ತಮಿಳರ ಮುಂದೆ ಕನ್ನಡದ 'ಮಫ್ತಿ' ನಟನನ್ನು ಬಾಯ್ತುಂಬ ಹೊಗಳಿದ ಸಿಂಬು

By ಫಿಲ್ಮಿಬೀಟ್ ಡೆಸ್ಕ್

ಕನ್ನಡದ ಪ್ರತಿಭೆಗಳು ಭಾರತದ ಉದ್ದಗಲಕ್ಕೂ ಮಿಂಚುತ್ತಿವೆ. ಇದು ಇಂದಿನ ಬೆಳವಣಿಗೆಯಲ್ಲ. ಹಲವು ವರ್ಷಗಳಿಂದ ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಪರಭಾಷೆಯಲ್ಲಿ ಯಶಸ್ಸು ಕೂಡ ಗಿಟ್ಟಿಸಿಕೊಂಡಿದ್ದಾರೆ. ಈಗ ಕನ್ನಡದ ಮತ್ತೊಬ್ಬ ನಟ ಮಧು ಗುರುಸ್ವಾಮಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರೋ ಮಧು ಗುರುಸ್ವಾಮಿ ಖಳನಾಯಕನ ಪಾತ್ರಗಳಲ್ಲಿಯೇ ಹೆಚ್ಚಾಗಿ ನಟಿಸಿದ್ದಾರೆ. 'ಮಫ್ತಿ' ಸಿನಿಮಾದ ಸಿಂಗ ಪಾತ್ರದಲ್ಲಿ ಅಪಾರ ಮೆಚ್ಚುಗೆ ಗಳಿಸಿದ್ದಾರೆ. ಇಷ್ಟೇ ಅಲ್ಲದೆ, ದರ್ಶನ್ ಸಿನಿಮಾ 'ಚಿಂಗಾರಿ'ಯಲ್ಲಿ ವಿನೀಶ್ ಮಲ್ಹೋತ್ರ ಪಾತ್ರದಲ್ಲಿ, ಯಶ್ ಸಿನಿಮಾ 'ಜಾನು' ನಲ್ಲಿ ಸಂಗಮೇಶ್ ಪಾತ್ರ, ಶಿವಣ್ಣ ನಟಿಸಿದ 'ಭಜರಂಗಿ'ಯಲ್ಲಿ ಮಂತ್ರವಾದಿಯಾಗಿ ನಟಿಸಿದ್ದಾರೆ. ಹಾಗೇ ಶರಣ್ ನಟನೆಯ 'ಜೈ ಮಾರುತಿ 800' ಸಿನಿಮಾದಲ್ಲಿ ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಮಧು ಗುರುಸ್ವಾಮಿ ಎರಡು ವರ್ಷಗಳ ಕಾಲ ನಟನೆಯಲ್ಲಿ ತರಬೇತಿ ಪಡೆದಿದ್ದರು. ಆ ಬಳಿಕ 'ಡೆಡ್ಲಿ-2' ಸಿನಿಮಾ ಮೂಲಕ ನಟನೆ ಜೊತೆಗೆ ಸಹಾಯಕ ನಿರ್ದೇಶಕನಾಗಿ ಎಂಟ್ರಿ ಕೊಟ್ಟರು. ಆ ಬಳಿಕ ಮಧು ಗುರುಸ್ವಾಮಿ ಕನ್ನಡ ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಕನ್ನಡದಲ್ಲಿ ಜನಪ್ರಿಯತೆ ಗಳಿಸಿದ ಬಳಿಕ 'ಸಾಕ್ಷ್ಯಂ' ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ.

Tamil Star Simbu Prised Kannada Actor Madhu Guruswamy While Pattu Thala movie event

