»   » ಬಹುಭಾಷಾ ನಟಿ ಅಪಹರಣ ಬಳಿಕ ಹೊಸ ಬಾಂಬ್ ಸಿಡಿಸಿದ ವರಲಕ್ಷ್ಮಿ ಶರತ್ ಕುಮಾರ್.!

ಬಹುಭಾಷಾ ನಟಿ ಅಪಹರಣ ಬಳಿಕ ಹೊಸ ಬಾಂಬ್ ಸಿಡಿಸಿದ ವರಲಕ್ಷ್ಮಿ ಶರತ್ ಕುಮಾರ್.!

Posted By:
Subscribe to Filmibeat Kannada

ಮಲಯಾಳಂ ನಟಿ ಅಪಹರಣ ಹಾಗೂ ಲೈಂಗಿಕ ಕಿರುಕುಳ ಪ್ರಕರಣದ ಬೆನ್ನಲ್ಲೇ ಇದೀಗ ತಮಿಳು ನಟಿ ವರಲಕ್ಷ್ಮಿ ಬಾಂಬ್ ಸಿಡಿಸಿದ್ದಾರೆ.

ತಮಿಳಿನ ಪ್ರತಿಷ್ಠಿತ ಚಾನಲ್ ಮುಖ್ಯಸ್ಥರೊಬ್ಬರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರಯತ್ನಿಸಿದ್ದರು ಎಂಬ ಸ್ಪೋಟಕ ಮಾಹಿತಿಯನ್ನ ಟ್ವಿಟ್ಟರ್ ನಲ್ಲಿ ಹೊರಹಾಕಿದ್ದಾರೆ.[ನಟಿಗೆ ಲೈಂಗಿಕ ಕಿರುಕುಳ: ಸಿಡಿದೆದ್ದ ಸ್ಯಾಂಡಲ್ ವುಡ್ ನಾಯಕಿಯರು]

ಇಂತಹ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಿದರು ಅವರನ್ನ ಏನೂ ಮಾಡಲ್ಲ. ನಾವು ಸುಮ್ಮನೆ ಕುಳಿತುಕೊಳ್ಳಬಾರದು ಎಂದು ಮಹಿಳೆಯರ ಸುರಕ್ಷತೆ ಬಗ್ಗೆ ನಟಿ ವರಲಕ್ಷ್ಮಿ ಆತಂಕ ವ್ಯಕ್ತಪಡಿಸಿದ್ದಾರೆ.

ಚಾನಲ್ ಮುಖ್ಯಸ್ಥನಿಂದ ಲೈಂಗಿಕ ಕಿರುಕುಳ

ತಮಿಳು ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರ ಬಳಿ ವಾಹಿನಿಯ ಎಕ್ಸಿಕ್ಯೂಟಿವ್ ಒಬ್ಬರು ಅಸಭ್ಯವಾಗಿ ನಡೆದುಕೊಂಡಿದ್ದರು ಎಂಬ ಶಾಕಿಂಗ್ ಸುದ್ದಿಯನ್ನ ತಮ್ಮ ಟ್ವಿಟ್ಟರ್ ನಲ್ಲಿ ಬಹಿರಂಗ ಪಡಿಸಿದ್ದಾರೆ.[ಗುಡುಗಿದ ಕಿಚ್ಚ ಸುದೀಪ್: 'ಕಾಮುಕನನ್ನ ಗುಂಡಿಟ್ಟು ಕೊಲ್ಲಬೇಕು']

ವರಲಕ್ಷ್ಮಿ ಆರೋಪವೇನು?

''ನಾನು ಟಿವಿ ಚಾನೆಲ್ ನ ಕಾರ್ಯಕ್ರಮದಲ್ಲಿ ಅರ್ಧ ಗಂಟೆ ಭಾಗಿಯಾಗಿದ್ದೆ. ಕಾರ್ಯಕ್ರಮ ಮುಗಿದ ಬಳಿಕ ಚಾನಲ್ ಎಕ್ಸಿಕ್ಯೂಟಿವ್ ''ನಾವು ಹೊರಗೆ ಎಲ್ಲಾದರೂ ಭೇಟಿಯಾಗೋಣವೇ'' ಅಂತಾ ಅಸಭ್ಯವಾಗಿ ಕೇಳಿದ್ದರು. ಅದಕ್ಕೆ ನಾನು ''ಕೆಲಸದ ವಿಚಾರ ಚರ್ಚಿಸಲು ಭೇಟಿಯಾಗಬೇಕಾ'' ಎಂದು ಪ್ರಶ್ನಿಸಿದೆ. ಅದಕ್ಕೆ ಆತ ''ಅದಕ್ಕಲ್ಲ ಬೇರೆ ವಿಷಯಕ್ಕೆ ಎಂದು ಅಸಭ್ಯವಾಗಿ ಪ್ರತಿಕ್ರಿಯಿಸಿದ್ದರು'' ಎಂದು ವರಲಕ್ಷ್ಮಿ ತಮ್ಮ ಟ್ವಿಟ್ಟರ್ ನಲ್ಲಿ ಆರೋಪಿಸಿದ್ದಾರೆ.

