»   » ಆನ್ ಲೈನ್ ಲೀಕ್ ತಡೆಯಲು 'ರೆಮೋ' ಫಸ್ಟ್ ಶೋ ತಮಿಳುನಾಡಿನಲ್ಲಿ ಮಾತ್ರ

ಆನ್ ಲೈನ್ ಲೀಕ್ ತಡೆಯಲು 'ರೆಮೋ' ಫಸ್ಟ್ ಶೋ ತಮಿಳುನಾಡಿನಲ್ಲಿ ಮಾತ್ರ

Posted By: Sony
Subscribe to Filmibeat Kannada

ಕಾಲಿವುಡ್ ಕಾಮಿಡಿ ನಟ ಶಿವಕಾರ್ತಿಕೇಯನ್ ಮತ್ತು ನಗು ಮುಖದ ನಟಿ ಕೀರ್ತಿ ಸುರೇಶ್ ಒಂದಾಗಿ ಕಾಣಿಸಿಕೊಂಡಿರುವ ತಮಿಳು ಚಿತ್ರ 'ರೆಮೋ' ಶೂಟಿಂಗ್ ಕಂಪ್ಲೀಟ್ ಆಗಿದ್ದು, ತೆರೆಗೆ ಅಪ್ಪಳಿಸಲು ತಯಾರಾಗಿದೆ.

ನಿರ್ದೇಶಕ ಭಾಗ್ಯರಾಜ್ ಕಣ್ಣನ್ ಅವರು ನಿರ್ದೇಶನ ಮಾಡಿರುವ ಈ ಸಿನಿಮಾ ತಮಿಳು ಸಿನಿಪ್ರಿಯರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈಗಾಗಲೇ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಸಾರಥ್ಯದಲ್ಲಿ, ಚಿತ್ರದ ಪ್ರಚಾರಾರ್ಥವಾಗಿ 'ಸಿರಿಕ್ಕಾದೆ' ಎಂಬ ಸ್ಪೆಷಲ್ ವಿಡಿಯೋ ಸಾಂಗ್ ಕೂಡ ತೆರೆಕಂಡು ಭಾರಿ ರೆಸ್ಪಾನ್ಸ್ ಗಳಿಸಿದೆ.[ಸಂಗೀತ ಪ್ರಿಯರನ್ನು ಸಮ್ಮೋಹನಗೊಳಿಸಲು ಸಜ್ಜಾದ ಅನಿರುದ್ಧ್ ರವಿಚಂದರ್]

Tamil Movie 'Remo' to release in overseas markets a day later

ಇದೀಗ ಸಿನಿಮಾ ಬಿಡುಗಡೆಗೆ ಮೊದಲೇ ಆನ್ ಲೈನ್ ನಲ್ಲಿ ಲೀಕ್ ಆಗುವುದನ್ನು ತಡೆಯುವ ಕಾರಣದಿಂದ, ಮೊದಲು ಬರೀ ತಮಿಳುನಾಡಿನಲ್ಲಿ ಮಾತ್ರ 'ರೆಮೋ' ಚಿತ್ರವನ್ನು ಬಿಡುಗಡೆ ಮಾಡಲು, ಚಿತ್ರದ ನಿರ್ಮಾಣ ತಂಡ 24AM ಸ್ಟುಡಿಯೋ ನಿರ್ಧರಿಸಿದೆ.

Tamil Movie 'Remo' to release in overseas markets a day later

ಇಡೀ ವಿಶ್ವದಾದ್ಯಂತ ಏಕಕಾಲದಲ್ಲಿ ಸಿನಿಮಾ ತೆರೆಕಂಡರೆ ಅಥವಾ ಪ್ರೀಮಿಯರ್ ಶೋಗಳನ್ನು ಮಾಡಿದರೆ, ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

Tamil Movie 'Remo' to release in overseas markets a day later

ಆದ್ದರಿಂದ ಅಕ್ಟೋಬರ್ 7ರಂದು, ಮೊದಲು ತಮಿಳುನಾಡು, ಚೆನ್ನೈಯಾದ್ಯಂತ ಮುಖ್ಯ ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆಕಂಡು, ಮೊದಲ ಶೋ ಆದ ನಂತರವೇ, ಬೇರೆ ರಾಜ್ಯಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ.

Tamil Movie 'Remo' to release in overseas markets a day later

ಚಿತ್ರದಲ್ಲಿ ನಟ ಶಿವಕಾರ್ತಿಕೇಯನ್ ಅವರು ಹೆಣ್ಣು ಮತ್ತು ಗಂಡು ಎರಡು ಪಾತ್ರದಲ್ಲಿ ಮಿಂಚಿದ್ದು, ಪ್ರೇಕ್ಷಕರನ್ನು ಹೊಟ್ಟೆ ಹಿಡಿದು ನಗಿಸಲು ಎಲ್ಲಾ ತಯಾರಿ ನಡೆಸಿದ್ದಾರೆ. ಅನಿರುದ್ಧ್ ರವಿಚಂದರ್, ಕೆ.ಎಸ್ ರವಿಕುಮಾರ್, ಕೀರ್ತಿ ಸುರೇಶ್, ಶಿವಕಾರ್ತಿಕೇಯನ್ ಒಂದಾಗಿ ಕಾಣಿಸಿಕೊಂಡಿರುವ 'ರೆಮೋ' ಅಕ್ಟೋಬರ್ 7ಕ್ಕೆ ತೆರೆಗೆ ಬರಲಿದೆ.

English summary
The producers, 24 AM Studios, have now announced that their Tamil film 'Remo' will release in Tamil Nadu first and will release overseas a day later. Tamil Actor Sivakarthikeyan, Actress Keerthy Suresh in the lead role. The movie is directed by Bhagyaraj Kannan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada