'ಕಮಾಂಡೋ' ಟೀಸರ್ ಗೆ ಸಿಕ್ಕಿದೆ ಪಾಸಿಟಿವ್ ರೆಸ್ಪಾನ್ಸ್
ಕಾಲಿವುಡ್ ಸಿನಿಮಾ 'ವಿವೇಗಂ' ಈಗ ಕನ್ನಡಕ್ಕೆ ಡಬ್ ಆಗಿದೆ. 'ಕಮಾಂಡೋ' ಎಂಬ ಹೆಸರಿನಲ್ಲಿ ಸ್ಯಾಂಡಲ್ ವುಡ್ ಗೆ ಬಂದಿರುವ ಈ ಚಿತ್ರದ ಟೀಸರ್ ನಿನ್ನೆ ಬಿಡುಗಡೆಯಾಗಿದೆ. ಜೊತೆಗೆ ಟೀಸರ್ ಗೆ ಪಾಸಿಟಿವ್ ಆದ ರೆಸ್ಪಾನ್ಸ್ ಸಿಕ್ಕಿದೆ. ಟೀಸರ್ ಬಿಡುಗಡೆಯಾದ ಒಂದು ಗಂಟೆಯಲ್ಲಿ 28 ಸಾವಿರಕ್ಕೂ ಅಧಿಕ ಹಿಟ್ಸ್ ಪಡೆದಿದೆ. ಸದ್ಯ ಈ ಟೀಸರ್ ಅನ್ನು 75 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.
ಪ್ರತಿಷ್ಠಿತ ಆಡಿಯೋ ಕಂಪನಿ ಸೋನಿ ಮ್ಯೂಸಿಕ್ ಮೂಲಕ ಚಿತ್ರದ ಟೀಸರ್ ಹೊರಬಂದಿದೆ. ಹರಿವು ಕ್ರಿಯೇಷನ್ಸ್ ಈ ಸಿನಿಮಾವನ್ನು ಡಬ್ ಮಾಡಿದೆ. ಹರಿವು ಕ್ರಿಯೇಷನ್ಸ್ 9 ಟೆಕ್ಕಿಗಳ ತಂಡವಾಗಿದ್ದು, ಕನ್ನಡ ಅಭಿಮಾನ ಇರುವ ಈ ಗುಂಪು ಡಬ್ಬಿಂಗ್ ಚಿತ್ರಗಳನ್ನು ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ.

ಹರಿವು ಕ್ರಿಯೇಷನ್ಸ್ ಸದ್ಯ 'ವಿವೇಗಂ' ಚಿತ್ರವನ್ನು ಕನ್ನಡಕ್ಕೆ ತಂದಿದ್ದು, ಇನ್ನು ಮೂರು ವರ್ಷಗಳ ಕಾಲ ಬೇರೆ ಬೇರೆ ಸಿನಿಮಾಗಳನ್ನು ಡಬ್ ಮಾಡಲಿದೆಯಂತೆ. ಬಳಿಕ ಹೊಸ ಚಿತ್ರಗಳನ್ನು ನಿರ್ಮಾಣ ಮಾಡಲಿದೆಯಂತೆ. ಸಾಮಾಜಿಕ ಜಾಲತಾಣದಲ್ಲಿ ಡಬ್ಬಿಂಗ್ ಚಿತ್ರಗಳು ಬರಬೇಕು ಎಂಬ ಬೇಡಿಕೆ ಹೆಚ್ಚಾಗಿದ್ದು, ಮುಂದೆ ಇತರ ಸ್ಟಾರ್ ಚಿತ್ರಗಳು ಡಬ್ ಆಗಲಿದೆಯಂತೆ.
'ವಿವೇಗಂ' 2017 ರಲ್ಲಿ ಬಿಡುಗಡೆ ಕಾಲಿವುಡ್ ನ ಹಿಟ್ ಚಿತ್ರವಾಗಿದೆ. ಅಜಿತ್, ವಿವೇಕ್ ಒಬೆರಾಯ್, ಕಾಜಲ್ ಅಗರ್ವಾಲ್, ಅಕ್ಷರಾ ಹಾಸನ್ ಸೇರಿದಂತೆ ದೊಡ್ಡ ಕಲಾವಿದರು ಚಿತ್ರದಲ್ಲಿದ್ದಾರೆ. ಶಿವ ನಿರ್ದೇಶನ ಮಾಡಿದ್ದ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ.


Click it and Unblock the Notifications