ಸ್ಟಾರ್ ನಟಿಯ ಮಾಜಿ ಗಂಡನ ಜೊತೆ ಸಾಯಿ ಪಲ್ಲವಿ ಮದುವೆ?
ಸೌತ್ ಸಿನಿ ಇಂಡಸ್ಟ್ರಿಯ ಕ್ರಶ್ ಸಾಯಿ ಪಲ್ಲವಿ ಮದುವೆ ವಿಚಾರ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮಲಯಾಳಂನ 'ಪ್ರೇಮಂ' ಸಿನಿಮಾದ ಮೂಲಕ ಖ್ಯಾತಿಗಳಿಸಿದ್ದ ಪಲ್ಲವಿ ಯುವಕರ ಹಾರ್ಟ್ ಫೇವರಿಟ್ ನಟಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ನಾನು ಮದುವೆಯಾಗದಿರ ನಿರ್ಧರಿಸಿದ್ದೇನೆ ಎಂದು ಬಹಿರಂಗ ಹೇಳಿಕೆ ನೀಡಿ ಅಚ್ಚರಿ ಉಂಟು ಮಾಡಿದ್ದರು. ಆದ್ರೀಗ ಮತ್ತೆ ಮದುವೆ ಆಲುಗುವ ನಿರ್ಧಾರ ಮಾಡಿದ್ದಾರೆ ಎಂಬ ಸುದ್ದಿ ಬ್ರೇಕ್ ಆಗಿದೆ. ಈ ಸುದ್ದಿ ಈಗ ಸಾಯಿ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಅಂದ್ಹಾಗೆ, ಸಾಯಿ ಪಲ್ಲವಿ ಕೈ ಹಿಡಿಯುತ್ತಿರುವ ಹುಡುಗ ತಮಿಳು ಚಿತ್ರರಂಗದ ನಿರ್ದೇಶಕ ಎ.ಎಲ್ ವಿಜಯ್. ಈಗಾಗಲೇ ವಿಜಯ್ ನಿರ್ದೇಶನದ ಒಂದು ಸಿನಿಮಾದಲ್ಲಿ ಸಾಯಿ ಪಲ್ಲವಿ ಅಭಿನಯಿಸಿದ್ದಾರೆ. ಚಿತ್ರೀಕರಣ ಸಮಯದಲ್ಲಿ ಪರಿಚಯವಾದ ವಿಜಯ್ ನಂತರ ಅವರ ಮೇಲೆ ಲವ್ ಆಗಿದೆಯಂತೆ. ಅಷ್ಟಕ್ಕೂ ವಿಜಯ್ ಬೇರೆ ಯಾರೂ ಆಲ್ಲ. ಸೌತ್ ಸ್ಟಾರ್ ನಟಿಯ ಮಾಜಿ ಪತಿ. ಏನಿದು ಸಾಯಿ ಪಲ್ಲವಿ ಮದುವೆ ಕಥೆ? ಮುಂದ ಓದಿ....

ಯಾರು ಈ ವಿಜಯ್?
ತಮಿಳು ಚಿತ್ರರಂಗದ ನಿರ್ದೇಶಕ ವಿಜಯ್. ಸಾಯಿ ಪಲ್ಲವಿ ಅಭಿನಯದ 'ದಿಯಾ' ಚಿತ್ರವನ್ನು ವಿಜಯ್ ನಿರ್ದೇಶನ ಮಾಡಿದ್ದರು. ಇನ್ನು ಅಚ್ಚರಿ ಅಂದ್ರೆ ನಟಿ ಅಮಲಾ ಪೌಲ್ ಅವರ ಮಾಜಿ ಪತಿ. 2014 ರಲ್ಲಿ ಅಮಲಾ ಪೌಲ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ವಿಜಯ್ 2017 ರಲ್ಲಿ ವಿಚ್ಛೇದನ ಪಡೆದು ದೂರವಾಗಿದ್ದರು. ಇಬ್ಬರ ಮದುವೆ ಮರಿದು ಬೀಳುತ್ತಿದ್ದಂತೆ ವಿಜಯ್ ಹೆಸರು ನಟಿ ಸಯೇಶಾ ಜೊತೆ ಕೇಳಿ ಬಂದಿತ್ತು. ಆದ್ರೀಗ ಸಾಯಿ ಪಲ್ಲವಿ ಜೊತೆ ಮದುವೆಯಾಗುತ್ತಿದ್ದಾರೆ ಎನ್ನುವ ಹಾಟ್ ನ್ಯೂಸ್ ಹರಿದಾಡುತ್ತಿದೆ.

