ಸುದೀಪ್ ಮುಂದಿನ ಚಿತ್ರಕ್ಕೆ ತಮಿಳು ನಿರ್ದೇಶಕ ಆ್ಯಕ್ಷನ್ ಕಟ್: ಕಿಚ್ಚನನ್ನು ಭೇಟಿಯಾದ ವೆಂಕಟ್ ಪ್ರಭು

By ಫಿಲ್ಮಿಬೀಟ್ ಡೆಸ್ಕ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಕೋಟಿಗೊಬ್ಬ-3 ಮತ್ತು ವಿಕ್ರಾಂತ್ ರೋಣ ಸಿನಿಮಾದ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಎರಡು ಸಿನಿಮಾಗಳು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದು ಯಾವಾಗ ತೆರೆಗೆ ಬರಲಿದೆ ಎಂದು ಎದುರು ನೋಡುತ್ತಿದ್ದಾರೆ.

ಕೋಟಿಗೊಬ್ಬ-3 ಸಿನಿಮಾ ಬಗ್ಗೆ ಇತ್ತೀಚಿಗಷ್ಟೆ ಇಂಟ್ರಸ್ಟಿಂಗ್ ಅಪ್ ಡೇಟ್ ಹೊರಬಿದ್ದಿದ್ದು, ಸಿನಿಮಾದ ಹೊಸ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. 'ಕೋಟಿಗೊಬ್ಬ-3' ಚಿತ್ರದ ಹೊಸ ರಿಲೀಸ್ ದಿನಾಂಕ ಈಗ ವೈರಲ್ ಆಗಿದ್ದು ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಶಿವ ಕಾರ್ತಿಕ್ ಚೊಚ್ಚಲ ನಿರ್ದೇಶನದ ಕೋಟಿಗೊಬ್ಬ-3 ಚಿತ್ರಕ್ಕೆ ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆ. ಕೋಟಿಗೊಬ್ಬ ಪ್ರಾಂಚೈಸಿಯ 3ನೇ ಸರಣಿ ಇದಾಗಿದ್ದು, ಚಿತ್ರದ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಮೂಲಗಳ ಪ್ರಕಾರ ಕೋಟಿಗೊಬ್ಬ-3 ಸಿನಿಮಾ ಅಕ್ಟೋಬರ್ 14ಕ್ಕೆ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಅಧಿಕೃತ ಬಿಡುಗಡೆ ದಿನಾಂಕ ಸುದೀಪ್ ಹುಟ್ಟುಹಬ್ಬದ ದಿನ ಬಹಿರಂಗವಾಗಲಿದೆ. ಅಂದಹಾಗೆ ಸೆಪ್ಟಂಬರ್ 2ರಂದು ಕಿಚ್ಚನ ಹುಟ್ಟುಹಬ್ಬ. ಅಂದು ಚಿತ್ರದ ಬಗ್ಗೆ ಮಾಹಿತಿ ಬಹಿರಂಗವಾಗುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. ಈ ಸಿನಿಮಾ ಜೊತೆಗೆ ವಿಕ್ರಾಂತ್ ರೋಣ ಸಿನಿಮಾದ ಚಿತ್ರೀಕರಣ ಸಹ ಮುಗಿಸಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿದೆ.

Tamil director Venkat Prabhu meets Kannada Actor Kiccha Sudeep

ಈ ನಡುವೆ ಕಿಚ್ಚನ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಸುದೀಪ್ ಮುಂದಿನ ಚಿತ್ರಕ್ಕೆ ಕನ್ನಡದ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಾರಾ ಅಥವಾ ಪರಭಾಷೆಯ ನಿರ್ದೇಶಕರ ಜೊತೆ ಸಿನಿಮಾ ಮಾಡುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಕಿಚ್ಚನ ಮುಂದಿನ ಸಿನಿಮಾದ ಚರ್ಚೆಯ ನಡುವೆ ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದೆ.

