ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ ತನುಶ್ರೀ ದತ್ತಾ.!
Recommended Video

ಎಂಟು ವರ್ಷಗಳಿಂದ ಸದ್ದು-ಸುದ್ದಿ ಮಾಡದೆ ಸೈಲೆಂಟ್ ಆಗಿದ್ದ ಬಾಲಿವುಡ್ ನಟಿ ತನುಶ್ರೀ ದತ್ತಾ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ಯು.ಎಸ್.ಎ ನಲ್ಲಿ ಸೆಟಲ್ ಆಗಿದ್ದ ತನುಶ್ರೀ ದತ್ತಾ ಇತ್ತೀಚೆಗಷ್ಟೇ ಮುಂಬೈಗೆ ಮರಳಿದ್ದರು.
ಹಿಂದೆಂದಿಗಿಂತಲೂ ತೂಕ ಹೆಚ್ಚಿಸಿಕೊಂಡಿರುವ ತನುಶ್ರೀ ದತ್ತಾ ಝೂಮ್ ಟಿ.ವಿಗೆ ಸಂದರ್ಶನ ನೀಡಿದ್ದಾರೆ. ಇದೇ ಸಂದರ್ಶನದಲ್ಲಿ ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಗುಡುಗಿದ್ದಾರೆ.
ಹತ್ತು ವರ್ಷಗಳ ಹಿಂದೆ ತಾವು ಎದುರಿಸಿದ್ದ ಲೈಂಗಿಕ ಕಿರುಕುಳವನ್ನ ತನುಶ್ರೀ ದತ್ತಾ ಬಯಲು ಮಾಡಿದ್ದಾರೆ. ''ನಾನಾ ಪಾಟೇಕರ್ ಬಗ್ಗೆ ಇಂಡಸ್ಟ್ರಿಯಲ್ಲಿ ಇರುವವರಿಗೆಲ್ಲಾ ಗೊತ್ತಿದೆ. ಆದರೂ ಯಾರೂ ಏನೂ ಮಾಡಿಲ್ಲ'' ಎಂದಿದ್ದಾರೆ ತನುಶ್ರೀ ದತ್ತಾ.
ಸಂದರ್ಶನದಲ್ಲಿ ನಾನಾ ಪಾಟೇಕರ್ ಬಗ್ಗೆ ತನುಶ್ರೀ ದತ್ತಾ ಏನೆಲ್ಲ ಹೇಳಿದ್ದಾರೆ ಅಂತ ನೀವೇ ಓದಿರಿ ಫೋಟೋ ಸ್ಲೈಡ್ ಗಳಲ್ಲಿ....

ನಾನಾ ಪಾಟೇಕರ್ ಕಾರಣ
''ಹಾರ್ನ್ ಓಕೆ ಪ್ಲೀಸ್' ಎಂಬ ಚಿತ್ರದ ಸ್ಪೆಷಲ್ ಸಾಂಗ್ ನಲ್ಲಿ ಕಾಣಿಸಿಕೊಳ್ಳಲು ತನುಶ್ರೀ ದತ್ತಾ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದ್ರೆ, ''ನನ್ನ ಜೊತೆಗೆ ನಾನಾ ಪಾಟೇಕರ್ ಅಸಭ್ಯವಾಗಿ ವರ್ತಿಸಿದಕ್ಕೆ ಚಿತ್ರದಿಂದ ಹೊರಬಂದೆ'' ಎಂದು ತನುಶ್ರೀ ದತ್ತಾ ಹೇಳಿದ್ದಾರೆ.

ಯಾರೂ ವರದಿ ಮಾಡಿಲ್ಲ
''ಮಹಿಳೆಯರ ಜೊತೆಗೆ ನಾನಾ ಪಾಟೇಕರ್ ಹೇಗೆ ವರ್ತಿಸುತ್ತಾರೆ ಅಂತ ಇಂಡಸ್ಟ್ರಿಯಲ್ಲಿ ಇರುವವರಿಗೆ ಗೊತ್ತಿದೆ. ಆದ್ರೆ, ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಮಹಿಳೆಯರಿಗೆ ನಾನಾ ಪಾಟೇಕರ್ ಗೌರವ ಕೊಡಲ್ಲ. ಕೆಲ ನಟಿಯರ ಮೇಲೆ ನಾನಾ ಪಾಟೇಕರ್ ಕೈ ಮಾಡಿದ್ದಾರೆ... ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಯಾರೂ ಕೂಡ ವರದಿ ಮಾಡಿಲ್ಲ'' ಎಂದು ಸಂದರ್ಶನದಲ್ಲಿ ತನುಶ್ರೀ ದತ್ತಾ ಬೇಸರ ವ್ಯಕ್ತಪಡಿಸಿದ್ದಾರೆ.

ಉತ್ತಮ ವಾತಾವರಣ ಮೂಡಲು ಹೇಗೆ ಸಾಧ್ಯ.?
''ನಾನಾ ಪಾಟೇಕರ್ ಅಂತಹ ನಟರನ್ನ ಎ-ಲಿಸ್ಟ್ ನಟರು ಬಾಯ್ ಕಾಟ್ ಮಾಡುವವರೆಗೂ ಚಿತ್ರೀಕರಣದಲ್ಲಿ ಉತ್ತಮ ವಾತಾವರಣ ಮೂಡಲು ಸಾಧ್ಯ ಇಲ್ಲ'' - ತನುಶ್ರೀ ದತ್ತಾ

ದೊಡ್ಡ ನಟರು ದೂರ ಇಡಬೇಕು
''ಅಕ್ಷಯ್ ಕುಮಾರ್ ಜೊತೆಗೆ ನಾನಾ ಪಾಟೇಕರ್ ಕಳೆದ ಎಂಟು ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ರಜನಿಕಾಂತ್ ಜೊತೆಗೂ ನಾನಾ ಪಾಟೇಕರ್ ಕೆಲಸ ಮಾಡಿದ್ದಾರೆ. ದೊಡ್ಡ ನಟರು ಇಂಥವರನ್ನ ದೂರ ಇಡುವವರೆಗೂ ಭಾರತದಲ್ಲಿ #MeToo ಅಭಿಯಾನ ಸಾಧ್ಯವಿಲ್ಲ'' ಎಂದಿದ್ದಾರೆ ತನುಶ್ರೀ ದತ್ತಾ.


Click it and Unblock the Notifications










