Don't Miss!
- Sports
ಈ ಗೆಲುವಿನ ಹೆಚ್ಚಿನ ಶ್ರೇಯಸ್ಸು ಬೌಲರ್ಗಳಿಗೆ ಸಲ್ಲಬೇಕು: ವಾಸಿಂ ಜಾಫರ್ ಹೇಳಿಕೆ
- News
ಮಕ್ಕಳಾಗಲು ಮಾನವನ ಮೂಳೆ ಪೌಡರ್ ತಿನ್ನುವಂತೆ ಒತ್ತಾಯ, ಪ್ರಕರಣ ದಾಖಲು
- Lifestyle
ಮಗುವಿಗೆ ಗ್ಯಾಸ್ ಪ್ರಾಬ್ಲಂ ಆದಾಗ ಹೀಗೆ ಮಾಡಿ
- Automobiles
ಮತ್ತಷ್ಟು ತಡವಾಗಲಿದೆ ಹೊಸ ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ಎಸ್ಯುವಿ ಬಿಡುಗಡೆ
- Finance
NRI PAN Card: ಎನ್ಆರ್ಐ ಪ್ಯಾನ್ ಕಾರ್ಡ್ಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
- Technology
2023ರಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ವಿಕ್ರಾಂತ್ ರೋಣ' ನಂತರ 'ಪೊನ್ನಿಯಿನ್ ಸೆಲ್ವನ್' ನಿರ್ಮಾಪಕರ ಜೊತೆ ಕಿಚ್ಚನ ಚಿತ್ರ! ಕನ್ನಡದಲ್ಲಿ ಇದೇ ಮೊದಲು
ಈ ವರ್ಷ ವಿಕ್ರಾಂತ್ ರೋಣ ಮೂಲಕ ಪ್ಯಾನ್ ಇಂಡಿಯಾ ಮಟ್ಟಕ್ಕೆ ಸದ್ದು ಮಾಡಿ ನೂರು ಕೋಟಿ ಕ್ಲಬ್ ಸೇರಿರುವ ಕಿಚ್ಚ ಸುದೀಪ್ ಮುಂದೆ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಹಾಗೂ ಪ್ರಶ್ನೆ ಅಭಿಮಾನಿಗಳಲ್ಲಿ ಹಾಗೂ ಚಿತ್ರ ರಸಿಕರಲ್ಲಿ ಇತ್ತು. ಇನ್ನು ಉಪೇಂದ್ರ ನಟನೆಯ ಹಾಗೂ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ಕಬ್ಜದಲ್ಲೂ ಸಹ ಕಿಚ್ಚ ಸುದೀಪ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಚಾರ ಕಿಚ್ಚನ ಅಭಿಮಾನಿಗಳಲ್ಲಿ ಖುಷಿ ತಂದಿತ್ತಾದರೂ ತಮ್ಮ ನೆಚ್ಚಿನ ನಟ ಪೂರ್ಣ ಪ್ರಮಾಣದ ನಾಯಕನಾಗಿ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾಯುತ್ತಿದ್ದರು.
ಇನ್ನು ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಮುಕ್ತಾಯವಾದ ಬಳಿಕ ಶುರುವಾದ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯಲ್ಲಿ ನಿರತರಾಗಿದ್ದು, ಯಾವ ನಿರ್ದೇಶಕನಿಗೆ ಅಥವಾ ಯಾವ ನಿರ್ಮಾಪಕನಿಗೆ ಕಿಚ್ಚ ಸುದೀಪ್ ತಮ್ಮ ಡೇಟ್ಸ್ ನೀಡಲಿದ್ದಾರೆ ಎಂಬುದರ ಬಗ್ಗೆ ಯಾವುದೇ ರೀತಿಯ ಸಣ್ಣ ಮಾಹಿತಿಯೂ ಸಹ ಹೊರ ಬಿದ್ದಿರಲಿಲ್ಲ. ಆದರೆ ಈಗ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರದ ಕುರಿತು ಸುದ್ದಿಯೊಂದು ಹೊರಬಿದ್ದಿದ್ದು ತಮಿಳಿನ ದೊಡ್ಡ ಪ್ರೊಡಕ್ಷನ್ ಹೌಸ್ ಜತೆ ಸುದೀಪ್ ಕೈ ಜೋಡಿಸಿದ್ದಾರೆ ಎನ್ನಲಾಗುತ್ತಿದೆ.
ಹೌದು, ಕಿಚ್ಚ ಸುದೀಪ್ ನಟನೆಯ 46ನೇ ಚಿತ್ರಕ್ಕೆ ತಮಿಳು ಚಿತ್ರರಂಗದ ಬೃಹತ್ ಚಿತ್ರ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆ ಎಂಬ ಸುದ್ದಿ ಹೊರಬಿದ್ದಿದ್ದು, ಚಿತ್ರ ಯಾವಾಗ ಸೆಟ್ಟೇರಲಿದೆ, ಚಿತ್ರಕ್ಕೆ ಬಂಡವಾಳ ಹೂಡಲಿರುವ ಪ್ರೊಡಕ್ಷನ್ ಹೌಸ್ ಯಾವುದು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ಲೈಕಾ ಪ್ರೊಡಕ್ಷನ್ಸ್ ಬಂಡವಾಳ, ಚಿತ್ರೀಕರಣ ಯಾವಾಗ?