ತಮಿಳಿನ ಖ್ಯಾತ ನಿರ್ದೇಶಕರ ಜೊತೆ ಸುದೀಪ್ ಸಿನಿಮಾ ಮಾಡುತ್ತಿದ್ದಾರೆ ಮಾತು ಕೇಳಿಬರುತ್ತಿದೆ. ತಮಿಳು ನಿರ್ದೇಶಕ ವೆಂಕಟ್ ಪ್ರಭು ಇತ್ತೀಚಿಗಷ್ಟೆ ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿಗೆ ಆಗಮಿಸಿದ್ದ ವೆಂಕಟ್ ಪ್ರಭು ಕಿಚ್ಚನ ಮನೆಗೆ ಭೇಟಿನೀಡಿದ್ದರು. ಈ ಸಮಯದಲ್ಲಿ ಸುದೀಪ್ ಕೈಯಾರೆ ವಿಶೇಷ ತಿನಿಸು ಮಾಡಿ ಬಡಿಸಿದ್ದಾರೆ. ಕಿಚ್ಚನ ಆತಿಥ್ಯಕ್ಕೆ ವೆಂಕಟ್ ಪ್ರಬು ಫಿದಾ ಆಗಿದ್ದಾರೆ. ಸುದೀಪ್ ಭೇಟಿ ಮಾಡಿರುವ ಫೋಟೋವನ್ನು ಶೇರ್ ಮಾಡಿ ವೆಂಕಟ್ ಪ್ರಭು ಸಂತಸ ವ್ಯಕ್ತಪಡಿಸಿದ್ದಾರೆ.

ಸುದೀಪ್ ಹೊಗಳುವ ಜೊತೆಗೆ ಕಿಚ್ಚನ ಜೊತೆ ಸಿನಿಮಾ ಮಾಡಲು ಉತ್ಸುಕರಾಗಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ವೆಂಕಟ್ ಪ್ರಭು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ಇಂಥ ಅದ್ಭುತ ಆತಿಥ್ಯ. ನೀವು ಅದ್ಭುತವಾಗಿ ಅಡುಗೆ ಮಾಡುತ್ತೀರಿ. ಧನ್ಯವಾದಗಳು. ನಮ್ಮ ಮುಂದಿನ ಚಿತ್ರಕ್ಕಾಗಿ ಉತ್ಸುಕನಾಗಿದ್ದೇನೆ. ಜನ್ಮದಿನದ ಶುಭಾಶಯಗಳು" ಎಂದು ಹೇಳಿದ್ದಾರೆ.

ಅಂದ್ಮೇಲೆ ಕಿಚ್ಚನ ಮುಂದಿನ ಸಿನಿಮಾ ವೆಂಕಟ್ ಪ್ರಭು ಜೊತೆ ಎನ್ನುವುದು ಅಧಿಕೃತವಾಯಿತು. ಈ ಸಿನಿಮಾ ಸುದೀಪ್ ಹುಟ್ಟುಹಬ್ಬದ ದಿನ ಘೋಷಣೆಯಾಗುವ ಸಾಧ್ಯತೆ ಇದೆ. ನಿರ್ದೇಶಕ ವೆಂಕಟ್ ಪ್ರಭು ತಮಿಳಿನಲ್ಲಿ ಅನೇಕ ಸಿನಿಮಾಗಳನ್ನು ನಿರ್ದೇಶಕ ಮಾಡಿದ್ದಾರೆ. ಸದ್ಯ ಮಾನಾಡು ಸಿನಿಮಾ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಸಿಂಬು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸಿಂಬು ಲುಕ್ ಬಿಡುಗಡೆಯಾಗಿದ್ದು, ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಈ ಸಿನಿಮಾ ಜೊತೆಗೆ ವೆಂಕಟ್ ಪ್ರಭು ಲೈವ್ ಟೆಲಿಕಾಸ್ಟ್ ಸಿನಿಮಾದಲ್ಲಿ ನಿರತರಾಗಿದ್ದಾರೆ. ಮುಂದಿನ ಸಿನಿಮಾ ಸುದೀಪ್ ಜೊತೆ ಮಾಡುವುದು ಬಹುತೇಕ ಖಚಿತವಾಗಿದೆ. ಇಬ್ಬರ ಕಾಂಬಿನೇಷನ್ ಸಿನಿಮಾದ ಬಗ್ಗೆ ಸೆಪ್ಟಂಬರ್ 2 ಸುದೀಪ್ ಹುಟ್ಟುಹಬ್ಬದ ದಿನ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.

More from Filmibeat

English summary
Tamil director Venkat Prabhu meets Kannada Actor Kiccha Sudeep. He says Looking forward for our next.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X