ಚಿರಂಜೀವಿ ಸರ್ಜಾಗೆ ನಾಯಕಿಯಾದ 'ಯಜಮಾನ'ನ ಬಸಣ್ಣಿ
Recommended Video

'ಯಜಮಾನ' ಸದ್ಯ ಸ್ಯಾಂಡಲ್ ವುಡ್ ನಲ್ಲಿ ಧೂಳ್ ಎಬ್ಬಿಸುತ್ತಿರುವ ಸಿನಿಮಾ. ಚಾಲೆಂಜ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರಿಂದ ಬಹುಪರಾಕ್ ಹೇಳಿಸಿಕೊಂಡ 'ಯಜಮಾನ' ಯಜಮಾನಿ ಈಗ ನಟ ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯಾಗಿದ್ದಾರೆ.

ಹೌದು, 'ಯಜಮಾನ' ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದ ತಾನ್ಯಾ ಹೋಪ್ ಈಗ ಚಿರಂಜೀವಿ ಸರ್ಜಾ ಅಭಿನಯದ 'ಖಾಕಿ' ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಕೈತುಂಬ ಸಿನಿಮಾಗಳನ್ನು ಇಟ್ಟುಕೊಂಡಿರುವ ತಾನ್ಯಾ, ಚಿರು ಸಿನಿಮಾಗೆ ಆಯ್ಕೆ ಆಗುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮತ್ತಷ್ಟು ಬ್ಯುಸಿಯಾಗಿದ್ದಾರೆ.
ಸದ್ಯ, ತಾನ್ಯಾ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ ಬಹು ನಿರೀಕ್ಷೆಯ 'ಅಮರ್', 'ಉದ್ಘರ್ಷ', ಉಪೇಂದ್ರ ನಟನೆಯ 'ಹೋಮ್ ಮಿನಿಸ್ಟರ್' ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೀಗ ಚಿರಂಜೀವಿ ಸರ್ಜಾ ಅವರ 'ಖಾಕಿ' ಸಿನಿಮಾದ ನಾಯಕಿಯ ಪಟ್ಟವನ್ನು ಧರಿಸಿದ್ದಾರೆ.

'ಖಾಕಿ' ನವೀನ್ ರೆಡ್ಡಿ ನಿರ್ದೇಶನದ ಸಿನಿಮಾ. 'ಮಾಸ್ ಲೀಡರ್', 'ವಿಕ್ಟರಿ 2' ನಿರ್ಮಾಣದ ಖ್ಯಾತಿಯ ನಿರ್ಮಾಪಕ ತರುಣ್ ಶಿವಪ್ಪ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 'ಖಾಕಿ' ಹೆಸರೇ ಹೇಳುವ ಹಾಗೆ ಪಕ್ಕಾ ಆಕ್ಷನ್ ಸಿನಿಮಾ. ಮುಂದಿನ ತಿಂಗಳಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ವಿಶೇಷ ಅಂದರೆ, 'ಖಾಕಿ' ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ತೆರೆ ಕಾಣುತ್ತಿದೆ.


Click it and Unblock the Notifications











