For Quick Alerts
  ALLOW NOTIFICATIONS  
  For Daily Alerts

  ಪುನೀತ್-ಗೌತಮ್ ಮೆನನ್ ಕಾಂಬಿನೇಷನ್ ನಲ್ಲಿ ಹೊಸ ಮ್ಯಾಜಿಕ್!

  By ಸೋನು ಗೌಡ
  |

  ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಗೌತಮ್ ವಾಸುದೇವ ಮೆನನ್ ಅವರು ರೊಮ್ಯಾಂಟಿಕ್ ಕಥೆ ಹೆಣೆಯುವುದರಲ್ಲಿ ನಿಸ್ಸೀಮರು. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಸಿಂಬು ಹಾಗೂ ತ್ರಿಶಾ ಜೋಡಿಯಲ್ಲಿ 2010ರಲ್ಲಿ ಮೂಡಿ ಬಂದ 'ವಿನ್ನೈತಾಂಡಿ ವರುವಾಯ' ಹಾಗೂ ಜೀವಾ ಮತ್ತು ಸಮಂತಾ ರುತು ನಟಿಸಿದ್ದ 'ನೀದಾನೆ ಎನ್ ಪೂನ್ ವಸಂತಮ್' ಚಿತ್ರಗಳು ಪ್ರೇಮಿಗಳಿಗೆ ತುಂಬಾ ಇಷ್ಟವಾದ ಸಿನಿಮಾ ಆಗಿತ್ತು.

  ಇನ್ನು ತಮಿಳು ನಿರ್ದೇಶಕ ಗೌತಮ್ ಮೆನನ್ ಅವರು ನಮ್ಮ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಒಂದು ಸಿನಿಮಾ ಮಾಡಲಿದ್ದಾರೆ ಎಂದು ಈ ಮೊದಲು ಅಂದರೆ ಸುಮಾರು ಎರಡು ವರ್ಷಗಳ ಮುಂಚೆ ಸುದ್ದಿಯಾಗಿತ್ತು.

  ಆದರೆ ಯಾವಾಗಲೂ ಆ ಸುದ್ದಿ ಬಂದಷ್ಟೇ ವೇಗವಾಗಿ ಮಾಯವಾಗುತ್ತಿತ್ತು. ಆದ್ರೆ ಈ ಬಾರಿ ಪವರ್ ಸ್ಟಾರ್ ಪುನೀತ್ ಅವರು ನಿರ್ದೇಶಕ ಗೌತಮ್ ಅವರ ಚಿತ್ರದಲ್ಲಿ ನಟಿಸೋದು ಗ್ಯಾರಂಟಿ.[ಸಿಂಬು- ತ್ರಿಶಾ ಜೋಡಿ ಮ್ಯಾಜಿಕ್ ಮತ್ತೆ ತೆರೆಗೆ : ಗೌತಮ್ ಮೆನನ್]

  ನಿರ್ದೇಶಕ ಗೌತಮ್ ಮೆನನ್ ಅವರು 'ಅಚ್ಚಂ ಎಬ್ದದು ಮದಮೈಯಾದ' ಎಂಬ ಸಿನಿಮಾವನ್ನು ನಾಲ್ಕು ಭಾಷೆಗಳಲ್ಲಿ ಮಾಡುವುದಾಗಿ ನಿರ್ಧರಿಸಿದ್ದು, ಕನ್ನಡಕ್ಕೆ ಪುನೀತ್ ಅವರು ಪಕ್ಕಾ ಆಗಿದ್ದು, ಸ್ವತಃ ಪುನೀತ್ ಅವರೇ ನಿರ್ದೇಶಕರೊಂದಿಗೆ ಕುಳಿತು ಈ ಚಿತ್ರದ ಬಗ್ಗೆ ಮಾತಾಡಿದ್ದಾರೆ. ಇನ್ನುಳಿದ 3 ಬಾಷೆಗಳಲ್ಲಿ ಯಾವ್ಯಾವ ನಟರು ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ..

   7up ಕ್ಯಾಂಪೆನ್ ನಲ್ಲಿ ಪುನೀತ್-ಗೌತಮ್ ಮಾತುಕತೆ

  7up ಕ್ಯಾಂಪೆನ್ ನಲ್ಲಿ ಪುನೀತ್-ಗೌತಮ್ ಮಾತುಕತೆ

  7up ಕ್ಯಾಂಪೆನ್ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿರ್ದೇಶಕ ಗೌತಮ್ ಮೆನನ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಚಿತ್ರದ ಬಗ್ಗೆ ಮಾತುಕತೆಗಳು ನಡೆದಿವೆ. ಕನ್ನಡ ವರ್ಷನ್ ಗೆ ಪುನೀತ್ ಅವರೇ ಬಂಡವಾಳ ಹಾಕಲಿದ್ದಾರೆ.

  ಮಲಯಾಳಂನಲ್ಲಿ ಫಹದ್ ಫಝಿಲ್

  ಮಲಯಾಳಂನಲ್ಲಿ ಫಹದ್ ಫಝಿಲ್

  ನಿರ್ದೇಶಕ ಗೌತಮ್ ಅವರು ಈ ಮೊದಲು ಮಲಯಾಳಂ ನಟ ಫಹದ್ ಫಝಿಲ್ ಅವರೊಂದಿಗೆ ಈ ಪ್ರಾಜೆಕ್ಟ್ ಬಗ್ಗೆ ಮಾತಾಡಿದ್ದು, ಇದೀಗ ಫಹದ್ ಮಲಯಾಳಂ ವರ್ಷನ್ ನಲ್ಲಿ ನಟಿಸಲು ಓಕೆ ಎಂದಿದ್ದಾರೆ.

  ತೆಲುಗಿನಲ್ಲಿ ಅಲ್ಲು ಅರ್ಜುನ್

  ತೆಲುಗಿನಲ್ಲಿ ಅಲ್ಲು ಅರ್ಜುನ್

  'ಅಚ್ಚಂ ಎಬ್ದದು ಮದಮೈಯಾದ' ತೆಲುಗು ವರ್ಷನ್ ಗೆ ತೆಲುಗಿನ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅವರು ಆಯ್ಕೆಯಾಗಿದ್ದಾರೆ. ಈಗಾಗಲೇ 'ರುದ್ರಮ್ಮದೇವಿ' ಚಿತ್ರದ ಭರ್ಜರಿ ಯಶಸ್ಸಿನಲ್ಲಿರುವ ಇವರು ಗೌತಮ್ ಅವರ ಚಿತ್ರದಲ್ಲಿ ನಟಿಸಲಿದ್ದಾರೆ.

   ತಮಿಳು ಚಿತ್ರದಲ್ಲಿ ಸಿಂಬು

  ತಮಿಳು ಚಿತ್ರದಲ್ಲಿ ಸಿಂಬು

  ಈ ಮೊದಲು ಇದೇ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಸಿಲಂಬರಸನ್ ಅವರು 'ಅಚ್ಚಂ ಎಬ್ದದು ಮದಮೈಯಾದ' ತಮಿಳು ವರ್ಷನ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಗೌತಮ್ ಅವರ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ.

  English summary
  Filmmaker Gautham Vasudev Menon, who is on the brink of wrapping up his Tamil-Telugu bilingual Achcham Yenbadhu Madamaiyada, plans to start a multi-lingual project with popular southern stars such as Puneeth Rajkumar, Fahadh Faasil, Simbu and Allu Arjun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X