ಡಾ.ರಾಜ್ ಕುಮಾರ್ ಪುತ್ರ ಪುನೀತ್ ಗೆ ತಮಿಳರಿಂದ ಅಪಮಾನ.. ಅಗೌರವ.!

By ಒನ್ಇಂಡಿಯಾ ಕನ್ನಡ ವಾರ್ತೆ

ನಟ ಸಾರ್ವಭೌಮ.. ಕನ್ನಡದ ಕಣ್ಮಣಿ.. ವರನಟ.. ಡಾ.ರಾಜ್ ಕುಮಾರ್ ಪುತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ತಮಿಳರು ಅವಮಾನ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಣ್ಣಾವ್ರ ಮಗ ಅಪ್ಪು ಕುರಿತು ತಮಿಳರು ಲೇವಡಿ ಮಾಡುತ್ತಿದ್ದಾರೆ. 'ಪುನೀತ್ ರಾಜ್ ಕುಮಾರ್ ಉತ್ತಮ ನಟ ಅಲ್ಲ. ಓರ್ವ ಕಾಮಿಡಿಯನ್' ಎಂದು ತಮಿಳು ಸಿನಿ'ಭಕ್ತ'ರು ಟ್ವಿಟ್ಟರ್ ನಲ್ಲಿ ಹೀಯಾಳಿಸುತ್ತಿದ್ದಾರೆ.['ಕನ್ನಡಿಗರು ಮುಚ್ಕೊಂಡ್ ಕೂತ್ಕೊಳ್ಳಿ': ಫೇಸ್ ಬುಕ್ನಲ್ಲಿ ತೆಲುಗು ಸಿನಿ'ಭಕ್ತ'ರ ಗೇಲಿ.!]

'ಬಾಹುಬಲಿ-2' ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಪರ ದಂಡೆತ್ತಿ ಕನ್ನಡಿಗರ ವಿರುದ್ಧ ಸಮರ ಸಾರಲು ಬಂದ ತಮಿಳಿಗರು ಕನ್ನಡ ನಟರನ್ನ ಗೇಲಿ ಮಾಡುತ್ತಿದ್ದಾರೆ. ಮುಂದೆ ಓದಿ....

ಎಲ್ಲ ಶುರು ಆಗಿದ್ದು ಇಲ್ಲಿಂದ...

ಎಲ್ಲ ಶುರು ಆಗಿದ್ದು ಇಲ್ಲಿಂದ...

ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಕನ್ನಡಿಗರನ್ನ ನಿಂದಿಸಿದ್ದ ತಮಿಳು ನಟ ಸತ್ಯರಾಜ್ ಬಹಿರಂಗ ಕ್ಷಮಾಪಣೆ ಕೇಳುವವರೆಗೂ 'ಬಾಹುಬಲಿ-2' ಚಿತ್ರದ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲ ಎಂದು ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ಆರಂಭಿಸಿದರು. ಇದನ್ನ ಖಂಡಿಸಿ, ತಮಿಳಗರು ಟ್ವಿಟ್ಟರ್ ನಲ್ಲಿ #JusticeForSathyaraj ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಸತ್ಯರಾಜ್ ಪರ ಬ್ಯಾಟಿಂಗ್ ಆರಂಭಿಸಿದರು. ಸಾಲದ್ದಕ್ಕೆ, ಕನ್ನಡಿಗರನ್ನ ತಮಿಳರು ಲೇವಡಿ ಮಾಡಲು ಶುರು ಮಾಡಿದರು.[ಕನ್ನಡಿಗರನ್ನ ಹೀಯಾಳಿಸುತ್ತಿರುವ ತಮಿಳರು: ಟ್ವಿಟ್ಟರ್ ನಲ್ಲಿ ಘೋರ ಯುದ್ಧ.!]

ಡಾ.ರಾಜ್ ಪುತ್ರ ಪುನೀತ್ ಗೆ ಅವಮಾನ.!

ಡಾ.ರಾಜ್ ಪುತ್ರ ಪುನೀತ್ ಗೆ ಅವಮಾನ.!

ಇದೇ ಸಂದರ್ಭದಲ್ಲಿ ಓರ್ವ ತಮಿಳಿಗ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಪಮಾನ ಮಾಡಿದ್ದಾನೆ. ಅಲ್ಲದೇ, ಕನ್ನಡ ಜನತೆ ಹಾಗೂ ಕನ್ನಡ ಚಿತ್ರರಂಗದ ಬಗ್ಗೆ ಕೆಲವರು ಕೀಳುಮಟ್ಟದಲ್ಲಿ ಟ್ವೀಟ್ ಮಾಡಿದ್ದಾರೆ.[ಕಟ್ಟಪ್ಪ ಕ್ಷಮೆ ಕೇಳುವವರೆಗೂ 'ಬಾಹುಬಲಿ-2' ಬಿಡುಗಡೆ ಇಲ್ಲ.! ಇದು ಕನ್ನಡಿಗರ ಕಟ್ಟಪ್ಪಣೆ.!]

ಪುನೀತ್ ರಾಜ್ ಕುಮಾರ್ ಬಗ್ಗೆ ಗೇಲಿ ಮಾಡಿದ ತಮಿಳರು

ಪುನೀತ್ ರಾಜ್ ಕುಮಾರ್ ಬಗ್ಗೆ ಗೇಲಿ ಮಾಡಿದ ತಮಿಳರು

''ಕನ್ನಡಿಗರೇ.. ಮೊದಲು ಸತ್ಯರಾಜ್ ರವರಂತಹ ಉತ್ತಮ ನಟರನ್ನ ಅನ್ವೇಷಣೆ ಮಾಡಿ ಆಮೇಲೆ ಮಾತನಾಡಿ. ಪುನೀತ್ ರಾಜ್ ಒಬ್ಬ ಕಾಮಿಡಿಯನ್. ಅವರನ್ನ ಸೂಪರ್ ಸ್ಟಾರ್ ಮಾಡಿರುವವರು ನೀವು'' ಎಂದು ತಮಿಳಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಟ್ವಿಟ್ಟರ್ ನಲ್ಲಿ ದೊಡ್ಡ ಸಮರ

ಟ್ವಿಟ್ಟರ್ ನಲ್ಲಿ ದೊಡ್ಡ ಸಮರ

ಬಾಹುಬಲಿ ಬೆಂಕಿ ತಣ್ಣಗಾಗುವ ಮುನ್ನವೇ ತಮಿಳರು ಪುನೀತ್ ರಾಜ್ ಕುಮಾರ್ ಗೆ ಅವಮಾನ ಮಾಡಿದ್ದಾರೆ. ಇದರಿಂದ ಟ್ವಿಟ್ಟರ್ ನಲ್ಲಿ ದೊಡ್ಡ ಸಮರವೇ ನಡೆಯುತ್ತಿದೆ.[ಕನ್ನಡಿಗರೇ... ತೆಲುಗಿನವರ 'ವಿಶಾಲ ಹೃದಯ'ಕ್ಕೆ ನಿಮ್ಮ ಪ್ರತಿಕ್ರಿಯೆ ಏನು.?]

ಸಿಡಿದೆದ್ದ ಕನ್ನಡಿಗರು

ಸಿಡಿದೆದ್ದ ಕನ್ನಡಿಗರು

''ಪುನೀತ್ ರಾಜ್ ಕುಮಾರ್ ಜೋಕರ್ ಆದ್ರೆ, ನಿಮ್ಮ ಕಣ್ಣಿಗೆ ಧನುಷ್ ಮತ್ತು ವಿಜಯ್ ಯಾವ ತರಹ ಕಾಣ್ತಾರೆ.? ತಮಿಳು ಹೀರೋಗಳಿಗಿಂತ ಸಾಧು ಕೋಕಿಲ ಎಷ್ಟೋ ವಾಸಿ'' ಅಂತ ಕನ್ನಡಿಗರು ಟ್ವೀಟ್ ಮಾಡಲು ಆರಂಭಿಸಿದ್ದಾರೆ.

