ಶಿವಣ್ಣನಿಗೆ ಆಕ್ಷನ್ ಕಟ್ ಹೇಳಲು ಬಂದ್ರು ತಮಿಳಿನ ಪ್ರಖ್ಯಾತ ನಿರ್ದೇಶಕ.!
Recommended Video

ಸ್ಯಾಂಡಲ್ ವುಡ್ ನ ದಿ ಮೋಸ್ಟ್ ಬಿಜಿಯೆಸ್ಟ್ ಸ್ಟಾರ್ ಯಾರು ಅಂದ್ರೆ, ಮುಲಾಜಿಲ್ಲದೇ ಬರುವ ಉತ್ತರ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ವರ್ಷಕ್ಕೆ ಏನಿಲ್ಲ ಅಂದರೂ ಎರಡು-ಮೂರು ಸಿನಿಮಾಗಳ ಮೂಲಕ ಶಿವಣ್ಣ ನಿಮ್ಮ ಮುಂದೆ ಬರ್ತನೆ ಇರ್ತಾರೆ.
ವಯಸ್ಸು ಹಾಫ್ ಸೆಂಚುರಿ ದಾಟಿದ್ರೂ, ಶಿವಣ್ಣನ ಎನರ್ಜಿ ಕೊಂಚ ಕೂಡ ಕಮ್ಮಿ ಆಗಿಲ್ಲ. ಹಾಗೇ, 'ಕರುನಾಡ ಚಕ್ರವರ್ತಿ'ಯ ಕಾಲ್ ಶೀಟ್ ಪಡೆಯಲು ನಿರ್ಮಾಪಕರ ಕ್ಯೂ ಕೂಡ ಕಡಿಮೆ ಏನಿಲ್ಲ.
ಇನ್ನೂ ಮೂರ್ನಾಲ್ಕು ವರ್ಷಗಳಿಗೆ ಆಗುವಷ್ಟು ಸಿನಿಮಾಗಳು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೈಯಲ್ಲಿವೆ. ಸದ್ಯಕ್ಕೆ 'ಕವಚ', 'ರುಸ್ತುಂ' ಹಾಗೂ 'ದ್ರೋಣ' ಪ್ರಾಜೆಕ್ಟ್ ಗಳಲ್ಲಿ ಶಿವಣ್ಣ ಬಿಜಿಯಾಗಿದ್ದಾರೆ. ಹೀಗಿರುವಾಗಲೇ, ತಮಿಳಿನ ಖ್ಯಾತ ನಿರ್ದೇಶಕರೊಬ್ಬರು ಶಿವರಾಜ್ ಕುಮಾರ್ ಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಯಾರವರು ಅಂತೀರಾ.? ನೀವೇ ನೋಡಿ....

'ಮುತ್ತಣ್ಣ'ನಿಗೆ ಮುತ್ತಯ್ಯ ನಿರ್ದೇಶಕ
ತಮಿಳಿನಲ್ಲಿ 'ಕುಟ್ಟಿ ಪುಲಿ', 'ಕೊಂಬನ್', 'ಮರುಧು', 'ಕೋಡಿವೀರನ್' ಚಿತ್ರಗಳನ್ನ ನಿರ್ದೇಶನ ಮಾಡಿರುವ ಡೈರೆಕ್ಟರ್ ಮುತ್ತಯ್ಯ ಇದೀಗ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. 'ಅಣ್ಣಾವ್ರ ಮಗ' ಶಿವರಾಜ್ ಕುಮಾರ್ ಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.

ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.!
ಮುತ್ತಯ್ಯ ಅವರ ನಿರ್ದೇಶನದಲ್ಲಿ ಅಭಿನಯಿಸಲು ಶಿವರಾಜ್ ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. 'ರುಸ್ತುಂ' ಹಾಗೂ 'ದ್ರೋಣ' ಚಿತ್ರಗಳು ಮುಗಿದ ಮೇಲೆ ಮುತ್ತಯ್ಯ ಅವರಿಗೆ ಶಿವಣ್ಣನ ಕಾಲ್ ಶೀಟ್ ಸಿಗಲಿದೆ.

ತಮಿಳು ನಿರ್ಮಾಪಕ
ಮುತ್ತಯ್ಯ ನಿರ್ದೇಶನ ಮಾಡಲಿರುವ, ಶಿವಣ್ಣ ಅಭಿನಯಿಸಲಿರುವ ಚಿತ್ರಕ್ಕೆ ತಮಿಳು ನಿರ್ಮಾಪಕ ಜ್ಞಾನವೇಲ್ ರಾಜ ಬಂಡವಾಳ ಹಾಕಲಿದ್ದಾರೆ. ಶಿವಣ್ಣನ ಜೊತೆಗೆ ಕೆಲಸ ಮಾಡಲು ಜ್ಞಾನವೇಲ್ ರಾಜ ಹಾಗೂ ಮುತ್ತಯ್ಯ ಉತ್ಸುಕರಾಗಿದ್ದಾರೆ.

'ಎಸ್.ಆರ್.ಕೆ'ಗೆ ತಯಾರಿ ನಡೆಯುತ್ತಿದೆ
ಈ ಎಲ್ಲದರ ನಡುವೆ ಲಕ್ಕಿ ಗೋಪಾಲ್ ನಿರ್ದೇಶನದ 'ಎಸ್.ಆರ್.ಕೆ' ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಕೂಡ ಚಾಲ್ತಿಯಲ್ಲಿದೆ. ಈ ಸಿನಿಮಾದಲ್ಲಿ ಶಿವಣ್ಣ ಡ್ಯಾನ್ಸ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಎಲ್ಲಾ ಪ್ರಾಜೆಕ್ಟ್ ಗಳಿಗೂ ಶಿವಣ್ಣ ಹೇಗೆ ಸಮಯ ಹೊಂದಿಸಿಕೊಳ್ತಾರೋ, ಏನೋ.?!


Click it and Unblock the Notifications











