ಆರ್ಟಿಕಲ್ 370 ರದ್ದಿಗೆ ನಟ ವಿಜಯ್ ಸೇತುಪತಿ ಅಸಮಾಧಾನ
ಕಾಲಿವುಡ್ ನ ಖ್ಯಾತ ನಟ ವಿಜಯ್ ಸೇತುಪತಿ ಆರ್ಟಿಕಲ್ 370 ರದ್ದು ಮಾಡಿದ ಬಗ್ಗೆ ಸಿಡಿಮಿಡಿಕೊಂಡಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರವನ್ನು ರದ್ದು ಮಾಡಿದನ್ನು ತಮಿಳು ನಟ ಸೇತುಪತಿ ಖಂಡಿಸಿದ್ದಾರೆ.
ಆಸ್ಟ್ರೇಲಿಯದ ರೇಡಿಯೋ ಸಂದರ್ಶನದಲ್ಲಿ ಮಾತನಾಡಿದ ಸೇತುಪತಿ, "ಇದು ಪ್ರಜಾಪ್ರಭುತ್ವದ ವಿರೋದ ನಡೆ. ಜನರೆ ತಮ್ಮ ಸಮಸ್ಯೆ ಮತ್ತು ವಿವಾದಗಳನ್ನು ಬಗೆ ಹರಿಸಿಕೊಳ್ಳಬೇಕೆಂದು ಪೆರಿಯರ್ ಹೇಳಿದ್ದರು. ನಿಮ್ಮ ಮನೆಯ ವ್ಯವಹಾರದಲ್ಲಿ ನಾನು ಮಧ್ಯಪ್ರವೇಶ ಮಾಡ ಬಹುದೆ? ಅಲ್ಲಿ ವಾಸಿಸುವವರಿಗೆ ಯಾವುದು ಒಳ್ಳೆಯದು ಎಂದು ತಿಳಿದುರುತ್ತದೆ. ನಿಮ್ಮ ಬಗ್ಗೆ ಕಾಳಜಿ ತೋರಿಸಬಹುದೇ ಹೊರತು ನನ್ನ ನಿರ್ಧಾರಗಳನ್ನು ಹೇರಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಕಶ್ಮೀರ ಜನತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದ ಹೊರಗಿನ ಜನರು ಅವರ ಬಗ್ಗೆ ಕಾಳಜಿ ತೋರಬೇಕು ಎಂದು ಹೇಳಿದ್ದಾರೆ. ಫಿಲ್ಮ್ ಫೆಸ್ಟ್ ನಿಮಿತ್ತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ವಿಜಯ್ ಅಲ್ಲಿನ ರೇಡಿಯೊವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ.

ಇತ್ತೀಚಿಗಷ್ಟೆ ನಟ ಮತ್ತು ರಾಜಕಾರಣಿ ರಜನಿಕಾಂತ್ ಪ್ರದಾನಿ ಮೋದಿ ಮತ್ತು ಅಮಿತಾ ಶಾರನ್ನು ಹೊಗಳಿದ್ದರು. ಅಮಿತಾ ಶಾ ಮತ್ತು ಮೋದಿ ಇಬ್ಬರನ್ನು ಕೃಷ್ಣ ಅರ್ಜುನ ಎಂದು ಹೇಳಿದ್ದರು. ಈಗ ನಟ ವಿಜಯ್ ಸೇತುಪತಿ ಅವರ ಅಭಿಪ್ರಾಯವನ್ನು ಬಹಿರಂಗ ಪಡಿಸಿದ್ದಾರೆ.


Click it and Unblock the Notifications