ಮದುವೆಯಾಗಲ್ಲ ಎಂದಿದ್ದ ಪಲ್ಲವಿ
ಈ ಹಿಂದೆ ಸಾಯಿ ಪಲ್ಲವಿ ಮದುವೆ ಆಗುವುದಿಲ್ಲ ಎಂದು ಶಾಕಿಂಗ್ ವಿಚಾರ ಹೇಳಿದ್ರು. ''ನನ್ನ ಭವಿಷ್ಯವನ್ನ ನನ್ನ ಪೋಷಕರಿಗಾಗಿ ಮೀಸಲಿಡುತ್ತೇನೆ. ಅವರ ಯೋಗಕ್ಷೇಮ ವಿಚಾರಿಸಿಕೊಳ್ಳುವುದು ನನ್ನ ಜವಾಬ್ದಾರಿ. ನನ್ನ ಕುಟುಂಬದ ಜೊತೆ ಇರಲು ನಾನು ನಿರ್ಧರಿಸಿದ್ದೇನೆ. ಮದುವೆಯಿಂದ ನನ್ನ ಜವಾಬ್ದಾರಿಯನ್ನ ಪೂರೈಸಲು ಸಾಧ್ಯವಿಲ್ಲ. ಹಾಗಾಗಿ ಮದುವೆ ಆಗಲ್ಲ'' ಎಂದು ಹೇಳುವ ಮೂಲಕ ಮದುವೆ ನೋ ಎಂದಿದ್ದರು.

ಮದುವೆ ಬಗ್ಗೆ ನಿರ್ದೇಶಕ ವಿಜಯ್ ಸ್ಪಷ್ಟನೆ
ಸದ್ಯ ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಸಾಯಿ ಪಲ್ಲವಿ ಮದುವೆ ವಿಚಾರವೇ ಚರ್ಚೆಯಾಗುತ್ತಿದೆ. ಇದು ಅತಿರೇಕಕ್ಕೆ ಹೋಗುತ್ತಿದ್ದಂತೆ ನಿರ್ದೇಶಕ ವಿಜಯ್ ಸ್ಪಷ್ಟನೆ ನೀಡಿದ್ದಾರೆ. ಇದು ಸುಳ್ಳು ಸುದ್ದಿ. ಸಾಯಿ ಪಲ್ಲವಿ ನನಗೆ ಸಹೋದರಿಗಿಂತ ಹೆಚ್ಚು ಎಂದು ಹೇಳುವ ಮೂಲಕ ಮದುವೆ ಬಗೆಗಿನ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಇದುವರೆಗೂ ಸಾಯಿ ಪಲ್ಲವಿ ಮಾತ್ರ ಈ ಬಗ್ಗೆ ಏನು ಪ್ರತಿಕ್ರಿಯೆ ನೀಡಿಲ್ಲ.

ಸಾಯಿ ಪಲ್ಲವಿ ಮುಂದಿನ ಸಿನಿಮಾಗಳು
ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡುವ ಸಾಯಿ ಪಲ್ಲವಿ ಸದ್ಯ ತಮಿಳು ಮತ್ತು ತೆಲುಗು ಎರಡು ಭಾಷೆಯಲ್ಲೂ ಬ್ಯುಸಿಯಾಗಿದ್ದಾರೆ. ತಮಿಳಿನ 'ಎನ್ ಜಿ ಕೆ' ಚಿತ್ರದ ರಿಲೀಸ್ ಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ನಟ ಸೂರ್ಯ ಜೊತೆ ಅಭಿನಯಿಸಿದ್ದಾರೆ. ಇನ್ನು ಮಲಯಾಳಂನ 'ಅಥಿರನ್ ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಅನೇಕ ವರ್ಷಗಳ ಬಳಿಕಾ ಮತ್ತೆ ಮಲಯಾಳಂನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಇನ್ನು ಸಾಕಷ್ಟು ಚಿತ್ರಗಳು ಪ್ರೇಮಂ ಬೆಡಗಿಯ ಕೈಯಲ್ಲಿವೆ.


Click it and Unblock the Notifications