ಕನ್ನಡ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ರಂಜಿಸಿದ್ದ ನಟ ಟಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಕನ್ನಡ, ತೆಲುಗು ಬಳಿಕ ಈಗ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ 'ಮಫ್ತಿ' ರಿಮೇಕ್‌ನಲ್ಲಿ 'ಪತ್ತು ತಲಾ' ಸಿನಿಮಾ ಅದೇ ಸಿಂಗ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಮಿಳಿನ ಸ್ಟಾರ್ ನಟ ಸಿಂಬು ನಟಿಸಿರುವ 'ಪತ್ತು ತಲಾ' ಇದೇ ಮಾರ್ಚ್ 30ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ಸಿಂಗ ಪಾತ್ರ ನಿರ್ವಹಿಸಿದ್ದ ಮಧು ಗುರುಸ್ವಾಮಿ ಅದೇ ಪಾತ್ರವನ್ನು ತಮಿಳಿನಲ್ಲಿ ನಟಿಸಿದ್ದು, ಇವರ ಪಾತ್ರದ ಬಗ್ಗೆ ಕುತೂಹಲವಿದೆ. ಬಿಡುಗಡೆಗೂ ಮುನ್ನ ನಡೆದ ವೇದಿಕೆ ಮೇಲೆ ಸಿಂಬು ಕನ್ನಡದ ನಟ ಮಧು ಗುರುಸ್ವಾಮಿಯನ್ನು ಹಾಡಿ ಹೊಗಳಿಸಿದ್ದಾರೆ.

"ಮಧು ಅಂತ ಅವರ ಹೆಸರನ್ನು ಕೇಳಿರುತ್ತೀರಿ. ನಟಿಸುವುದಕ್ಕಿಂದ ಮುನ್ನ ಸಾಕಷ್ಟಿ ತಯಾರಿ ಮಾಡಿಕೊಳ್ಳುವವರು ಮಧು. ಅವರಿಗೊಂದು ಹ್ಯಾಟ್ಸಾಫ್. ಖಂಡಿತವಾಗಿಯೂ ಅತೀ ಶೀಘ್ರದಲ್ಲಿ ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಎಲ್ಲಾ ಭಾಷೆಗಳಲ್ಲೂ ಮಿಂಚುತ್ತಾರೆಂಬ ನಂಬಿಕೆ ನನಗಿದೆ. ತಮಿಳು ಸಿನಿಮಾದ ನಿರ್ದೇಶಕರಿಗೂ ನಾನು ಹೇಳುತ್ತೇನೆ. ಅವರು ಒಬ್ಬ ಒಳ್ಳೆಯ ನಟ. ಅವರನ್ನು ಬಳಸಿಕೊಂಡರೆ ಚೆನ್ನಾಗಿರುತ್ತೆ." ಎಂದು ಸಿಂಬು ಕನ್ನಡದ ನಟನಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಸಿಲಂಬರಸನ್ (ಸಿಂಬು) ನಾಯಕನಾಗಿ ನಟಿಸಿರುವ 'ಪತ್ತು ತಲಾ' ಸಿನಿಮಾಗೆ ನಿರ್ದೇಶಕ ಒಬಿಲ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ ಸ್ಟುಡಿಯೋ ಗ್ರೀನ್ ಸಂಸ್ಥೆ ನಿರ್ಮಾಪಕ ಜ್ಞಾನವೆಲ ರಾಜ ಬಂಡವಾಳ ಹೂಡಿದ್ದಾರೆ. ಸಿಂಗ ಪಾತ್ರವನ್ನು ಜ್ಞಾನವೆಲ ಮೆಚ್ಚಿ ತಮಗೆ ಅವಕಾಶ ನೀಡಿರುವುದಕ್ಕೆ 'ಮಫ್ತಿ' ನಿರ್ದೇಶಕ ನರ್ತನ್ ಕಾರಣ ವೇದಿಕೆ ಮೇಲೆ ಮಧು ಗುರುಸ್ವಾಮಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Tamil Star Simbu Prised Kannada Actor Madhu Guruswamy While Pattu Thala movie event

'ಪತ್ತು ತಲಾ' ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿರೋ ಮಧು ಗುರುಸ್ವಾಮಿ ದೊಡ್ಡ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ 'ಸಲಾರ್‌'ನಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ಲೀಡ್‌ ರೋಲ್‌ನಲ್ಲಿರೋ ಈ ಸಿನಿಮಾದಲ್ಲಿ ಮಧು ಪಾತ್ರ ಹೇಗಿರುತ್ತೆ? ಅನ್ನೋದನ್ನು ಕನ್ನಡಿಗರು ಎದುರು ನೋಡುತ್ತಿದ್ದಾರೆ.

More from Filmibeat

English summary
Tamil Star Simbu Prised Kannada Actor Madhu Guruswamy While Pattuthala movie event, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X