»   » ಯಶ್ 'KGF' ಟೀಸರ್ ಖದರ್ ನೋಡಿ ಕರಗಿದ ತಮಿಳುನಾಡು ಪ್ರೇಕ್ಷಕರು

ಯಶ್ 'KGF' ಟೀಸರ್ ಖದರ್ ನೋಡಿ ಕರಗಿದ ತಮಿಳುನಾಡು ಪ್ರೇಕ್ಷಕರು

Posted By:
Subscribe to Filmibeat Kannada
ಯಶ್ ಅವರ ಕೆ.ಜಿ.ಎಫ್ ಟೀಸರ್ ಬಗ್ಗೆ ತಮಿಳುನಾಡು ಪ್ರೇಕ್ಷಕರು ಏನು ಹೇಳಿದ್ದಾರೆ ಗೊತ್ತಾ ? | FIlmibeat Kannada

ರಾಕಿಂಗ್ ಸ್ಟಾರ್ ಯಶ್ ಅವರ ಈ ವರ್ಷದ ಹುಟ್ಟುಹಬ್ಬದ ವಿಶೇಷವಾಗಿ 'ಕೆ.ಜಿ.ಎಫ್' ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಈಗಾಗಲೇ ಯೂಟ್ಯೂಬ್ ನಲ್ಲಿ 'ಕೆ.ಜಿ.ಎಫ್' ಸಿನಿಮಾ ಟೀಸರ್ ದೊಡ್ಡ ಮಟ್ಟದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದೆ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಪ್ರೇಕ್ಷಕರು ಸಹ ಈ ಸಿನಿಮಾಗೆ ಫಿದಾ ಆಗಿದ್ದಾರೆ.

'ಕೆ.ಜಿ.ಎಫ್' ಕನ್ನಡದಲ್ಲಿ ಬರುತ್ತಿರುವ ದೊಡ್ಡ ಬಜೆಟ್ ಸಿನಿಮಾ. ಪಕ್ಕದ ಇಂಡಸ್ಟ್ರಿಯ ಸಿನಿಮಾಗಳಿಗೆ ಸೆಡ್ಡು ಹೊಡೆಯುವುದಕ್ಕೆ ಈ ಸಿನಿಮಾ ಸಜ್ಜಾಗಿದೆ. ಪ್ರತಿ ಹಂತದಲ್ಲಿಯೂ ದೊಡ್ಡ ಸುದ್ದಿ ಮಾಡುತ್ತಿರುವ ಈ ಸಿನಿಮಾದ ಬಗ್ಗೆ ಕನ್ನಡ ಸಿನಿಮಾಭಿಮಾನಿಗಳು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದೇ ರೀತಿ ಸಿನಿಮಾ ಚಿತ್ರೀಕರಣ ಅದ್ದೂರಿಯಾಗಿ ನಡೆಯುತ್ತಿದೆ. ಇದೆಲ್ಲದರ ನಡುವೆ ತಮಿಳುನಾಡು ಪ್ರೇಕ್ಷಕರನ್ನು ಸಹ 'ಕೆ.ಜಿ.ಎಫ್' ಸಿನಿಮಾ ಗಮನ ಸೆಳೆದಿದೆ. ಮುಂದೆ ಓದಿ...

ತಮಿಳುನಾಡಿನ ಅಭಿಮಾನಿಗಳು

ತಮಿಳುನಾಡಿನಲ್ಲಿರುವ ಯಶ್ ಅಭಿಮಾನಿಗಳು ಯೂಟ್ಯೂಬ್ ನಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು 'ಕೆ.ಜಿ.ಎಫ್' ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಅಭಿಮಾನಿಗಳ ಮನವಿ

