ತಮಿಳು ನಟ ಯೋಗಿಬಾಬು ಸರಳತೆಗೆ ದುನಿಯಾ ವಿಜಯ್ ಫಿದಾ

ತಮಿಳು ಹಾಸ್ಯನಟ ಯೋಗಿ ಅವರ ಸರಳತೆಗೆ ಕನ್ನಡದ ಬ್ಲಾಕ್ ಕೋಬ್ರಾ, ದುನಿಯಾ ವಿಜಯ್ ಫಿದಾ ಆಗಿದ್ದಾರೆ. ಕೆಲಸದ ನಿಮಿತ್ತ ಬೆಂಗಳೂರಿಗೆ ಆಗಮಿಸಿರುವ ಯೋಗಿಬಾಬು, ವಿಜಯ್ ಮನೆಗೆ ಭೇಟಿ ನೀಡಿದ್ದಾರೆ.

Recommended Video

Upendra ಅಭಿನಯದ ಬ್ರಹ್ಮ ಚಿತ್ರ ತಯಾರಾದ ಕ್ಷಣಗಳು | FILMIBEAT KANNADA

ಮನೆಗೆ ಬಂದ ಯೋಗಿಬಾಬು ಅವರನ್ನು ಪ್ರೀತಿಯಿಂದ ಸ್ವಾಗತಿಸಿರುವ ವಿಜಯ್, ಹಾಸ್ಯನಟನ ಪ್ರತಿಭೆಯನ್ನು ಗೌರವಿಸಿದ್ದಾರೆ. ಈ ಬಗ್ಗೆ ಸ್ವತಃ ವಿಜಯ್ ಟ್ವಿಟ್ಟರ್ ಹಾಗು ಫೇಸ್‌ಬುಕ್‌ನಲ್ಲಿ ಸಂತಸ ಹಂಚಿಕೊಂಡಿದ್ದು, 'ಯೋಗಿಬಾಬು ಅವರ ಸರಳತೆಗೆ ನಾನು ಫಿದಾ ಆದೆ'' ಎಂದಿದ್ದಾರೆ. ಮುಂದೆ ಓದಿ....

ಯೋಗಿಬಾಬು ಸರಳತೆಗೆ ಫಿದಾ

ಯೋಗಿಬಾಬು ಸರಳತೆಗೆ ಫಿದಾ

'ತಮಿಳು ಚಿತ್ರರಂಗದಲ್ಲಿ ಟೈಮಿಂಗ್ ಮತ್ತು ವಿಶಿಷ್ಟ ಅಭಿನಯದಿಂದ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಯೋಗಿ ಬಾಬು, ಇತ್ತೀಚೆಗೆ ನನ್ನ ಮನೆಗೆ ಬಂದಿದ್ದರು. ಕಾಲಿವುಡ್‌ನಲ್ಲಿ ಸ್ಟಾರ್ ಹಾಸ್ಯ ನಟರಾದರೂ ಅವರು ಸರಳತೆಗೆ ನಾನು ಫಿದಾ ಆದೆ. ನಿಮ್ಮ ಮುಂದಿನ ಚಿತ್ರ ಜೀವನ ಸಕ್ಸಸ್‌ಫುಲ್ ಆಗಲಿ' ಎಂದು ಶುಭಕೋರಿದ್ದಾರೆ.

ಪುನೀತ್ ಮನೆಗೆ ಭೇಟಿ ನೀಡಿದ್ದ ಯೋಗಿಬಾಬು

ಪುನೀತ್ ಮನೆಗೆ ಭೇಟಿ ನೀಡಿದ್ದ ಯೋಗಿಬಾಬು

ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿರುವ ಯೋಗಿಬಾಬು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಸಹ ಭೇಟಿ ಮಾಡಿದ್ದರು. ಸದಾಶಿವನಗರದಲ್ಲಿರುವ ಪುನೀತ್ ಮನೆಗೆ ತೆರಳಿ ಅಪ್ಪು ಜೊತೆ ಮಾತನಾಡಿದ್ದಾರೆ. ಪುನೀತ್ ಸಹ ಯೋಗಿಬಾಬು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದರು.

ಸ್ಟಾರ್ ನಟರ ಖಾಯಂ ನಟ

ಸ್ಟಾರ್ ನಟರ ಖಾಯಂ ನಟ

ಪ್ರಸ್ತುತ ತಮಿಳು ಇಂಡಸ್ಟ್ರಿಯಲ್ಲಿ ಯೋಗಿ ಬಾಬು ಬೇಡಿಕೆಯ ನಟ. ರಜನಿಕಾಂತ್, ವಿಜಯ್, ವಿಶಾಲ್, ಸೂರ್ಯ, ಅಜಿತ್, ಆರ್ಯ ಸೇರಿದಂತೆ ಬಹುತೇಕ ಎಲ್ಲ ಸ್ಟಾರ್‌ಗಳ ಚಿತ್ರದಲ್ಲಿ ಖಾಯಂ ನಟ ಆಗಿದ್ದಾರೆ. ನಯನತಾರ ಕಾಂಬಿನೇಷನ್‌ನಲ್ಲಿ ನಟಿಸಿದ 'ಕೋಲಮಾವು ಕೋಕಿಲ' ಸಿನಿಮಾ ಬಳಿಕ ಯೋಗಿ ಬಾಬು ಖದರ್ ಬದಲಾಯಿತು. ಈ ಚಿತ್ರದ ಅಭಿನಯಕ್ಕಾಗಿ ಅತ್ಯುತ್ಯುಮ ಹಾಸ್ಯ ನಟ ಸೈಮಾ ಪ್ರಶಸ್ತಿ ಸಹ ಪಡೆದುಕೊಂಡರು.

ಒಂದೇ ವರ್ಷದಲ್ಲಿ 30ಕ್ಕೂ ಅಧಿಕ ಚಿತ್ರ

ಒಂದೇ ವರ್ಷದಲ್ಲಿ 30ಕ್ಕೂ ಅಧಿಕ ಚಿತ್ರ

2019ನೇ ವರ್ಷದಲ್ಲಿ ಸುಮಾರು 32ಕ್ಕೂ ಅಧಿಕ ಚಿತ್ರಗಳಲ್ಲಿ ಯೋಗಿಬಾಬು ನಟಿಸಿದ್ದಾರೆ. 2020ನೇ ವರ್ಷದಲ್ಲೂ ಬಹಳ ಬ್ಯುಸಿಯಿರುವ ನಟ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Tamil No 1 Comedy Actor Yogi Babu was visited to kannada actor duniya vijay home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X