ಬೆತ್ತಲಾದ ನಟಿ ಅಮಲಾ ಪೌಲ್ ವಿರುದ್ಧ ದೂರು ದಾಖಲು
ಬಹಭಾಷ ನಟಿ ಅಮಲಾ ಪೌಲ್ ಅವರು ಚಿತ್ರಕ್ಕಾಗಿ ಬೆತ್ತಲಾದ ಫೋಟೋ ಕೆಲವು ದಿನಗಳಿಂದ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಮಲಾ ನಗ್ನ ಫೋಟೋ ರಿಲೀಸ್ ಆಗುತ್ತಿದ್ದಂತೆ ಅಮಲಾ ವಿರದ್ಧ ಮತ್ತು ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಆದ್ರೀಗ ಅಮಲಾ ವಿರುದ್ಧ ತಮಿಳು ರಾಜಕಾರಣಿ ರಾಜೇಶ್ವರಿ ಪ್ರಿಯಾ ಪೊಲೀಸರಿಗೆ ದೂರು ನೀಡಿದ್ದಾರೆ.
'ಆಡೈ' ಚಿತ್ರಕ್ಕಾಗಿ ನಟಿ ಅಮಲಾ ಪೌಲ್ ಬೆತ್ತಲಾಗಿದ್ರು.ಈ ಚಿತ್ರದ ಒಂದು ದೃಶ್ಯದಲ್ಲಿ ಭಯಾನಕವಾಗಿ ಕಾಣಿಸಿಕೊಂಡಿದ್ದರು. ಇದರಿಂದ ಸಿಡಿದೆದ್ದ ರಾಜೇಶ್ವರಿ ಪ್ರಿಯಾ ಅಮಲಾ ನಗ್ನತೆಯನ್ನು ಪ್ರಚೋದನೆ ಮಾಡುತ್ತಿದ್ದಾರೆ. ಅಲ್ಲದೆ ತಮಿಳು ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.
ಇನ್ನು ಚಿತ್ರ ರಿಲೀಸ್ ಆಗದಂತೆ ತಡೆ ನೀಡಲು ಸಾಧ್ಯವಿಲ್ಲ, ಈಗಾಗಲೆ ಸಿನಿಮಾ ಎ ಸರ್ಟಿಫಿಕೇಟ್ ಪಡೆದು ಪ್ರದರ್ಶನ ಕಾಣುತ್ತಿದೆ. ಆದ್ರೆ ಚಿತ್ರದ ಪೋಸ್ಟರ್ ಗಳು ಪ್ರಚೋದನ ಕಾರಿಯಾಗಿದ್ದು, ಇದರಿಂದ ಮಕ್ಕಳು ಹಾಳಾಗುತ್ತಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ಅಮಲಾ ತಮಿಳುನಾಡಿನವರಲ್ಲ. ಆಕೆಗೆ ತಮಿಳು ಸಂಸ್ಕೃತಿಯ ಬಗ್ಗೆ ಯಾವುದೆ ಗೌರವವಿಲ್ಲ, ತಮಿಳು ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ. ಹಣಕ್ಕಾಗಿ ಮತ್ತು ಖ್ಯಾತಿಗಳಿಸಲು ಅಮಲಾ ಏನು ಬೇಕಾದರು ಮಾಡಲು ಸಿದ್ಧರಿರುತ್ತಾರೆ ಎಂದು ಅಮಲ ಪೌಲ್ ವಿರುದ್ಧ ಕಿಡಿಕಾರಿದ್ದಾರೆ.
ಈ ನಡುವೆ ಆಡೈ ಚಿತ್ರ ಪ್ರದರ್ಶನಕ್ಕೆ ಮತ್ತೊಂದು ವಿಘ್ನ ಎದುರಾಗಿದೆ. ತಾಂತ್ರಿಕ ಸಮಸ್ಯೆಯಿಂದ ಚೆನ್ನೈನ ಹಲವೆಡೆ ಬೆಳಗ್ಗೆಯ ಶೋ ಸ್ಥಗಿತಗೊಂಡಿತ್ತು. ಚಿತ್ರವನ್ನು ಎನ್ ಕ್ರಿಪ್ ಮಾಡಲು ಬಳಸುವ ಕೀ ಡೆಲಿವರಿ ಮೆಸೇಜ್ ಸಿಗದ ಕಾರಣ ಹಲವು ಚಿತ್ರಮಂದಿರಗಳಲ್ಲಿ ಮೊದಲ ಶೋ ರದ್ದಾಗಿತ್ತು. ಆಡೈ ಸುಮಾರು 700ಕ್ಕು ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಕೆಲವು ದಿನಗಳಿಂದ ಭಾರಿ ಸದ್ದುಮಾಡುತ್ತಿದ್ದ ಆಡೈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.


Click it and Unblock the Notifications