''ಅಣ್ಣ ನಾವು ತಮಿಳುನಾಡಿನಿಂದ ಮಾತನಾಡುತ್ತಿದ್ದೇವೆ. ನೀವು ಅಂದರೆ ನಮಗೆ ತುಂಬ ಇಷ್ಟ. ನೀವು ನಮಗೆ ಸ್ಫೂರ್ತಿ. ನಿಮ್ಮನ್ನು ಒಮ್ಮೆ ಭೇಟಿ ಮಾಡಬೇಕು ಎಂಬುದು ನಮ್ಮ ದೊಡ್ಡ ಆಸೆ ಆಗಿದೆ. ನಿಮ್ಮ 'ಕೆ.ಜಿ.ಎಫ್' ಸಿನಿಮಾಗಾಗಿ ನಾವು ಕಾಯುತ್ತಿದ್ದೇವೆ.'' ಎಂದು ತಮಿಳುನಾಡಿನ ಅಭಿಮಾನಿಗಳು ವಿಡಿಯೋ ಮೂಲಕ ತಮ್ಮ ಅಭಿಮಾನವನ್ನು ಹೇಳಿಕೊಂಡಿದ್ದಾರೆ.

ಯಶ್ ಹುಟ್ಟುಹಬ್ಬದ ಕಾಣಿಕೆಯಾಗಿ ಬಂತು 'KGF' ಟೀಸರ್

ಟೀಸರ್ ರಿವ್ಯೂ

ಈಗಾಗಲೇ 'ಕೆ.ಜಿ.ಎಫ್' ಚಿತ್ರದ ಟೀಸರ್ ಅನ್ನು ಯೂಟ್ಯೂಬ್ ನಲ್ಲಿ ಅನೇಕ ವಿದೇಶಿಗರು ನೋಡಿ ಮೆಚ್ಚಿಕೊಂಡಿದ್ದಾರೆ. ವಿದೇಶದ ಸಾಕಷ್ಟು ಸಿನಿ ಪ್ರೇಮಿಗಳು ಟೀಸರ್ ನೋಡಿ ರಿವ್ಯೂ ಮಾಡಿದ್ದಾರೆ.

ಕೆ.ಜಿ.ಎಫ್ ಕ್ರೇಜ್

ಎಲ್ಲ ಕಡೆ 'ಕೆ.ಜಿ.ಎಫ್' ಕ್ರೇಜ್ ಸಿಕ್ಕಾಪಟ್ಟೆ ಜೋರಾಗಿದೆ. ಅಭಿಮಾನಿಗಳು ತಮ್ಮ ಕಾರ್, ಬೈಕ್, ಹೇರ್ ಕಟ್ ಎಲ್ಲದರ ಮೇಲೆ 'ಕೆ.ಜಿ.ಎಫ್' ಎಂದು ಬರೆಸಿಕೊಂಡು ಚಿತ್ರಕ್ಕಾಗಿ ಕಾತುರ ದಿಂದ ಕಾಯುತ್ತಿದ್ದಾರೆ.

ರಿಲೀಸ್ ಆಗಿದ್ದು 'KGF' ಟೀಸರ್, ಟ್ರೆಂಡ್ ಆಗಿದ್ದು 'ಕೋಟಿಗೊಬ್ಬ 3' !

ಎರಡುವರೆ ಮಿಲಿಯನ್

ಸದ್ಯ ಯೂಟ್ಯೂಬ್ 'ಕೆ.ಜಿ.ಎಫ್' ಚಿತ್ರದ ಟೀಸರ್ ಎರಡುವರೆ ಮಿಲಿಯನ್ ಹಿಟ್ಸ್ ಪಡೆದಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತಿಹೆಚ್ಚು ನೋಡಲಾದ ಟೀಸರ್ ಗಳಲ್ಲಿ ಇದು ಕೂಡ ಒಂದಾಗಿದೆ.

English summary
Rocking Star Yash's Tamil Nadu fans spoke about 'KGF' kannada movie. 'KGF' movie teaser was released in Yash 33th birthday. The movie directed by Prashanth Neel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X