»   » 'ಜೋಡಿಹಕ್ಕಿ' ಜಾನಕಿ ಟೀಚರ್ ಬಳಿಕ ರಾಮಣ್ಣಗೆ ಅದೃಷ್ಟ ಖುಲಾಯಿಸಿತು

'ಜೋಡಿಹಕ್ಕಿ' ಜಾನಕಿ ಟೀಚರ್ ಬಳಿಕ ರಾಮಣ್ಣಗೆ ಅದೃಷ್ಟ ಖುಲಾಯಿಸಿತು

Posted By:
Subscribe to Filmibeat Kannada
ಜೋಡಿ ಹಕ್ಕಿ ರಾಮಣ್ಣನ ಅಸಲಿ ಕಥೆ | jodi hakki ramanna's new story | Filmibeat Kannada

ಜೋಡಿಹಕ್ಕಿ ಕಿರುತೆರೆಯಲ್ಲಿ ಭಾರಿ ಪ್ರಖ್ಯಾತಿ ಪಡೆದುಕೊಂಡಿರುವ ಧಾರಾವಾಹಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಜೋಡಿಹಕ್ಕಿ ಸೀರಿಯಲ್ ಯನ್ನು ಸಾಕಷ್ಟು ಜನರು ಮೆಚ್ಚಿಕೊಂಡಿದ್ದಾರೆ. ಹಳ್ಳಿ ಸೊಗಡಿನ ಕತೆಯನ್ನ ಈಗಿನ ಜನರಿಗೆ ಇಷ್ಟವಾಗುವಂತೆ ತೋರಿಸುತ್ತಿರುವುದನ್ನ ವೀಕ್ಷಕರು ಇಷ್ಟ ಪಟ್ಟಿದ್ದಾರೆ.

ಧಾರಾವಾಹಿಯಲ್ಲಿ ಜಾನಕಿ ಟೀಚರ್ ಪಾತ್ರವನ್ನ ನಿರ್ವಹಿಸುತ್ತಿರುವ ಚೈತ್ರ ಪಿಆರ್ ಕೆ ಬ್ಯಾನರ್ ನಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಪಡೆದುಕೊಂಡು ಈಗ ನಾಯಕಿಯಾಗಿ ಮಿಂಚುತ್ತಿದ್ದಾರೆ. ಜಾನಕಿ ಟೀಚರ್ ನಂತರ ಪೈಲ್ವಾನ್ ರಾಮಣ್ಣನ ಅದೃಷ್ಟವೂ ಬದಲಾಗಿದೆ.

ಅಮ್ಮನಂತೆ ಫೇಮಸ್ ಆದ ಸಿಂಪಲ್ ಹುಡ್ಗಿಯ ಪುತ್ರಿ

ಪೈಲ್ವಾನ್ ರಾಮಣ್ಣನ ಪಾತ್ರಧಾರಿ ತಾಂಡವ ರಾಮ್ ಈಗ ಬೆಳ್ಳಿ ತೆರೆಗೆ ಕಾಲಿಟ್ಟಿದ್ದಾರೆ. ಜೋಡಿಹಕ್ಕಿ ಧಾರಾವಾಹಿ ಮೂಲಕ ಅಪಾರ ಅಭಿಮಾನಿ ಬಳಗವನ್ನು ಪಡೆದುಕೊಂಡಿರುವ ಪೈಲ್ವಾನ್ ರಾಮಣ್ಣ ಪ್ರೇಕ್ಷಕರಿಗೆ ಕಥೆ ಹೇಳಲು ಬರ್ತಿದ್ದಾರೆ. ಏನ್ ಕಥೆ ಹೇಳ್ತಾರೆ? ಯಾವುದರ ಬಗ್ಗೆ ? ಎಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಜೋಡಿಹಕ್ಕಿ ರಾಮಣ್ಣ ಈಗ ಹೀರೋ

ಜೋಡಿಹಕ್ಕಿ ಧಾರಾವಾಹಿಯ ನಟ ತಾಂಡವ ರಾಮ್ ಈಗ ಸಿನಿಮಾ ನಾಯಕರಾಗಿದ್ದಾರೆ. 'ಒಂದ್ ಕಥೆ ಹೇಳ್ಲಾ' ಚಿತ್ರದಲ್ಲಿ ತಾಂಡವ್ ರಾವ್ ಅಭಿನಯ ಮಾಡಿದ್ದು ಸಿನಿಮಾವನ್ನ ಗಿರೀಶ್ ನಿರ್ದೇಶನ ಮಾಡುತ್ತಿದ್ದಾರೆ.

ಒಂದು ಸಿನಿಮಾ ಐದು ಕಥೆ

'ಒಂದ್ ಕಥೆ ಹೇಳ್ಲಾ' ಸಿನಿಮಾ ಮೂಲಕ ನಿರ್ದೇಶಕ ಗಿರೀಶ್ ಐದು ಕಥೆಯನ್ನ ಜನರ ಮುಂದೆ ತರಲಿದ್ದಾರೆ. ಇದೊಂದು ವಿಭಿನ್ನ ಪ್ರಯತ್ನವಾಗಿದ್ದು ಗಿರೀಶ್ ಈ ಹಿಂದೆ 'ಅಟೆಂಪ್ಟ್ ಟು ಮರ್ಡರ್' ಚಿತ್ರದಲ್ಲಿ ಡೈರೆಕ್ಟರ್ ಟೀಂ ನಲ್ಲಿ ಕೆಲಸ ಮಾಡಿದ್ದಾರೆ.

ಕ್ರೌಂಡ್ ಫಂಡಿಂಗ್ ಸಿನಿಮಾ

ಒಂದ್ ಕಥೆ ಹೇಳ್ಲಾ ಕ್ರೌಂಡ್ ಫಂಡಿಂಗ್ ನಲ್ಲಿ ನಿರ್ಮಾಣ ಆಗುತ್ತಿರುವ ಚಿತ್ರ. ಈಗಾಗಲೇ ಟಾಕಿ ಪೋಷನ್ಸ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಒಂದು ಹಾಡನ್ನ ಮಾತ್ರ ಬಾಕಿ ಉಳಿಸಿಕೊಂಡಿದೆ.

ಬಹುತೇಕ ಹೊಸಬರು

ಗಿರೀಶ್ ಸಿನಿಮಾವನ್ನ ನಿರ್ದೇಶನ ಮಾಡಿದ್ರೆ ಭಕೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ತಾಂಡವ್ ರಾಮ್ ಜೊತೆಯಲ್ಲಿ ಶಕ್ತಿ ಸೋಮಣ್ಣ, ಪ್ರತೀಕ್, ತಾರಾ ಸದಾಶಿವಯ್ಯ, ಪ್ರಿಯಾಂಕ ಇನ್ನೂ ಅನೇಕರು ಅಭಿನಯ ಮಾಡಿದ್ದಾರೆ. ಕರ್ನಾಟಕದ ಸುತ್ತಾ-ಮುತ್ತ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಮುಂದಿನ ತಿಂಗಳ ಅಂತ್ಯ ಒಂದ್ ಕಥೆ ಹೇಳ್ಲಾ ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದ್ದು ಜುಲೈ ಅಂತ್ಯಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

English summary
Kannada jodi Hakki serial fame actor Tandav ram acting as a hero in 'Ond Kathe Hella' kannada movie. Girish is directing the film, The film will be released in July

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X