ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆಗ್ತಿದೆ 'ಕಾಂಚನ 3' ಸಿನಿಮಾ
ಡಬ್ಬಿಂಗ್ ಸಿನಿಮಾಗಳ ಬರುವಿಕೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ತಮಿಳಿನ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗುತ್ತಿದೆ.
'ಕಾಂಚನ' ಸೀರಿಸ್ ತಮಿಳಿನಲ್ಲಿ ಸಖತ್ ಫೇಮಸ್. ಈಗ ಆ ಸರಣಿಯ ಮತ್ತೊಂದು ಸಿನಿಮಾ 'ಕಾಂಚನ 3' ಬಿಡುಗಡೆಗೆ ರೆಡಿ ಇದೆ. ಈ ಸಿನಿಮಾ ಇದೇ ತಿಂಗಳ 19ಕ್ಕೆ ಬಿಡುಗಡೆಯಾಗುತ್ತಿದೆ. ತಮಿಳಿನ ಈ ಚಿತ್ರ ತೆಲುಗು ಹಾಗೂ ಕನ್ನಡಕ್ಕೆ ಡಬ್ ಆಗುತ್ತಿದೆ.
'ಕಾಂಚನ' ಸರಣಿಯ ಎರಡು ಚಿತ್ರಗಳು ಕನ್ನಡಕ್ಕೆ ರಿಮೇಕ್ ಆಗಿತ್ತು. ಉಪೇಂದ್ರ ಈ ಸಿನಿಮಾದಲ್ಲಿ ನಾಯಕನಾಗಿದ್ದರು. ಆದರೀಗ ಮೂರನೇ ಸಿನಿಮಾ ನೇರವಾಗಿ ಡಬ್ ಆಗಿ ಬರುತ್ತಿದೆ.

ರಾಘವ ಲಾರೆನ್ಸ್ ಈ ಸಿನಿಮಾನ ನಟನೆ ಹಾಗೂ ನಿರ್ದೇಶನ ಮಾಡಿದ್ದಾರೆ. ವೇದಿಕಾ ಈ ಚಿತ್ರದ ನಾಯಕಿಯಾಗಿದ್ದಾರೆ. ಕೆ ಎಸ್ ಕೆ ಶೋ ರೀಲ್ ಹಾಗೂ ಬಸವರಾಜ್ ಈ ಚಿತ್ರದ ಕರ್ನಾಟಕದ ವಿತರಣೆಯನ್ನು ಪಡೆದುಕೊಂಡಿದ್ದಾರೆ.
ಈ ಹಿಂದೆ ಅಜಿತ್ ನಟನೆಯ ಕೆಲ ಸಿನಿಮಾಗಳು ಡಬ್ ಆಗಿ ಕನ್ನಡಕ್ಕೆ ಬಂದಿತ್ತು. ತೆಲುಗಿನ 'ರಂಗಸ್ಥಳಂ' ಕೂಡ ಸದ್ಯದಲ್ಲಿಯೇ ಡಬ್ ಆಗಿ ಬಿಡುಗಡೆಯಾಗಲಿದೆ.
English summary
Actor Raghava Lawrence starring 'Kanchana 3' will dubbed and releasing in kannada.


Click it and Unblock the Notifications