ಕನ್ನಡದಲ್ಲಿ 'ಕಮಾಂಡೋ' ಆಗಿ ಬರ್ತಿದೆ ತಮಿಳಿನ 'ವಿವೇಗಂ'.!
'ವೇಗ ಮತ್ತು ಉದ್ವೇಗ', 'ಸತ್ಯದೇವ್ ಐ.ಪಿ.ಎಸ್', 'ಧೀರ' ಸೇರಿದಂತೆ ಹಲವು ಡಬ್ಬಿಂಗ್ ಸಿನಿಮಾಗಳು ಕರ್ನಾಟಕದಲ್ಲಿ ಬಿಡುಗಡೆ ಆಗಿವೆ. ಇದೀಗ ಅದೇ ಸಾಲಿಗೆ ಸೇರ್ಪಡೆ ಆಗುತ್ತಿರುವುದು 'ಕಮಾಂಡೋ'.
2017 ರಲ್ಲಿ ಬಿಡುಗಡೆ ಆಗಿದ್ದ ಶಿವ ನಿರ್ದೇಶನದ ತಮಿಳಿನ ಆಕ್ಷನ್ ಥ್ರಿಲ್ಲರ್ ಸಿನಿಮಾ 'ವಿವೇಗಂ'. ಅಜಿತ್, ವಿವೇಕ್ ಒಬೆರಾಯ್, ಕಾಜಲ್ ಅಗರ್ವಾಲ್, ಅಕ್ಷರಾ ಹಾಸನ್ ಸೇರಿದಂತೆ ದೊಡ್ಡ ತಾರಾಬಳಗವಿದ್ದ 'ವಿವೇಗಂ' ಸಿನಿಮಾ ಕನ್ನಡದಲ್ಲಿ 'ಕಮಾಂಡೋ' ಆಗಿ ಬಿಡುಗಡೆ ಆಗಲಿದೆ.

ಹರಿವು ಕ್ರಿಯೇಷನ್ಸ್ ಮೂಲಕ 'ವಿವೇಗಂ' ಚಿತ್ರ ಕನ್ನಡಕ್ಕೆ ಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಡಬ್ಬಿಂಗ್ ಪರ ಅಭಿಯಾನ ಶುರು ಆದ್ಮೇಲೆ, ಹರಿವು ಕ್ರಿಯೇಷನ್ಸ್ 'ವಿವೇಗಂ' ಚಿತ್ರವನ್ನ ಕನ್ನಡಕ್ಕೆ ಡಬ್ ಮಾಡಿದೆ.
ಪ್ರತಿಷ್ಟಿತ ಸೋನಿ ಮ್ಯೂಸಿಕ್ ಕಡೆಯಿಂದ ನಾಳೆ (ಭಾನುವಾರ - ಆಗಸ್ಟ್ 5) ಬೆಳಗ್ಗೆ 10 ಕ್ಕೆ 'ಕಮಾಂಡೋ' ಚಿತ್ರದ ಟೀಸರ್ ನಿಮ್ಮ ಮುಂದೆ ಬರಲಿದೆ.
English summary
Tamil film 'Vivegam' is releasing in its Kannada dubbed version as 'Commando'.


Click it and Unblock the Notifications