ಡೇಟಿಂಗ್‌ಗೆ ಬರ್ತಿರಾ ಎಂದ ಫೋಟೋಗ್ರಾಫರ್ ; ಬೆಂಕಿಯಾದ ತನಿಷಾ ಕುಪ್ಪಂಡ

ಬದಲಾದ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣ, ಮನುಷ್ಯನನ್ನು ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೆಯವರು ಇದ್ದಾರೆ. ಕೆಟ್ಟವರು ಇದ್ದಾರೆ. ಪ್ರಸ್ತುತ ಈ ವೇದಿಕೆಯ ಮೂಲಕವೇ ಸಿನಿ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜೊತೆಗೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ.

ಆದರೆ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಸಾಕಷ್ಟು ಮಂದಿ ಒಂದು ಕಡೆಯಿಂದ ಚಿತ್ರರಂಗದಲ್ಲಿನ ಮಹಿಳೆಯರಿಗೆ ಕೊಡಬಾರದ ಹಿಂಸೆ ಕೊಡುತ್ತಿದ್ದಾರೆ. ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಾರೆ. ಅಸಭ್ಯ, ಆಕ್ಷೇಪಾರ್ಹ ಸಂದೇಶ ಕಳಿಸುತ್ತಿದ್ದಾರೆ. ಇಂತಹವರಿಗೆ ಕೆಲವು ನಾಯಕಿಯರು ಅಲ್ಲಲ್ಲೇ ಗ್ರಹಚಾರ ಬಿಡಿಸುತ್ತಾರೆ. ಉದಾಹರಣೆಗೆ ತನಿಷಾ ಕುಪ್ಪಂಡ.

Report This Idiot Tanisha Kuppanda Leaks Shady Photographer s Shocking Dating Chat

ಹೌದು, ತನಿಷಾ ಕುಪ್ಪಂಡ ನೇರಾನೇರ ನಡುವಳಿಕೆಯಿಂದ ಹೆಸರಾದ ಸ್ಯಾಂಡಲ್‌ವುಡ್ ಸುಂದರಿ. ಬಿಗ್ ಬಾಸ್‌ನ ಬೆಂಕಿ, ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಮಿಂಚಿರುವ ತನಿಷಾ ನಿರ್ಮಾಪಕಿಯೂ ಹೌದು. ಉದ್ಯಮಿಯೂ ಹೌದು.

ಇಂಥಾ ತನಿಷಾ ಸದ್ಯ ಓರ್ವ ಫೋಟೊಗ್ರಾಫರ್ ವಿರುದ್ದ ರೊಚ್ಚಿಗೆದ್ದಿದ್ದಾರೆ. ವ್ಯಕ್ತಿ ಜೊತೆ ನಡೆಸಿದ ಸಂಭಾಷಣೆಯ ಸ್ಕ್ರೀನ್ ಶಾಟ್ ಹಂಚಿಕೊಂಡು ಥೂ ನಿಮ್ಮ ಜನ್ಮಕ್ಕೆ ಎಂದು ಮಂಗಳಾರತಿಯನ್ನು ಮಾಡಿದ್ದಾರೆ

ಈ ಇಡೀ ವಿವಾದದ ಕೇಂದ್ರಬಿಂದು ಅನಿಲ್ ಕುಮಾರ್ ಎಂಬ ವ್ಯಕ್ತಿ. ವೃತ್ತಿಯಲ್ಲಿ ಫೋಟೊಗ್ರಾಫರ್ ಎಂದು ಹೇಳಿಕೊಳ್ಳುವ ಅನಿಲ್ ಕುಮಾರ್ ಆರಂಭದಲ್ಲಿ ತನಿಷಾ ಅವರ ಜೊತೆ ವೃತ್ತಿಪರ ಸಂಭಾಷಣೆ ನಡೆಸಿದ್ದಾರೆ. ಫೋಟೊಶೂಟ್ ಕುರಿತು ಮಾತುಕಥೆ ಮಾಡಿದ್ದಾರೆ. ಆದರೆ ಹಣದ ವಿಚಾರದಲ್ಲಿ ಈ ವ್ಯವಹಾರ ಕುದುರಿದಂತೆ ಇಲ್ಲ. ಆಗ ಸುಮ್ಮನಾದ ಅನಿಲ್ ಕುಮಾರ್ ನೀವು ನನ್ನ ಜೊತೆ ಡೇಟಿಂಗ್‌ಗೆ ಬರುವುದಾದರೆ ನಾನು ಶೂಟ್ ಮಾಡಿಕೊಡುತ್ತೇನೆ ಎಂಬರ್ಥದಲ್ಲಿ ಮೆಸೇಜ್ ಮಾಡಿದ್ದಾರೆ.