ಆತನ ವರ್ತನೆಯನ್ನ ವಿರೋಧಿಸಿದ್ದ ನಟಿ

ವಾಹಿನಿ ಮುಖ್ಯಸ್ಥನ ವರ್ತನೆಯನ್ನ ಖಂಡಿಸಿದ ಆ ನಟಿ ಕೋಪದಿಂದ ಪ್ರಿತಿಕ್ರಿಯಿಸಿ ಹೊರ ಬಂದಿದ್ದರಂತೆ.[ನಟಿ ಮೇಲಿನ ದೌರ್ಜನ್ಯದ ವಿರುದ್ಧ ಶಿಲ್ಪಾ ಗಣೇಶ್ ಕೆಂಡಾಮಂಡಲ]

ಎಫ್ಐಆರ್ ಹಾಕಿದ್ರು ಪ್ರಯೋಜನ ಇಲ್ಲ

''ಇಂತವರ ಮೇಲೆ ಪೊಲೀಸ್ ದೂರು ನೀಡಿ, ಎಫ್ಐಆರ್ ದಾಖಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಒಂದು ವೇಳೆ ಎಫ್ಐಆರ್ ದಾಖಲಿಸಿದರು ಅದು ಕೆಲ ದಿನಗಳ ಬಳಿಕ ಡೈಲ್ಯೂಟ್ ಆಗುತ್ತೇ'' ಎಂದು ತಮ್ಮ ಅಸಹಾಯಕತೆಯನ್ನ ವ್ಯಕ್ತಪಡಿಸಿದ್ದಾರೆ.

ಮಹಿಳೆಯರ ಸುರಕ್ಷತೆಗೆ ಕ್ರಮ ಯಾಕಿಲ್ಲ?

''ಮಹಿಳಾ ಸುರಕ್ಷತೆ ಎನ್ನುವುದು ಜೋಕ್ ಆಗಿಬಿಟ್ಟಿದೆ. ನಾವು ಸುಮ್ಮನೆ ಕುಳಿತುಕೊಂಡ್ರೆ ಪರಿಸ್ಥತಿ ಬದಲಾಗುವುದಿಲ್ಲ. ಎಲ್ಲರೂ ಕೂಡ ಮಹಿಳೆಯರು ಯಾವ ರೀತಿಯಾದ ಬಟ್ಟೆಯನ್ನ ತೊಡಬೇಕು ಎಂದು ಮಾತನಾಡುತ್ತಾರೆ. ಆದ್ರೆ, ಮಹಿಳೆಯರ ಸುರಕ್ಷತೆ ಬಗ್ಗೆ ಯಾರೊಬ್ಬರು ಕೂಡ ಕ್ರಮ ತೆಗೆದುಕೊಳ್ಳುವುದಿಲ್ಲ. ನನ್ನಂತಹ ನಟಿಯ ಮೇಲೆಯೇ ಈ ರೀತಿ ದೌರ್ಜನ್ಯವಾದರೇ, ಇನ್ನೂ ನನಗಿಂತ ಕೆಳಮಟ್ಟದಲ್ಲಿರುವ ಹೆಣ್ಣುಮಕ್ಕಳ ಪಾಡೇನು'' ಎಂದು ಪ್ರಶ್ನಿಸಿದ್ದಾರೆ.

ಸಿನಿಮಾ ನಟಿಯರ ಮೇಲೆ ದೌರ್ಜನ್ಯ ಸಾಮಾನ್ಯವಾಗಿದೆ

''ಸಿನಿಮಾ ಕ್ಷೇತ್ರದಲ್ಲಿರುವ ಹಲವು ನಟಿಯರ ಮೇಲೆ ಈ ರೀತಿಯಾದ ದೌರ್ಜನ್ಯವಾಗುತ್ತಿದೆ. ಕೆಲವು ನಟಿಯರನ್ನ ಮಾಂಸ ದಂಧೆಗೆ ಬಳಸಿಕೊಳ್ಳಲಾಗುತ್ತಿದೆ'' ಎಂಬ ಗಂಭೀರ ಆರೋಪವನ್ನ ವರಲಕ್ಷ್ಮಿ ಮಾಡಿದ್ದಾರೆ.

ವರಲಕ್ಷ್ಮಿ ಶರತ್ ಕುಮಾರ್ ಯಾರು?

ಅಂದ್ಹಾಗೆ, ವರಲಕ್ಷ್ಮಿ ಶರತ್ ಕುಮಾರ್, ತಮಿಳಿನ ಖ್ಯಾತ ನಟ ಶರತ್ ಕುಮಾರ್ ಹಾಗೂ ಛಾಯ ದಂಪತಿಯ ಮಗಳು. ತಮಿಳು ಚಿತ್ರರಂಗದಲ್ಲಿ 'ಪೋಡ ಪೋಡಿ', 'ತಾರೈ ತಪ್ಪಟ್ಟೆ' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡದಲ್ಲೂ ನಟಿಸಿರುವ ವರಲಕ್ಷ್ಮಿ

ನಟಿ ವರಲಕ್ಷ್ಮಿ ಶರತ್ ಕುಮಾರ್ ಕೇವಲ ತಮಿಳಿನಲ್ಲಿ ಮಾತ್ರವಲ್ಲ, ಕನ್ನಡದ ಒಂದು ಚಿತ್ರದಲ್ಲೂ ಅಭಿನಯಿಸಿದ್ದಾರೆ. ಸುದೀಪ್ ಅಭಿನಯಿಸಿದ್ದ 'ಮಾಣಿಕ್ಯ' ಚಿತ್ರದಲ್ಲಿ ವರಲಕ್ಷ್ಮಿ ಬಣ್ಣ ಹಚ್ಚಿದ್ದರು.

English summary
Tamil Actress Varalaxmi Sarathkumar, Actor and Daughter of Veteran Sarathkumar, Tweeted her Unsavoury Experience of the Casting Couch in the Industry to Blow the lid off the Silence.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada