For Quick Alerts
  ALLOW NOTIFICATIONS  
  For Daily Alerts

  ಮಠ ಗುರುಪ್ರಸಾದ್‌ಗೆ ನಾಯಕಿಯಾದ ತಮಿಳು ಸುಂದರಿ ರಚಿತಾ

  |

  ಸ್ಯಾಂಡಲ್ ವುಡ್‌ನ ನಿರ್ದೇಶಕ ಮಠ ಗುರುಪ್ರಸಾದ್ ಸದ್ಯ ಜಗ್ಗೇಶ್ ಜೊತೆ 'ರಂಗನಾಯಕ' ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ಗುರುಪ್ರಸಾದ್ ಸದ್ಯದಲ್ಲೇ ಜಗ್ಗೇಶ್ ಜೊತೆ ರಂಗನಾಯಕ ಚಿತ್ರೀಕರಣಕ್ಕೆ ಇಳಿಯಲಿದ್ದಾರೆ.

  ಈ ನಡುವೆ ಗುರುಪ್ರಸಾದ್ ಮತ್ತೊಂದು ಸಿನಿಮಾ ಮಾಡುತ್ತಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಸಹ ಮುಗಿಸಿದ್ದಾರೆ. ಚಿತ್ರದಲ್ಲಿ ಗುರುಪ್ರಸಾದ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.

  ಪಕ್ಕಾ ಕಾಮಿಡಿ ಸಿನಿಮಾ ಇದಾಗಿದ್ದು ಚಿತ್ರಕ್ಕೆ ತಮಿಳಿನ ನಾಯಕಿಯನ್ನು ಕರೆತಂದಿದ್ದಾರೆ ಗುರುಪ್ರಸಾದ್. ತಮಿಳು ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿದ್ದ ನಟಿ ರಚಿತಾ ಮಹಾಲಕ್ಷ್ಮಿ, ಗುರುಪ್ರಸಾದ್ ಜೊತೆ ತೆರೆಹಂಚಿಕೊಂಡಿದ್ದಾರೆ. ರಚಿತಾ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಗುರುಪ್ರಸಾದ್ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ.

  ಚಿತ್ರದಲ್ಲಿ ರಚಿತಾ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

  ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಗುರುಪ್ರಸಾದ್ ಇನ್ನೊಂದು ವಾರದ ಚಿತ್ರೀಕರಣ ಮಾತ್ರ ಬಾಕಿಯುಳಿದಿದೆ. ಇನ್ನು ವಿಶೇಷ ಎಂದರೆ ಚಿತ್ರದ ಟೈಟಲ್ ಇನ್ನು ಬಹಿರಂಗವಾಗಿಲ್ಲ. ಚಿತ್ರೀಕರಣದ ಕೊನೆಯ ದಿನ ಟೈಟಲ್ ಬಹಿರಂಗಪಡಿಸುವ ಸಾಧ್ಯತೆ ಇದೆ.

  ಕಾಮಿಡಿ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಲಾಕ್ ಡೌನ್ ನಲ್ಲಿ ಕಥೆ ಬರೆದು ಈಗಾಗಲೇ ಚಿತ್ರೀಕರಣ ಸಹ ಮುಗಿಸುತ್ತಿರುವ ಗುರುಪ್ರಸಾದ್ ಹೊಸ ಸಿನಿಮಾ ಹೇಗಿರಲಿದೆ, ಯಾವಗ ಬರಲಿದೆ ಎಂದು ಕಾದುನೋಡಬೇಕು.

  English summary
  Tamil TV Actress Rachitha Mahalakshmi to make Kannada debut with Guruprasad's next movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X