For Quick Alerts
  ALLOW NOTIFICATIONS  
  For Daily Alerts

  'ರೆಮೋ' ಆಡಿಯೋ ಲಾಂಚ್ ಗೆ ದಿನಗಣನೆ ಶುರು

  By ಸೋನಿ
  |

  ವಿಭಿನ್ನ ಪೋಸ್ಟರ್ ಗಳ ಮೂಲಕ ಭಾರಿ ಸುದ್ದಿ ಮಾಡುತ್ತಿರುವ ತಮಿಳು ಚಿತ್ರ 'ರೆಮೋ' ಚಿತ್ರದಿಂದ ಮತ್ತೊಂದು ಹಾಟ್ ನ್ಯೂಸ್ ಹೊರಬಿದ್ದಿದೆ. ಮೊನ್ನೆ-ಮೊನ್ನೆ 'ಸಿರಿಕ್ಕಾದೆ' ಎಂಬ ವಿಶೇಷ ಪ್ರೊಮೋಷನಲ್ ವಿಡಿಯೋ ರಿಲೀಸ್ ಮಾಡಿದ ಚಿತ್ರತಂಡ ಇದೀಗ ಆಡಿಯೋ ಬಿಡುಗಡೆಗೆ ದಿನ ಗೊತ್ತು ಮಾಡಿದೆ.

  ಸದ್ಯಕ್ಕೆ ಕಾಲಿವುಡ್ ನಲ್ಲಿ ಲೀಡಿಂಗ್ ನಲ್ಲಿರುವ ಕಾಮಿಡಿ ನಟ ಕಮ್ ಹೀರೋ ಶಿವಕಾರ್ತಿಕೇಯನ್ ಮತ್ತು ಮುದ್ದು ಮುಖದ ನಟಿ ಕೀರ್ತಿ ಸುರೇಶ್ ಜುಗಲ್ ಬಂದಿಯಲ್ಲಿ ಮೂಡಿಬರುತ್ತಿರುವ 'ರೆಮೋ' ಚಿತ್ರದ ಆಡಿಯೋ ಸೆಪ್ಟೆಂಬರ್ 5 ರಂದು ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.[ಆನ್ ಲೈನ್ ಲೀಕ್ ತಡೆಯಲು 'ರೆಮೋ' ಫಸ್ಟ್ ಶೋ ತಮಿಳುನಾಡಿನಲ್ಲಿ ಮಾತ್ರ]

  ಚೆನ್ನೈನಲ್ಲಿ ಅದ್ಧೂರಿ ಸಮಾರಂಭ ಮಾಡುವ ಮೂಲಕ ಈ ಚಿತ್ರದ ಆಡಿಯೋ ಬಿಡುಗಡೆ ಮಾಡಲು, ಚಿತ್ರದ ನಿರ್ಮಾಣ ತಂಡ 24AM ಸ್ಟುಡಿಯೋ ನಿರ್ಧರಿಸಿದೆ.

  Tamil Movie 'Remo' Audio launch event on September 5th

  ಇನ್ನು ಅದೇ ದಿನದಂದು ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿರುವ 'ಸಿರಿಕ್ಕಾದೆ' ಇಂಗ್ಲೀಷ್ ವರ್ಷನ್ 'ಕಮ್ ಕ್ಲೋಸರ್' ಪ್ರೊಮೋಷನ್ ವಿಡಿಯೋ ಕೂಡ ಬಿಡುಗಡೆ ಆಗುತ್ತಿದೆ. ನಾಳೆ ಬಿಡುಗಡೆ ಆಗಬೇಕಿದ್ದ ಈ ವಿಡಿಯೋ ಸಾಂಗ್ ಕೆಲವು ಕಾರಣಗಳಿಂದ ಮುಂದಕ್ಕೆ ಹೋಗಿದೆ.[ಸಂಗೀತ ಪ್ರಿಯರನ್ನು ಸಮ್ಮೋಹನಗೊಳಿಸಲು ಸಜ್ಜಾದ ಅನಿರುದ್ಧ್ ರವಿಚಂದರ್]

  ಇನ್ನು 'ರೆಮೋ' ಚಿತ್ರದ ಫಸ್ಟ್ ಕಾಪಿ ನೋಡಿದ ನಿರ್ಮಾಪಕ ಆರ್.ಡಿ ರಾಜಾ ಅವರು ನಿರ್ದೇಶಕ ಬಾಕ್ಕಿಯರಾಜ್ ಅವರನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ. ಮೊದಲ ನಿರ್ದೇಶನವಾದರೂ ಕೂಡ, ತುಂಬಾ ಚೆನ್ನಾಗಿ ಸಿನಿಮಾ ಮೂಡಿಬಂದಿದೆ.

  ಆದ್ದರಿಂದ ನಿಮ್ಮ ಮುಂದಿನ ಸಿನಿಮಾ ಕೂಡ 24AM ಸ್ಟುಡಿಯೋ ಬ್ಯಾನರ್ ಅಡಿಯಲ್ಲೇ ಮೂಡಿಬರಲಿದೆ ಎಂದು ಈಗಲೇ ನಿರ್ಮಾಪಕ ಆರ್.ಡಿ ರಾಜಾ ಅವರು ಟ್ವಿಟ್ಟರ್ ಮೂಲಕ ಘೋಷಿಸಿದ್ದಾರೆ.

  English summary
  Remo Movie's Mega Audio launch event is confirmed on September 5th. And the English version of Sirikkadhey "Come Closer" is also shifted to september 5th to grace the audio launch much bigger. After seeing the first copy of Remo 24AM studios RD Raja Confirmed Bakkiyaraj the director to do a another movie under the same banner.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X