ ದೇಶಪಾಂಡೆ ಪೋಸ್ಟ್ ಮಾಡಿದ್ದೆಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಅಣಕಿಸಲು ಹೋಗಿ ಪೋಸ್ಟ್ ಅನ್ನೇ ಕಾಪಿ ಮಾಡಿದ್ದಾರೆ ಎಂದೂ ಹೇಳುತ್ತಿದ್ದಾರೆ. ಒಟ್ನಲ್ಲಿ ಆರ್‌ಸಿಬಿ ಸೋಲನ್ನು ಸಂಭ್ರಮಿಸಲು ಹೋಗಿ ಟ್ರೋಲ್ ಆಗುತ್ತಿದ್ದಾರೆ.

More from Filmibeat

English summary
Actress Kasturi Shankar satirical against RCB:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X