'ಘೋಸ್ಟ್' ಶಿವಣ್ಣನ ಜೊತೆ ವಿಜಯ್ ಸೇತುಪತಿ? ಆ ಭೇಟಿಯ ಸೀಕ್ರೆಟ್ ರಿವೀಲ್ ಆಯ್ತು!
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಅರ್ಚನಾ ಜೋಯಿಸ್, ಬಾಲಿವುಡ್ ನಟ ಅನುಪಮ್ ಖೇರ್ ಚಿತ್ರದಲ್ಲಿ ನಟಿಸೋದು ಪಕ್ಕಾ ಆಗಿತ್ತು. ಇನ್ನು ಮಲಯಾಳಂ ನಟ ಜಯರಾಂ ಕೂಡ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶ್ರೀನಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರ್ತಿದೆ. ಇತ್ತೀಚೆಗೆ ನಿರ್ಮಾಪಕರ ಸಂದೇಶ್ ನಾಗರಾಜ್ ತಮಿಳು ನಟ ವಿಜಯ್ ಸೇತುಪತಿ ಅವರನ್ನು ಭೇಟಿ ಮಾಡಿದ್ದರು.
ಸಂದೇಶ್ ನಾಗರಾಜ್ ತಮಿಳುನಾಡಿನಲ್ಲಿ ವಿಜಯ್ ಸೇತುಪತಿ ಮಾತುಕತೆ ನಡೆಸಿದ್ದ ಫೋಟೊಗಳು ವೈರಲ್ ಆಗಿತ್ತು. ಇದನ್ನು ನೋಡಿ ವಿಜಯ್ ಸೇತುಪತಿ ಕನ್ನಡದ 'ಘೋಸ್ಟ್' ಚಿತ್ರದಲ್ಲಿ ನಟಿಸ್ತಾರಾ? ಎನ್ನುವ ಅನುಮಾನ ಮೂಡಿತ್ತು. ಕಾರಣ ಸಂದೇಶ್ ನಾಗರಾಜ್ ಆ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಕಾಲಿವುಡ್ ಸೆನ್ಸೇಷನಲ್ ನಟ ವಿಜಯ್ ಸೇತುಪತಿ ಕನ್ನಡಕ್ಕೆ ಮತ್ತೆ ಬರ್ತಾರಾ? ಎನ್ನುವ ಚರ್ಚೆ ಶುರುವಾಗಿತ್ತು. ಶಿವಣ್ಣ- ಸೇತುಪತಿ ಸ್ಕ್ರೀನ್ ಶೇರ್ ಮಾಡಿದರೆ ಸಿನಿರಸಿಕರಿಗೆ ಹಬ್ಬವೇ ಸರಿ.
ಸದ್ಯ ಸಂದೇಶ್ ನಾಗರಾಜ್ ಹಾಗೂ ವಿಜಯ್ ಸೇತುಪತಿ ಭೇಟಿಯ ಸೀಕ್ರೆಟ್ ರಿವೀಲ್ ಆಗಿದೆ. ಸಿನಿಮಾ ಬಗ್ಗೆಯೇ ಈ ಭೇಟಿ ವೇಳೆ ಚರ್ಚೆ ನಡೆದಿದೆ. ಆದರೆ ಯಾವ ಸಿನಿಮಾ? ಎನ್ನುವ ಬಗ್ಗೆ ಮುಂದೆ ಓದಿ.

'ಘೋಸ್ಟ್' ಚಿತ್ರದಲ್ಲಿ ಸೇತುಪತಿ?
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ಘೋಸ್ಟ್' ಸಿನಿಮಾ ಜೊತೆಗೆ ಪ್ರಭುದೇವ ನಟನೆಯ 'ವೂಲ್ಫ್' ಸಿನಿಮಾ ಕೂಡ ನಿರ್ಮಾಣ ಆಗುತ್ತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾ ಮೂಡಿ ಬರ್ತಿದೆ. 'ವೂಲ್ಫ್' ಚಿತ್ರಕ್ಕಾಗಿ ವಿಜಯ್ ಸೇತುಪತಿ ಹಾಡೊಂದನ್ನು ಹಾಡುತ್ತಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಲು ಸಂದೇಶ್ ನಾಗರಾಜ್ ಚೆನ್ನೈಗೆ ಹೋಗಿ ವಿಜಯ್ ಸೇತುಪತಿ ಬಗ್ಗೆ ಚರ್ಚೆ ನಡೆಸಿ ಬಂದಿದ್ದಾರೆ. ಸೇತುಪತಿ ಹಾಡು ಹಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಭು- ವಸಿಷ್ಠ ಜೋಡಿಯ 'ವೂಲ್ಫ್'
ವಿನು ವೆಂಕಟೇಶ್ ನಿರ್ದೇಶನದ ಸೈಕಲಾಜಿಕಲ್ ಥ್ರಿಲ್ಲರ್ 'ವೂಲ್ಫ್' ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಪಾಂಡಿಚೇರಿ, ಚೆನ್ನೈ, ಬೆಂಗಳೂರು, ಅಂಡಮಾನ್, ನಿಕೋಬಾರ್ ಸೇರಿದಂತೆ ಹಲವು ಕಡೆಗಳಲ್ಲಿ ಈ ಸಿನಿಮಾ ಚಿತ್ರೀಕರಣ ನಡೆದಿದೆ. ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಇತ್ತೀಚೆಗೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಚಿತ್ರಸ ಫಸ್ಟ್ ಲುಕ್ ರಿಲೀಸ್ ಮಾಡಿ ಶುಭ ಕೋರಿದ್ದರು.

'ಘೋಸ್ಟ್' ಚಿತ್ರದಲ್ಲಿ ಸೇತುಪತಿ?
'ವೂಲ್ಫ್' ಚಿತ್ರದಲ್ಲಿ ವಿಜಯ್ ಸೇತುಪತಿ ಹಾಡು ಹಾಡುವದು ಪಕ್ಕಾ ಆಗಿದೆ. ಹಾಗಾದರೆ 'ಘೋಸ್ಟ್' ಸಿನಿಮಾದಲ್ಲಿ ಶಿವಣ್ಣನ ಜೊತೆಗೂ ನಟಿಸ್ತಾರಾ? ಎಂದರೆ ಸಾಧ್ಯತೆ ಇದೆ ಎಂದು ಚಿತ್ರದ ನಿರ್ದೇಶನ ಶ್ರೀನಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಪ್ರಯತ್ನ ನಡೀತಿದೆ. ವಿಜಯ್ ಸೇತುಪತಿ 'ಘೋಸ್ಟ್' ಚಿತ್ರದಲ್ಲಿ ನಟಿಸಿದರೂ ಅಚ್ಚರಿಪಡಬೇಕಿಲ್ಲ ಎಂದು ಹೇಳಿದ್ದಾರೆ.

ಕನ್ನಡದಲ್ಲಿ ನಟಿಸಿರುವ ಸೇತುಪತಿ
ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರಂಭದ ದಿನಗಳಲ್ಲಿ ವಿಜಯ್ ಸೇತುಪತಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಹೌದು 'ಅಖಾಡ' ಎನ್ನುವ ಸಿನಿಮಾದಲ್ಲಿ ತಮಿಳು ನಟ ಬಣ್ಣ ಹಚ್ಚಿದ್ದರು. ಅದನ್ನು ಅವರು ಇನ್ನು ಮರೆತ್ತಿಲ್ಲ. ಕನ್ನಡ ಕಲಿತು ಸಿನಿಮಾ ಡೈಲಾಗ್‌ಗಳನ್ನು ಹೇಳಲು ಪ್ರಯತ್ನ ಪಟ್ಟಿದ್ದರಂತೆ. ಕನ್ನಡದಿಂದ ಕರಿಯರ್ ಆರಂಭಿಸಿದರೆ ದೊಡ್ಡ ಸಕ್ಸಸ್ ಸಿಗುತ್ತೆ ಎಂದು ಆ ಚಿತ್ರದ ಮ್ಯಾನೇಜರ್ ಹೇಳಿದ್ದರಂತೆ. ಈಗ ಅದು ನಿಜವಾಗಿದೆ. ಸೇತುಪತಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.


Click it and Unblock the Notifications











