ಜಯಲಲಿತಾ ಬಯೋಪಿಕ್ ಗಾಗಿ ಮೂವರ ನಡುವೆ ಕಿತ್ತಾಟ.!

By Bharath Kumar

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ತಮಿಳರ ಪಾಲಿನ ಅಮ್ಮ ಜಯಲಲಿತಾ ಅವರ ಜೀವನ ಕುರಿತು ಬಯೋಪಿಕ್ ಸಿನಿಮಾ ಮಾಡಲು ದಕ್ಷಿಣ ಚಿತ್ರರಂಗ ಮನಸ್ಸು ಮಾಡಿದೆ.

ಈಗಾಗಲೇ ಹೈದ್ರಾಬಾದ್ ಮೂಲದ ನಿರ್ಮಾಣ ಸಂಸ್ಥೆ, ಜಯಲಲಿತಾ ಅವರ ಬಗ್ಗೆ ಸಿನಿಮಾ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಫೆಬ್ರವರಿ 24 ರಂದು ಜಯಲಲಿತಾ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾ ಸೆಟ್ಟೇರಲಿದ್ದು, ಅದೇ ದಿನ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಾಗುವುದು.

ಈ ಮಧ್ಯೆ ಜಯಲಲಿತಾ ಅವರ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಬಹುದು ಎಂಬ ಕುತೂಹಲ ಚಿತ್ರಪ್ರೇಮಿಗಳನ್ನ ಕಾಡುತ್ತಿದೆ. ಇದೀಗ, ಅಮ್ಮನ ಪಾತ್ರಧಾರಿಗಿಂತ ಈ ಸಿನಿಮಾ ನಿರ್ದೇಶನ ಮಾಡೋದು ಯಾರು ಎಂಬುದೇ ದೊಡ್ಡ ತಲೆನೋವಾಗಿದೆ. ಮೂರು ನಿರ್ದೇಶಕರ ಪೈಕಿ ಕಾಂಪಿಟೇಶನ್ ನಡೆಯುತ್ತಿದೆ. ನಾನು ಮಾಡ್ತೀನಿ, ನಾನು ಮಾಡ್ತೀನಿ ಅಂತ ಪೈಪೋಟಿಗೆ ಬಿದ್ದಿದ್ದಾರೆ. ಅಷ್ಟಕ್ಕೂ, ಜಯಲಲಿತಾ ಸಿನಿಮಾಗೆ ಡೈರೆಕ್ಟರ್ ಯಾರು.? ಮುಂದೆ ಓದಿ...

ಮೂರು ನಿರ್ದೇಶಕರ ನಡುವೆ ಫೈಟ್

ಮೂರು ನಿರ್ದೇಶಕರ ನಡುವೆ ಫೈಟ್

ಜಯಲಲಿತಾ ಅವರ ಬಯೋಪಿಕ್ ಚಿತ್ರವನ್ನ ಯಾರು ನಿರ್ದೇಶನ ಮಾಡಲಿದ್ದಾರೆ ಎಂಬುದರ ಬಗ್ಗೆ ಇದುವರೆಗೂ ಸ್ಪಷ್ಟತೆ ಸಿಕ್ಕಿಲ್ಲ. ಹಿರಿಯ ನಿರ್ದೇಶಕರ ಜೊತೆ ಯುವ ನಿರ್ದೇಶಕರಿಬ್ಬರು ಫೈಟ್ ಮಾಡುತ್ತಿದ್ದಾರೆ. ಇನ್ನೊಂದು ಮೂಲಕದ ಪ್ರಕಾರ ಈ ಮೂವರು ಜಯಲಲಿತಾ ಅವರ ಬಗ್ಗೆ ಪ್ರತ್ಯೇಕವಾಗಿ ಮೂರು ಸಿನಿಮಾ ಮಾಡ್ತಾರಾ ಎನ್ನುವುದು ಪ್ರಶ್ನೆಯಾಗಿದೆ.

ಹಿರಿಯ ನಿರ್ದೇಶಕ ಭಾರತಿರಾಜಾ

ಹಿರಿಯ ನಿರ್ದೇಶಕ ಭಾರತಿರಾಜಾ

ಹಿರಿಯ ನಿರ್ದೇಶಕ ಭಾರತಿರಾಜಾ ಅವರು ಜಯಲಲಿತಾ ಬಗ್ಗೆ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಭಾರಧ್ವಜ್ ಈ ಚಿತ್ರವನ್ನ ನಿರ್ಮಾಣ ಮಾಡಲಿದ್ದು, ಇಳಯರಾಜಾ ಸಂಗೀತ ನೀಡಲಿದ್ದಾರೆ. ನಾನೊಬ್ಬ ಹಿರಿಯ ನಿರ್ದೇಶಕ, ಜಯಲಲಿತಾ ಅವರ ಬಗ್ಗೆ ನನಗಿಂತ ಉತ್ತಮವಾಗಿ ಬಲ್ಲವರು ಸಿನಿಮಾ ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಖಚಿತ ಪಡಿಸಿದ್ದಾರೆ.

ಎ.ಎಲ್ ವಿಜಯ್

ಎ.ಎಲ್ ವಿಜಯ್

ನಟಿ ಅಮಲಾ ಪೌಲ್ ಅವರ ಮಾಜಿ ಪತಿ ನಿರ್ದೇಶಕ ಎ ಎಲ್ ವಿಜಯ್ ಕೂಡ ಜಯಲಲಿತಾ ಅವರ ಬಯೋಪಿಕ್ ಚಿತ್ರಕ್ಕೆ ನಿರ್ದೇಶಕರೆಂದು ಹೇಳಲಾಗುತ್ತಿದೆ. ವಿಷ್ಣು ಇಂದೂರಿ ಈ ಚಿತ್ರವನ್ನ ನಿರ್ಮಾಣ ಮಾಡಲಿದ್ದು, 2019ರಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ.

ಪ್ರಿಯದರ್ಶನಿ ಕೈಯಲ್ಲಿ ಅಮ್ಮ

ಪ್ರಿಯದರ್ಶನಿ ಕೈಯಲ್ಲಿ ಅಮ್ಮ

ಎ.ಎಲ್ ವಿಜಯ್ ಮತ್ತು ಭಾರತಿರಾಜ್ ಅವರ ನಡುವೆ ಮತ್ತೊಬ್ಬ ನಿರ್ದೇಶಕ ಪ್ರಿಯದರ್ಶನಿ ಎಂಬುವವರು, ಅಮ್ಮನ ಬಗ್ಗೆ ಈಗಾಗಲೇ ಸಂಶೋಧನೆ ಮಾಡಿದ್ದೇನೆ, ಸಿನಿಮಾ, ವೈಯಕ್ತಿಕ ವಿಚಾರ, ರಾಜಕೀಯ ವಿಷ್ಯಗಳನ್ನಿಟ್ಟು ಸಿನಿಮಾ ಮಾಡುತ್ತೇನೆ ಎಂದು ಘೋಷಿಸಿಕೊಂಡಿದ್ದಾರೆ.

More from Filmibeat

English summary
Who will direct Jayalalitha biopic?. Bharathiraja, AL Vijay and Priyadarshini are also planning to make movie based on Jayalalitha's illustrious life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X