twitter
    For Quick Alerts
    ALLOW NOTIFICATIONS  
    For Daily Alerts

    ಜನರ ಪ್ರಾರ್ಥನೆ ಫಲಿಸಲಿಲ್ಲ, 'ಅಮ್ಮ' ಜಯಲಲಿತಾ ಇನ್ನಿಲ್ಲ

    By Harshitha
    |

    ಕೋಟ್ಯಾಂತರ ಜನರ ಪ್ರಾರ್ಥನೆಗೆ ಫಲ ಸಿಗಲಿಲ್ಲ. 'ಅಮ್ಮನ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿ' ಎಂಬ ಅಭಿಮಾನಿಗಳ ಕೂಗು ದೇವರಿಗೆ ಕೇಳಿಸಲಿಲ್ಲ. ಹೃದಯ ಸ್ಥಂಭನಕ್ಕೆ ಒಳಗಾಗಿದ್ದ ತಮಿಳುನಾಡಿನ 'ಅಮ್ಮ' ಸೆಲ್ವಿ ಜಯಲಲಿತಾ ಬದುಕುಳಿಯಲಿಲ್ಲ.

    ಕಳೆದ 74 ದಿನಗಳಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಸಿ.ಎಂ ಜೆ.ಜಯಲಲಿತಾ ಅವರಿಗೆ ಭಾನುವಾರ (ಡಿಸೆಂಬರ್ 4) ಹೃದಯ ಸ್ಥಂಭನ ಸಂಭವಿಸಿತ್ತು. ತೀವ್ರ ನಿಗಾ ಘಟಕದಲ್ಲಿ ತಜ್ಞರ ತಂಡ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. [ತಮಿಳುನಾಡಿನ 'ಅಮ್ಮ' ಜೆ ಜಯಲಲಿತಾ ವಿಧಿವಶ]

    tamil-nadu-chief-minister-jayalalithaa-passes-away

    ಹೃದಯ ಸ್ಥಂಭನವಾದ ಬಳಿಕ ರಾತ್ರಿಯೇ ಆಂಜಿಯೋಪ್ಲಾಸ್ಟಿ ಸರ್ಜರಿ ಕೂಡ ಮಾಡಲಾಗಿತ್ತು. 68 ವರ್ಷ ವಯಸ್ಸಿನ ಜಯಲಲಿತಾ ಅವರ ಹೃದಯ ಬಡಿತ ಸುಸ್ಥಿತಿಯಲ್ಲಿಡಲು Extracorporeal membrane ಸಾಧಕವನ್ನು ಬಳಸಿಕೊಳ್ಳಲಾಗಿತ್ತು. ECMO ಜೊತೆಗೆ ಜೀವ ಸಂರಕ್ಷಕ ಸಾಧನಗಳನ್ನು ಉಪಯೋಗಿಸಿ, ಹೃದಯ ಹಾಗೂ ಶ್ವಾಸಕೋಶ ಸಮಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಲಾಗಿತ್ತು. ಕೃತಕ ಉಸಿರಾಟ ಸಾಧನದ ನೆರವಿನಿಂದ ಚಿಕಿತ್ಸೆ ನೀಡುತ್ತಿದ್ದರೂ, ವಿಧಿ ಲಿಖಿತವೇ ಬೇರೆ ಆಗಿತ್ತು.

    ಸೋಮವಾರ ರಾತ್ರಿ 11.30 ರ ಸುಮಾರಿಗೆ ತಮಿಳುನಾಡು ಮುಖ್ಯಮಂತ್ರಿ, ಮಾಜಿ ತಾರೆ ಪುರುಚ್ಚಿ ತಲೈವಿ ಜೆ.ಜಯಲಲಿತಾ ಇಹಲೋಕ ತ್ಯಜಿಸಿದರು.[ತಮಿಳುನಾಡಿನಲ್ಲಿ ಶಾಲೆ, ಕಾಲೇಜುಗಳಿಗೆ 3 ದಿನಗಳ ರಜೆ ಘೋಷಣೆ]

    ದೇಹದಲ್ಲಿ ನೀರಿನ ಕೊರತೆ ಹಾಗೂ ಜ್ವರದ ಕಾರಣದಿಂದ ಸೆಪ್ಟೆಂಬರ್ 22 ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ಜಯಲಲಿತಾ ದಾಖಲಾಗಿದ್ದರು. ಅಂದಿನಿಂದ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ ಎಂಬ ಸುದ್ದಿಯ ಸಂತಸ ಆಚರಿಸುವಷ್ಟರಲ್ಲಿ ಹೃದಯ ಸ್ಥಂಭನವಾದ ಆಘಾತಕಾರಿ ಸುದ್ದಿ ಅಪೋಲೋ ಆಸ್ಪತ್ರೆಯಿಂದ ಹೊರಬಿತ್ತು.

    ಕರ್ನಾಟಕದ ಮೇಲುಕೋಟೆಯ ಅಯ್ಯಂಗಾರಿ ಬ್ರಾಹ್ಮಣ ಕುಟುಂಬದಲ್ಲಿ ಜಯರಾಮ್ ಹಾಗೂ ವೇದವಲ್ಲಿ ದಂಪತಿಯ ಪುತ್ರಿಯಾಗಿ ಜನಿಸಿದ ಕೋಮಲವಲ್ಲಿ ಮುಂದೆ ನಟಿಯಾಗಿ, ತಮಿಳುನಾಡಿನ ಮುಖ್ಯಮಂತ್ರಿಯಾದ ಜಯಲಲಿತಾ ಇನ್ನೂ ನೆನಪು ಮಾತ್ರ.

    English summary
    Tamil Nadu Chief Minister Jayalalithaa(68) passed away at the Apollo Hospital, Chennai on Monday (December 5th) after undergoing treatment for over 70 days. J.Jayalalithaa suffered a cardiac arrest on Sunday (December 4th), following her condition remained critical.
    Tuesday, December 6, 2016, 2:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X