ಕಿಚ್ಚ ಸುದೀಪ್ ನಟಿಸಲಿರುವ ಮುಂದಿನ ಚಿತ್ರಕ್ಕೆ ತಮಿಳು ಚಿತ್ರರಂಗದ ದೈತ್ಯ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹೂಡಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಸದ್ಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಿರತರಾಗಿರುವ ಕಿಚ್ಚ ಜನವರಿ ತಿಂಗಳಿನಲ್ಲಿ ಬಿಗ್ ಬಾಸ್ ಮುಗಿಸಿ ಕೆಲ ದಿನಗಳು ವಿಶ್ರಾಂತಿ ತೆಗೆದುಕೊಂಡು ಅದೇ ತಿಂಗಳು ಲೈಕಾ ಪ್ರೊಡಕ್ಷನ್ ನಿರ್ಮಾಣದ ಚಿತ್ರದಲ್ಲಿ ನಟಿಸಲಿದ್ದಾರೆ. ಅಂದರೆ ಮುಂಬರುವ ಜನವರಿ ತಿಂಗಳಿನಲ್ಲಿ ಕಿಚ್ಚ ಸುದೀಪ್ ಹಾಗೂ ಲೈಕಾ ಪ್ರೊಡಕ್ಷನ್ಸ್ ಸಿನಿಮಾ ಸೆಟ್ಟೇರುವುದು ಖಚಿತ. ಇನ್ನು ಈಗಾಗಲೇ ಲೈಕಾ ತಂಡ ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ಈ ಕುರಿತು ಮಾತನಾಡಿದೆ ಎಂದೂ ಸಹ ಮಾಹಿತಿ ಇದೆ.

ಇದೇ ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಬಂಡವಾಳ!
ಇನ್ನು ಕೋಟ್ಯಂತರ ರೂಪಾಯಿಗಳನ್ನು ಸ್ಟಾರ್ ನಟರ ಚಿತ್ರಗಳಿಗೆ ಸರಾಗವಾಗಿ ಹೂಡುವ ಲೈಕಾ ಪ್ರೊಡಕ್ಷನ್ಸ್ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದಕ್ಕೆ ಬಂಡವಾಳ ಹೂಡಲು ತೀರ್ಮಾನಿಸಿದೆ. ಈ ಹಿಂದೆ ತೆಲುಗು ಹಾಗೂ ಹಿಂದಿ ಭಾಷೆಯ ಚಿತ್ರಗಳಿಗೂ ಬಂಡವಾಳ ಹೂಡಿದ್ದ ಲೈಕಾ ಪ್ರೊಡಕ್ಷನ್ಸ್ ತಮಿಳಿನಲ್ಲಿ ರಜಿನಿಕಾಂತ್ ಅಭಿನಯದ ಅನೇಕ ತೆಲುಗು ಚಿತ್ರಗಳು ಸೇರಿದಂತೆ ಶಿವ ಕಾರ್ತಿಕೇಯನ್, ಧನುಷ್, ವಿಜಯ್, ಅಜಿತ್ ಅಭಿನಯದ ಚಿತ್ರಗಳು ಹಾಗೂ ಇತ್ತೀಚೆಗಷ್ಟೆ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಚಿತ್ರಕ್ಕೂ ಬಂಡವಾಳ ಹೂಡಿತ್ತು. ಈ ಹಿಂದೆ ಬಹುಕೋಟ ವೆಚ್ಚದಲ್ಲಿ ಮೂಡಿ ಬಂದಿದ್ದ ಶಂಕರ್ ಹಾಗೂ ರಜಿನಿ ಕಾಂಬಿನೇಶನ್‌ನ ರೊಬೊ ಚಿತ್ರ ಸರಣಿಗೂ ಸಹ ಇದೇ ಸಂಸ್ಥೆ ಬಂಡವಾಳ ಹಾಕಿತ್ತು.

ಕನ್ನಡದವರು ತಮಿಳಿಗೆ, ತಮಿಳಿನವರು ಕನ್ನಡಕ್ಕೆ!
ಸದ್ಯ ಕನ್ನಡದ ದೊಡ್ಡ ಸಿನಿಮಾ ನಿರ್ಮಾಪಕರು ತಮಿಳು ಚಿತ್ರ ನಿರ್ಮಿಸುವ ಹಾಗೂ ತಮಿಳಿನ ದೊಡ್ಡ ನಿರ್ಮಾಪಕರು ಕನ್ನಡ ಚಿತ್ರ ನಿರ್ಮಿಸುವ ಹೊಸ ಟ್ರೆಂಡ್ ಶುರುವಾಗಿದೆ ಎನ್ನಬಹುದು. ಹೌದು, ಲೈಕಾ ಪ್ರೊಡಕ್ಷನ್ಸ್ ಕನ್ನಡದಲ್ಲಿ ಕಿಚ್ಚ ಸುದೀಪ್ ಚಿತ್ರಕ್ಕೆ ಬಂಡವಾಳ ಹೂಡಲು ಮುಂದಾಗಿದ್ದರೆ, ಇತ್ತ ಹೊಂಬಾಳೆ ಫಿಲ್ಮ್ಸ್ ತಮಿಳಿನಲ್ಲಿ ಕೀರ್ತಿ ಸುರೇಶ್ ಅಭಿನಯದ ರಘು ತಾತಾ ಎಂಬ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.