ತೆಲುಗು ನಟ ರವಿ ತೇಜಾ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಬಸಣ್ಣಿ
ಸ್ಯಾಂಡಲ್ ವುಡ್ ಬಸಣ್ಣಿ ಅಂತಾನೆ ಖ್ಯಾತಿ ಗಳಿಸಿರುವ ನಟಿ ನಟಿ ತಾನ್ಯಾ ಹೋಪ್ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಉತ್ತಮ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ ತಾನ್ಯಾ.
ತಾನ್ಯಾ ಸದ್ಯ ಕನ್ನಡದಲ್ಲಿ ಖಾಕಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿರಂಜೀವಿ ಸರ್ಜಾ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಖಾಕಿ ಚಿತ್ರದಲ್ಲಿ ತಾನ್ಯಾ ಪ್ರಮುಕ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇದರ ಜೊತೆಗೀಗ ತಾನ್ಯಾ ತೆಲುಗಿನ ಸ್ಟಾರ್ ನಟನ ಸಿನಿಮಾಗೆ ಆಯ್ಕೆ ಆಯ್ಕೆಯಾಗಿದ್ದಾರೆ.
ಹೌದು, ತೆಲುಗು ನಟ ರವಿ ತೇಜಾ ಅಭಿನಯದ ಡಿಸ್ಕೋ ರಾಜ ಚಿತ್ರದಲ್ಲಿ ತಾನ್ಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಈ ಚಿತ್ರದಲ್ಲಿ ಬಸಣ್ಣಿ ಸೈಂಟಿಸ್ಟ್ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರಂತೆ. ಚಿತ್ರದ ಬಗ್ಗೆ ಹೆಚ್ಚೇನು ಬಿಟ್ಟುಕೊಡದ ತಾನ್ಯಾ ರವಿ ತೇಜಾ ಜೊತೆ ಅಭಿನಯಿಸಲು ಸಖತ್ ಎಕ್ಸಾಯಿಟ್ ಆಗಿದ್ದಾರೆ.

ಅಂದ್ಹಾಗೆ ಚಿತ್ರದಲ್ಲಿ ತಾನ್ಯಾ ಹೋಪ್ ಜೊತೆ ಮತ್ತಿಬ್ಬರು ನಟಿಯರು ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದ್ರೆ ಮತ್ತೋರ್ವ ನಟಿ ಕನ್ನಡತಿ ನಭಾ ನಟೇಶ್ ಕೂಡ ಈ ಚಿತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ. ಆದ್ರೆ ಮತ್ತೋರ್ವ ನಟಿ ಇನ್ನು ಫೈನಲ್ ಆಗಿಲ್ಲ. ಡಿಸ್ಕೊ ರಾಜ ತಾನ್ಯಾ ಅಭಿನಯದ ನಾಲ್ಕನೆ ತೆಲುಗು ಸಿನಿಮಾ.
ಈ ಚಿತ್ರಕ್ಕೆ ಆನಂದ್ ವಿ ಐ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತೆಲುಗು ಚಿತ್ರದ ಜೊತೆಗೆ ತಮಿಳು ಚಿತ್ರರಂಗದಲ್ಲೂ ತಾನ್ಯಾ ಅಭಿನಿಯಸುತ್ತಿದ್ದಾರೆ. ಜೊತೆಗೆ ನಾಗಶೇಖರ್ ನಿರ್ದೇಶನದ ಬಾಲಿವುಡ್ ಸಿನಿಮಾದಲ್ಲಿ ತಾನ್ಯಾ ನಾಯಕಿಯಾಗುವ ಮೂಲಕ ಹಿಂದಿ ಚಿತ್ರರಂಗದಲ್ಲೂ ಮಿಂಚಲು ಸಜ್ಜಾಗಿದ್ದಾರೆ. 'ಯಜಮಾನ' ಮತ್ತು 'ಅಮರ್' ಸಿನಿಮಾದ ನಂತರ ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ತಾನ್ಯ ಸಖತ್ ಬ್ಯುಸಿ ನಟಿಯಾಗಿದ್ದಾರೆ.


Click it and Unblock the Notifications











