For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ವಿಜಯ್ ಅಭಿಮಾನಿಗಳಿಂದ ಕನ್ನಡಿಗರ ಮೇಲೆ ಹಲ್ಲೆ.!

  By Bharath Kumar
  |

  ''ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ'' ಎಂಬ ಮಾತಿದೆ. ಆದ್ರೆ, ಈ ಮಾತಿಗೆ ವಿರುದ್ಧವಾದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಕನ್ನಡಿಗರ ಮೇಲೆ ಕ್ಷುಲ್ಲಕ ಕಾರಣಕ್ಕೆ ತಮಿಳು ಅಭಿಮಾನಿಗಳು ಹಲ್ಲೆ ಮಾಡಿದ್ದಾರೆ.

  ಕರ್ನಾಟಕ ಸೇರಿದಂತೆ ದೇಶಾದ್ಯಂತ ತಮಿಳು ನಟ ವಿಜಯ್ ಅಭಿನಯದ 'ಮೆರ್ಸಲ್' ಸಿನಿಮಾ ತೆರೆಕಂಡಿದೆ. ಬೆಂಗಳೂರಿನ ಸಂಪಿಗೆ ಚಿತ್ರಮಂದಿರದಲ್ಲೂ 'ಮೆರ್ಸಲ್' ಬಿಡುಗಡೆಯಾಗಿದ್ದು, ಚಿತ್ರಮಂದಿರದ ಬಳಿ ವಿಜಯ್ ಅಭಿಮಾನಿಗಳು ಕನ್ನಡಿಗರನ್ನ ಕ್ಷುಲ್ಲಕ ಕಾರಣಕ್ಕೆ ಥಳಿಸಿದ್ದಾರೆ. ಕನ್ನಡಿಗರ ಮೇಲೆ ಈ ಹಲ್ಲೆ ಮಾಡಿದ ಘಟನೆಯ ಪೂರ್ತಿ ವಿವರ ಮುಂದೆ ಓದಿ.....

  ವಿಜಯ್ ಕೌಟೌಟ್ ನೋಡಿದ್ದಕ್ಕೆ ಗಲಾಟೆ

  ವಿಜಯ್ ಕೌಟೌಟ್ ನೋಡಿದ್ದಕ್ಕೆ ಗಲಾಟೆ

  ಸಂಪಿಗೆ ಚಿತ್ರಮಂದಿರದಲ್ಲಿ 'ಮೆರ್ಸಲ್' ಸಿನಿಮಾ ಬಿಡುಗಡೆಯಾದ ಹಿನ್ನೆಲೆ ಚಿತ್ರಮಂದಿರದ ಎದುರು ದೊಡ್ಡ ದೊಡ್ಡ ಕಟೌಟ್ ಗಳನ್ನ ನಿಲ್ಲಿಸಲಾಗಿದೆ. ಈ ವೇಳೆ ಥಿಯೇಟರ್ ಮುಂದೆ ಹೋಗುತ್ತಿದ್ದ ಕನ್ನಡಿಗರು ಕಟೌಟ್ ನೋಡಿದ್ದಾರೆ. ಕೇವಲ ಕಟೌಟ್ ನೋಡಿದ್ದಕ್ಕೆ ಅಲ್ಲಿದ್ದ ವಿಜಯ್ ಅಭಿಮಾನಿಗಳು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

  'ನಮ್ಮ ಬಾಸ್' ಎಂದು ಅಟ್ಟಹಾಸ

  'ನಮ್ಮ ಬಾಸ್' ಎಂದು ಅಟ್ಟಹಾಸ

  ''ನಮ್ಮ ಬಾಸ್, ನಮ್ಮ ಬಾಸ್ ಕಟೌಟ್ ತಲೆ ಎತ್ತಿ ನೋಡುತ್ತೀರಾ ಎಂದು'' ಅವಾಚ್ಯ ಶಬ್ದಗಳಿಂದ ನಿಂದಿಸಿ ಕನ್ನಡಿಗರ ಮೇಲೆ ಹಲ್ಲೆ ಮಾಡಿದ್ದಾರೆ. ಅತಿ ಕೆಟ್ಟ ಪದಗಳನ್ನ ಪದಪ್ರಯೋಗ ಮಾಡಿದ್ದಾರೆ. ಈ ಘಟನೆಯಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದರೂ, ಅದನ್ನ ಲೆಕ್ಕಿಸಿದೆ ರಸ್ತೆಯಲ್ಲಿ ಹೊಡೆದಿದ್ದಾರೆ.

  ಕರ್ನಾಟಕದಲ್ಲಿ ಪರಭಾಷೆ ಚಿತ್ರಗಳ ಹಾವಳಿ

  ಕರ್ನಾಟಕದಲ್ಲಿ ಪರಭಾಷೆ ಚಿತ್ರಗಳ ಹಾವಳಿ

  ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗಿಂತ ಹೆಚ್ಚಾಗಿ ಪರಭಾಷೆಯ ಸಿನಿಮಾಗಳಿಗೆ ಆಧ್ಯತೆ ನೀಡಲಾಗುತ್ತಿದೆಯಾ ಎಂಬ ಪ್ರಶ್ನೆ ಮತ್ತೆ ಉದ್ಭವಾಗುತ್ತಿದೆ. ಯಾಕಂದ್ರೆ, ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳ ಕೊರತೆ ಇದೆ. ಹೀಗಿದ್ದರೂ, ತಮಿಳು ಮತ್ತು ತೆಲುಗು ಸಿನಿಮಾಗಳಿಗೆ ಚಿತ್ರಮಂದಿರ ಕೊಡ್ತಾರೆ. ಹೀಗೆ, ಅವಕಾಶ ಮಾಡಿಕೊಟ್ಟರು ಈ ರೀತಿಯ ದಬ್ಬಾಳಿಕೆ ನಡೆಸುತ್ತಿದ್ದಾರೆ.

  ಕನ್ನಡ ಹೋರಾಟಗಾರ ಖಂಡನೆ

  ಕನ್ನಡ ಹೋರಾಟಗಾರ ಖಂಡನೆ

  ಈ ಘಟನೆ ಸಾಮಾಜಿಕ ಮಾಧ್ಯಮ ಮತ್ತು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಕನ್ನಡಪರ ಹೋರಾಟಗಾರರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಹಲ್ಲೆ ಮಾಡಿದವರನ್ನ ಕೂಡಲೇ ಬಂಧಿಸಬೇಕು ಮತ್ತು ಕನ್ನಡಿಗರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇಲ್ಲವಾದಲ್ಲಿ, ದೊಡ್ಡ ಹೋರಾಟ ಮಾಡಲಾಗುತ್ತೆ ಎಂಬ ಎಚ್ಚರಿಕೆ ನೀಡಿದ್ದಾರೆ.

  ಕನ್ನಡಿಗರ ಮೇಲೆ ಹಲ್ಲೆ: 'ಮೆರ್ಸಲ್' ಚಿತ್ರಕ್ಕೆ ಬಿಸಿ ಮುಟ್ಟಿಸಿದ ಹೋರಾಟಗಾರರು.!

  English summary
  Kannadigas were attacked by Tamil Actor Vijay fans near Sampige theater in Bangalore

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X