For Quick Alerts
  ALLOW NOTIFICATIONS  
  For Daily Alerts

  ಪುನೀತ್ 'ದ್ವಿತ್ವ' ಚಿತ್ರಕ್ಕಾಗಿ ಮತ್ತೆ ಕನ್ನಡಕ್ಕೆ ಬರ್ತಾರಾ ತಮಿಳಿನ ಈ ಖ್ಯಾತ ನಟಿ?

  |

  ಪವರ್ ಸ್ಟಾರ್ ಪುನೀತ್ ನಟನೆಯ ಹೊಸ ಸಿನಿಮಾ 'ದ್ವಿತ್ವ' ಸಿಕ್ಕಾಪಟ್ಟೆ ಕುತೂಹಲ ಹುಟ್ಟುಹಾಕಿದೆ. ಪವನ್ ಕುಮಾರ್ ನಿರ್ದೇಶನ ಚಿತ್ರ ಅಂದ್ಮೇಲೆ ಏನಾದರೊಂದು ವಿಶೇಷತೆ ಇದ್ದೆ ಇರುತ್ತದೆ. ಅದರಲ್ಲೂ ಪವರ್ ಸ್ಟಾರ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅಂದರೆ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

  ಸದ್ಯ ಚಿತ್ರತಂಡ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಸದ್ಯ ಕೇಳಿಬರುತ್ತಿರುವ ಮಾತು ಎಂದರೆ ಪವರ್ ಸ್ಟಾರ್ ಗೆ ನಾಯಕಿಯಾಗಿ ಯಾರು ಎನ್ನುವುದು. ಸಿನಿಮಾ ಅನೌನ್ಸ್ ಮಾಡಿದಾಗಿನಿಂದನೂ ನಾಯಿಕ ಚರ್ಚೆ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಈಗಾಗಲೇ ಚಿತ್ರಕ್ಕೆ ನಾಯಕಿ ಫಿಕ್ಸ್ ಆಗಿದ್ದಾರೆ ಎನ್ನಲಾಗುತ್ತಿದೆ.

  ಅಪ್ಪು ಜೊತೆ ತಮಿಳಿನ ಖ್ಯಾತ ನಟಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅದು ಮತ್ಯಾರು ಅಲ್ಲ ಖ್ಯಾತ ನಟಿ ತ್ರಿಷಾ ಕೃಷ್ಣನ್. ದ್ವಿತ್ವ ಸಿನಿಮಾದಲ್ಲಿ ನಟಿ ತ್ರಿಷಾ ನಾಯಕಿಯಾಗಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನುವ ಸುದ್ದಿ ಕೇಳಿಬರುತ್ತಿದೆ. ಅಂದಹಾಗೆ ತ್ರಿಷಾ ಈಗಾಗಲೇ ಪುನೀತ್ ಜೊತೆ ನಾಯಕಿಯಾಗಿ ನಟಿಸಿದ್ದಾರೆ. 2014ರಲ್ಲಿ ತೆರೆಗೆ ಬಂದ 'ಪವರ್ ಸ್ಟಾರ್' ಸಿನಿಮಾದಲ್ಲಿ ತ್ರಿಷಾ ನಟಿಸುವ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.

  ಇದೀಗ ದ್ವಿತ್ವ ಮೂಲಕ ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ ಎನ್ನುವ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಈಗಾಗಲೇ ತ್ರಿಷಾ ಬಳಿ ಮಾತುಕತೆ ನಡೆದಿದ್ದು, ಕಥೆ ಕೇಳಿ ತ್ರಿಷಾ ತುಂಬಾ ಇಷ್ಟಪಟ್ಟಿದ್ದಾರಂತೆ. ಪವರ್ ಸ್ಟಾರ್ ಜೊತೆ ನಟಿಸಲು ತ್ರಿಷಾ ಗ್ರೀನ್ ಸಿಗ್ನಲ್ ನೀಡಿದ್ದಾರೋ ಇಲ್ಲವೋ ಎನ್ನುವ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

  ಜೀವನ ಪಯಣ ಮುಗಿಸಿದ ಕನ್ನಡದ ಯಶಸ್ವಿ ನಾಯಕಿ

  ನಿರ್ದೇಶಕ ಪವರ್ ಕುಮಾರ್ ಯು ಟರ್ನ್ ಸಿನಿಮಾ ಬಳಿಕ ಕನ್ನಡದಲ್ಲಿ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ. ಸ್ಯಾಂಡಲ್ ವುಡ್ ನಲ್ಲಿ ಅಪರೂಪದ ಕಾಂಬಿನೇಷನ್ ಒಟ್ಟಾಗಿರುವುದು ಚಿತ್ರಾಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಸದ್ಯ ಪವರ್ ಸ್ಟಾರ್ ಜೇಮ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿಸಿ ದ್ವಿತ್ವ ಪ್ರಾರಂಭ ಮಾಡಲಿದ್ದಾರೆ. ಪೋಸ್ಟರ್ ಮೂಲಕವೇ ನಿರೀಕ್ಷೆ ಹೆಚ್ಚಿಸಿರುವ ದ್ವಿತ್ವ ಹೇಗಿರಲಿದೆ ಎಂದು ನೋಡಲು ಇನ್ನು ಅನೇಕ ದಿನಗಳು ಕಾಯಲೇ ಬೇಕು.

  English summary
  Tamil Actress Trisha likely to reunite opposite puneeth rajkumar again in Dvitva movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X