For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ತೆಲುಗು ನಟನ ಹೆಸರು ಬಾಯ್ಬಿಟ್ಟಿದ್ದ ಮಸ್ತಾನ್, ವಿಚಾರಣೆ ಎದುರಿಸಿದ ಸ್ಟಾರ್

  |

  ಡ್ರಗ್ಸ್ ಪ್ರಕರಣ ಸದ್ಯಕ್ಕೆ ತಣ್ಣಗಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಕೆದಕಿದಷ್ಟು ಆಳಕ್ಕೆ ಹೋಗುತ್ತಲೇ ಇದೆ. ಒಬ್ಬರಿಂದ ಮತ್ತೊಬ್ಬ ಹೆಸರು ಬಯಲಾಗುತ್ತಲೇ ಇದೆ. ಸಂಜನಾ, ರಾಗಿಣಿ ಬಂಧನದ ನಂತರ ಬಿಗ್ ಬಾಸ್ ಮಾಜಿ ಸ್ಪರ್ಧಿ ಮಸ್ತಾನ್ ಚಂದ್ರ ಅರೆಸ್ಟ್ ಆಗಿದ್ದರು. ಮಸ್ತಾನ್ ಚಂದ್ರ ವಿಚಾರಣೆ ವೇಳೆ ನಿರ್ಮಾಪಕ ಶಂಕರ್ ಗೌಡ ಹೆಸರು ಬಯಲಾಗಿತ್ತು. ಈಗ ಶಂಕರ್ ಗೌಡ ಸಹ ಬಂಧನವಾಗಿದ್ದಾರೆ.

  ಡ್ರಗ್ಸ್ ಸಂಬಂಧ ಇಷ್ಟು ದಿನ ಸ್ಯಾಂಡಲ್ ವುಡ್ ಸ್ಟಾರ್‌ಗಳೇ ಟಾರ್ಗೆಟ್ ಆಗಿದ್ದರು. ಆದ್ರೆ, ಮಸ್ತಾನ್ ಚಂದ್ರ ತನಿಖೆ ವೇಳೆ ಟಾಲಿವುಡ್ ನಟ ತನೀಶ್ ಅಲ್ಲಾಡಿ ಹೆಸರು ಬಾಯ್ಬಿಟ್ಟಿದ್ದ. ಡ್ರಗ್ಸ್ ಪ್ರಕರಣದಲ್ಲಿ ನಿರ್ಮಾಪಕ ಶಂಕರ್ ಗೌಡ ಜೊತೆ ತೆಲುಗು ನಟ ತನೀಶ್ ಅಲ್ಲಾಡಿ ಸಂಬಂಧ ಹೊಂದಿದ್ದರು ಎಂದು ಮಸ್ತಾನ್ ಬೆಂಗಳೂರು ಪೊಲೀಸರ ಎದುರು ಹೇಳಿದ್ದ. ಈ ಹಿನ್ನೆಲೆ ಟಾಲಿವುಡ್ ನಟನಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಬೆಂಗಳೂರು ಪೊಲೀಸರ ನೋಟಿಸ್ ಹಿನ್ನೆಲೆ ತನೀಶ್ ಅಲ್ಲಾಡಿ ವಿಚಾರಣೆಗೆ ಹಾಜರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂದೆ ಓದಿ...

  ಡ್ರಗ್ಸ್ ಪ್ರಕರಣ: 'ಕೆಂಪೇಗೌಡ' ಸಿನಿಮಾ ನಿರ್ಮಾಪಕ ಶಂಕರಗೌಡಗೆ 14 ದಿನ ನ್ಯಾಯಾಂಗ ಬಂಧನ ಡ್ರಗ್ಸ್ ಪ್ರಕರಣ: 'ಕೆಂಪೇಗೌಡ' ಸಿನಿಮಾ ನಿರ್ಮಾಪಕ ಶಂಕರಗೌಡಗೆ 14 ದಿನ ನ್ಯಾಯಾಂಗ ಬಂಧನ

  ವಿಚಾರಣೆ ಎದುರಿಸಿದ ತನೀಶ್ ಅಲ್ಲಾಡ?

  ವಿಚಾರಣೆ ಎದುರಿಸಿದ ತನೀಶ್ ಅಲ್ಲಾಡ?

  ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿರುವ ನಿರ್ಮಾಪಕ ಶಂಕರ್ ಗೌಡ ಜೊತೆ ನಿಕಟ ಸಂಬಂಧ ಹೊಂದಿದ್ದರು ಎಂಬ ಆರೋಪದಲ್ಲಿ ತೆಲುಗು ನಟ ತನೀಶ್ ಅಲ್ಲಾಡಿಗೆ ಬೆಂಗಳೂರು ಪೊಲೀಸರು ಮಾರ್ಚ್ 13 ರಂದು ನೋಟಿಸ್ ನೀಡಿದ್ದರು. ಈ ನೋಟಿಸ್ ಹಿನ್ನೆಲೆ ತನೀಶ್ ಅಲ್ಲಾಡಿ ಬೆಂಗಳೂರು ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

  ಸ್ಪಷ್ಟನೆ ನೀಡಿದ್ದ ತನೀಶ್ ಅಲ್ಲಾಡಿ

  ಸ್ಪಷ್ಟನೆ ನೀಡಿದ್ದ ತನೀಶ್ ಅಲ್ಲಾಡಿ

  ''ಬಿಗ್ ಬಾಸ್ ನಂತರ ನಾನು ಕನ್ನಡ ನಿರ್ಮಾಪಕ ಶಂಕರೇಗೌಡ ಅವರನ್ನು ಭೇಟಿ ಆಗಿದ್ದೆ. ಸಿನಿಮಾ ಸಂಬಂಧ ಮಾತುಕತೆ ಮಾಡಿದ್ದೆ. ಆದರೆ ಆ ಪ್ರಾಜೆಕ್ಟ್ ಮುಂದುವರೆಯಲಿಲ್ಲ. ಈ ಘಟನೆ ನಡೆದು ಎರಡು ವರ್ಷವಾಗಿದೆ. ಅದಾದ ಬಳಿಕ ನನಗೆ ಅವರ ಜತೆ ಯಾವುದೇ ರೀತಿಯ ಸಂಪರ್ಕ ಇರಲ್ಲ'' ಎಂದು ನೋಟಿಸ್ ತಲುಪಿದಾಗಲೇ ಸ್ಪಷ್ಟನೆ ನೀಡಿದ್ದರು.

  ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ: ತೆಲುಗು ನಟನಿಗೆ ಬೆಂಗಳೂರು ಪೊಲೀಸರ ನೊಟೀಸ್ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ: ತೆಲುಗು ನಟನಿಗೆ ಬೆಂಗಳೂರು ಪೊಲೀಸರ ನೊಟೀಸ್

  2017ರ ಡ್ರಗ್ಸ್ ಪ್ರಕರಣದಲ್ಲಿ ತನೀಶ್ ಹೆಸರು

  2017ರ ಡ್ರಗ್ಸ್ ಪ್ರಕರಣದಲ್ಲಿ ತನೀಶ್ ಹೆಸರು

  ತನೀಶ್ ಅಲ್ಲಾಡಿ ಹೆಸರು 2017ರ ಡ್ರಗ್ಸ್ ಪ್ರಕರಣದಲ್ಲಿ ಚರ್ಚೆಗೆ ಬಂದಿತ್ತು. ಈ ಸಂಬಂಧ ನಾಂಪಲ್ಲಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಸಹ ಎದುರಿಸಿದ್ದರು. ನಾಲ್ಕು ವರ್ಷದ ಬಳಿಕ ಬೆಂಗಳೂರಿನಲ್ಲಿ ತನೀಶ್ ಅಲ್ಲಾಡಿ ಹೆಸರು ಮತ್ತೆ ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿದೆ.

  Asha Bhat ರಾಬರ್ಟ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು ಹೇಗೆ?? | Filmibeat Kannada
  ಕೆಂಪೇಗೌಡ ನಿರ್ಮಾಪಕ ಅರೆಸ್ಟ್

  ಕೆಂಪೇಗೌಡ ನಿರ್ಮಾಪಕ ಅರೆಸ್ಟ್

  ಡ್ರಗ್ಸ್ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ಕನ್ನಡ ನಿರ್ಮಾಪಕ ಶಂಕರಗೌಡ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಲಾಗಿದೆ. ಕೋರಮಂಗಲದಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಆದೇಶ ಹೊರಡಿಸಿದ್ದಾರೆ. ಮಸ್ತಾನ್ ಚಂದ್ರ ಹೇಳಿಕೆ ಹಿನ್ನೆಲೆ ಶಂಕರ್ ಗೌಡ ಮನೆ ಮೇಲೆ ದಾಳಿ ಮಾಡಲಾಗಿತ್ತು. ನಂತರ ವಿಚಾರಣೆ ಮಾಡಿ ಅರೆಸ್ಟ್ ಮಾಡಲಾಗಿತ್ತು.

  English summary
  Telugu actor Tanish Alladi Attend Police Enquiry at Bangalore for Drugs case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X