ರಜನಿಕಾಂತ್ ಬಗ್ಗೆ ಲೇವಡಿ

ರಜನಿಕಾಂತ್ ಬಗ್ಗೆ ಲೇವಡಿ

''ರಜನಿಕಾಂತ್ ಅಭಿನಯದ '2.0' ಚಿತ್ರವನ್ನ ತಮಿಳುನಾಡಿನಲ್ಲಿ ಬ್ಯಾನ್ ಮಾಡೋಣ. ರಜನಿಕಾಂತ್ ತಮಿಳರಿಗೆ ಏನೂ ಮಾಡಿಲ್ಲ. ತಮಿಳರ ಪರ ದನಿ ಕೂಡ ಎತ್ತಿಲ್ಲ'' ಅಂತ ರಜನಿಕಾಂತ್ ವಿರುದ್ಧ ತಮಿಳರು ಲೇವಡಿ ಮಾಡುತ್ತಿದ್ದಾರೆ.

ವಿಜಯ್ ಯಾಕೆ ರೀಮೇಕ್ ಮಾಡಲ್ಲ ಗೊತ್ತಾ.?

ವಿಜಯ್ ಯಾಕೆ ರೀಮೇಕ್ ಮಾಡಲ್ಲ ಗೊತ್ತಾ.?

''ಕನ್ನಡಿಗರೇ ಮೊದಲ ನಾಗರೀಕರಾಗಿ. ಇದೇ ಕಾರಣಕ್ಕೆ ನಿಮ್ಮ ಚಿತ್ರಗಳನ್ನ ವಿಜಯ್ ರೀಮೇಕ್ ಮಾಡಲು ಮುಂದೆ ಬರಲ್ಲ'' ಎನ್ನುವ ಟ್ವೀಟ್ ಗಳಿಗೆ ಏನನ್ನಬೇಕು.?

ಕನ್ನಡ ನಟರನ್ನೇ ನೋಡಿಕೊಂಡು ಸಾಯಿರಿ.!

ಕನ್ನಡ ನಟರನ್ನೇ ನೋಡಿಕೊಂಡು ಸಾಯಿರಿ.!

''ಕನ್ನಡಿಗರಿಗೆ 'ಬಾಹುಬಲಿ-2' ನೋಡುವ ಯೋಗ್ಯತೆ ಇಲ್ಲ. ಅವರ ಹೀರೋಗಳ ಚಿತ್ರಗಳನ್ನೇ ಒದ್ದಾಡಿಕೊಂಡು ನೋಡಿ ಸಾಯಲಿ''

ಕನ್ನಡಿಗರೇ... ನಿಮ್ಮ ಅಭಿಪ್ರಾಯ ಏನು.?

ಕನ್ನಡಿಗರೇ... ನಿಮ್ಮ ಅಭಿಪ್ರಾಯ ಏನು.?

ಸತ್ಯರಾಜ್ ಪರ ವಕಾಲತ್ತು ವಹಿಸಿ.. ಕನ್ನಡಿಗರನ್ನು, ಕನ್ನಡ ಚಿತ್ರರಂಗವನ್ನ, ಕನ್ನಡ ನಟರನ್ನ, ಅದರಲ್ಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಅವಮಾನ ಮಾಡುತ್ತಿರುವುದು ಸರಿಯೇ... ಇದಕ್ಕೆ ನಿಮ್ಮ ಅಭಿಪ್ರಾಯ ಏನು.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Tamilians makes offensive tweets against Puneeth Rajkumar and Kannadigas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X