For Quick Alerts
  ALLOW NOTIFICATIONS  
  For Daily Alerts

  ಜೂನಿಯರ್ ರಾಕಿ ಆಗಮನ: ತಮಿಳುನಾಡಿನಲ್ಲಿ ಯಶ್ ಅಭಿಮಾನಿಗಳ ಸಂಭ್ರಮಾಚರಣೆ

  |
  Tamil Nadu Yash fans celebration for Junior Yash | FILMIBEAT KANNADA

  ನಟ ಯಶ್ ಕರ್ನಾಟಕದಲ್ಲಿ ಮಾತ್ರವಲ್ಲದೆ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಚಿತ್ರರಂಗದಲ್ಲಿಯೂ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. 'ಕೆಜಿಎಫ್' ಎಂಬ ಮಹಾ ಸಿನಿಮಾ ಅವರನ್ನು ನ್ಯಾಷನಲ್ ಸ್ಟಾರ್ ಮಾಡಿದೆ.

  ಇತ್ತೀಚಿಗಷ್ಟೆ ಯಶ್ ಮನೆಗೆ ತಮಿಳು ನಾಡಿನ ಅಭಿಮಾನಿಗಳು ಆಗಮಿಸಿದ್ದರು. ಆ ಬಳಿಕ ಕೇರಳದ ಅಭಿಮಾನಿಗಳು ಬಂದಿದ್ದರು. ತಮಿಳು ನಾಡಿನಲ್ಲಿ ಯಶ್ ಅಭಿಮಾನಿ ಸಂಘ ನೊಂದಣೆ ಆಗಿತ್ತು. ಇದೀಗ ತಮಿಳು ನಾಡಿನಲ್ಲಿ ಯಶ್ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ.

  ಜೂನಿಯರ್ ಯಶ್ ನ ಬರಮಾಡಿಕೊಂಡ ರಾಕಿಂಗ್ ದಂಪತಿಜೂನಿಯರ್ ಯಶ್ ನ ಬರಮಾಡಿಕೊಂಡ ರಾಕಿಂಗ್ ದಂಪತಿ

  ನಿನ್ನೆ (ಅಕ್ಟೊಬರ್ 30) ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಯಶ್ ಎರಡನೇ ಮಗುವಿನ ನಗು ಕಂಡಿದ್ದಾರೆ. ಜೂನಿಯರ್ ಯಶ್ ಆಗಮನ ಅಭಿಮಾನಿಗಳಲ್ಲಿ ಖುಷಿ ನೀಡಿದೆ. ಮಗು ಹುಟ್ಟಿದ ಸಂಭ್ರಮವನ್ನು ತಮಿಳುನಾಡಿನಲ್ಲಿ ಆಚರಣೆ ಮಾಡಿದ್ದು, ಇದರ ವಿಡಿಯೋವನ್ನು ಟ್ವಿಟ್ಟರ್ ಖಾತೆಗಳಲ್ಲಿ ಅಭಿಮಾನಿಗಳು ಹಂಚಿಕೊಂಡಿದ್ದಾರೆ.

  ಯಶ್ ಹಾಗೂ ರಾಧಿಕಾ ಪಂಡಿತ್ ಅಭಿಮಾನಿಗಳು, ಸ್ನೇಹಿತರು ಹಾಗೂ ನಟಿ ಸುಮಲತಾ ಅಂಬರೀಶ್ ಮುದ್ದು ಮಗುವನ್ನು ಸ್ವಾಗತ ಮಾಡಿದ್ದಾರೆ. ಟ್ವಿಟ್ಟರ್ ಖಾತೆಯಲ್ಲಿ ಯಶ್ ದಂಪತಿಗೆ ಮಂಡ್ಯ ಸಂಸದೆ ವಿಶ್ ಮಾಡಿದ್ದಾರೆ.

  ಸೀಮಂತ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾಸೀಮಂತ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ

  ಯಶ್ ಅಭಿಮಾನಿಗಳು ಸದ್ಯ, 'ಕೆಜಿಎಫ್ 2' ಸಿನಿಮಾಗಾಗಿ ಕಾಯುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷದ ಏಪ್ರಿಲ್ ನಲ್ಲಿ ಬಿಡುಗಡೆ ಆಗಬಹುದು. ನವೆಂಬರ್ ರಂದು ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಸಿನಿಮಾ ರೀ ರಿಲೀಸ್ ಆಗುತ್ತಿದೆ.

  Read more about: tamil nadu yash fans ಯಶ್
  English summary
  Tamil Nadu Yash fans celebration as Radhika Pandit and Yash blessed with baby boy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X