ಮೊದಲೇ ತನಿಷಾ ಬೆಂಕಿ. ಈ ಹಿಂದೆ ''ನೀವು ಬ್ಲೂ ಫಿಲಂ ಮಾಡಲು ರೆಡಿನಾ'' ಎಂದು ಕೇಳಿದ ಯೂಟ್ಯೂಬರ್ ಗೆ ತನಿಷಾ ಅಲ್ಲೇ ಮೆಟ್ಟಲ್ಲಿ ಬಡಿಯೋದೊಂದು ಬಾಕಿಯಿತ್ತು. ಹೀಗಿರುವಾಗ ವೃತ್ತಿಪರ ಕೆಲಸದ ನೆಪದಲ್ಲಿ ವೈಯಕ್ತಿಕ ಆಸೆ ತೀರಿಸಿಕೊಳ್ಳಲು ಮುಂದಾದ ಅನಿಲ್‌ ಕುಮಾರ್ ಅವರನ್ನು ತನಿಷಾ ಹೇಗೆ ತಾನೇ ಸುಮ್ಮನೆ ಬಿಡಲು ಸಾಧ್ಯ..?

report-this-idiot-tanisha-kuppanda-leaks-shady-photographer-s-shocking-dating-chat

ಹೀಗಾಗಿಯೇ ಕೆರಳಿ ಕೆಂಡವಾಗಿರುವ ತನಿಷಾ, ಅನಿಲ್ ಕುಮಾರ್ ಇನ್‌ಸ್ಟಾಗ್ರಾಮ್ ಐಡಿ ಕಾಣಿಸುವಂತೆ ಸ್ಕ್ರೀನ್ ಶಾಟ್ ತೆಗೆದಿದ್ದಾರೆ. ಕೆಲವು ಕೆಟ್ಟ ಫೋಟೋಗ್ರಾಫರ್​​ಗಳು ಬಂದು ಕಲಾವಿದರ ಬಳಿ ನಾನ್​ಸೆನ್ಸ್​ ಮಾತನಾಡುತ್ತಾರೆ. ಫೋಟೋಶೂಟ್ ಮಾಡುವ ಯೋಗ್ಯತೆ ಇಲ್ಲ ಅಂದರೆ ಕೇಳಬಾರದು. ನಿಮ್ಮಂತ 3ರ್​​ಡ್​ ಕ್ಲಾಸ್ ಫೋಟೋಗ್ರಾಫರ್​​ಗಳಿಂದ ಬೇರೆ ಛಾಯಾಗ್ರಹಕರಿಗೆ ಅವಮಾನ ಎಂದು ತಪರಾಕಿ ಹಾಕಿದ್ದಾರೆ. ಈ ಮೂಲಕ ಅನಿಲ್ ಕುಮಾರ್ ಮಾನ ಹರಾಜು ಹಾಕಿದ್ದಾರೆ. ಇಷ್ಟೇ ಅಲ್ಲ ಫೋಟೋಗ್ರಾಫರ್ ಅಂತ ಹೇಳಿಕೊಳ್ಳುವ ಇಂತಹ ಈಡಿಯಟ್‌ನ ರಿಪೋರ್ಟ್ ಮಾಡಿ ಎಂದು ತಮ್ಮ ಅಪಾರ ಅಭಿಮಾನಿ ಬಳಗಕ್ಕೆ ಕರೆ ನೀಡಿದ್ದಾರೆ.

ಸದ್ಯ ತನಿಷಾ ಹಂಚಿಕೊಂಡ ಸ್ಕ್ರೀನ್ ಶಾಟ್ ವೈರಲ್ ಆಗಿದ್ದು, ನೆಟ್ಟಿಗರು, ಅವರ ಧೈರ್ಯ ಮತ್ತು ಬೋಲ್ಡ್ ಮನಸ್ಥಿತಿಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಕೇವಲ ಬ್ಲಾಕ್ ಮಾಡಿ ಸುಮ್ಮನಾಗದೆ, ಆತನ ಅಸಲಿ ಮುಖವನ್ನು ಇಡೀ ಜಗತ್ತಿಗೆ ತೋರಿಸಿದ್ದಕ್ಕೆ ಅಭಿಮಾನಿಗಳು "ನಿಜವಾದ ಬೆಂಕಿ ಅಂದ್ರೆ ನೀವೇ" ಎಂದು ಹಾಡಿ ಹೊಗಳುತ್ತಿದ್ದಾರೆ.

ಇನ್ನುಳಿದಂತೆ ತನಿಷಾ ಕುಪ್ಪಂಡ ಅಭಿನಯದ ''ಶೇರ್'' ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ತನಿಷಾ ಕಾಣಿಸಿಕೊಂಡಿದ್ದಾರೆ. ಕಿರಣ್ ರಾಜ್ ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ಧಾರೆ. ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿಯಾಗಿ ಕೂಡ ತನಿಷಾ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ಧಾರೆ.

report-this-idiot-tanisha-kuppanda-leaks-shady-photographer-s-shocking-dating-chat

English summary
Bigg Boss fame Tanisha Kuppanda exposes a creepy photographer's shocking "dating" text. See the viral Instagram story leak and her fierce warning here!
Read more about: tanisha biggboss social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X