For Quick Alerts
  ALLOW NOTIFICATIONS  
  For Daily Alerts

  'ನಿಮ್ಮ ಬ್ಯಾಗ್ರೌಂಡ್ ಏನು' ಎಂದಿದ್ದಕ್ಕೆ ತಾನ್ಯ ಹೋಪ್ ಕೊಟ್ಟ ಉತ್ತರ ನಿಜಕ್ಕೂ ಅಚ್ಚರಿ.!

  |

  ಯಜಮಾನ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ತಾನ್ಯ ಹೋಪ್ ಬಗ್ಗೆ ಅನೇಕರಿಗೆ ಕುತೂಹಲ. ತಾನ್ಯ ಹೋಪ್ ದೇಶದ ಖ್ಯಾತಿಯ ಉದ್ಯಮಿ ಕುಟುಂಬಕ್ಕೆ ಸೇರಿದವರು. ತುಂಬಾ ಶ್ರೀಮಂತರು. ಅವರು ಸಿನಿಮಾ ಸೆಟ್ ಗೆ ಬಂದ್ರೆ ಅವರ ಜೊತೆ ಸಾಕಷ್ಟು ಜನ ಬಾಡಿಗಾರ್ಡ್, ಗನ್ ಮ್ಯಾನ್ ಇರ್ತಾರೆ.

  ಅವರ ಬಗ್ಗೆ ತುಂಬಾ ಕೇರ್ ಮಾಡ್ತಾರೆ, ಅವರು ತಿನ್ನುವ ಊಟ, ಕುಡಿಯುವ ನೀರು. ಉಳಿದುಕೊಳ್ಳುವ ಜಾಗ ಎಲ್ಲದ ಬಗ್ಗೆಯೂ ಜಾಗೃತಿ ವಹಿಸುತ್ತಾರೆ ಎಂಬ ಮಾತುಗಳು ಗಾಂಧಿನಗರದಲ್ಲಿದೆ. ಈ ನಡುವೆ ತಾನ್ಯ ಹೋಪ್ ಅವರ ಮೂರನೇ ಕನ್ನಡ ಸಿನಿಮಾ ಅಮರ್ ಕೂಡ ರಿಲೀಸ್ ಆಗಿದೆ.

  ಸಿನಿ ಇಂಡಸ್ಟ್ರಿಗೆ ಶಾಕ್ ನೀಡಿರುವ ತಾನ್ಯ ಹೋಪೆ ಫ್ಯಾಮಿಲಿ ಬ್ಯಾಕ್ ಗ್ರೌಂಡ್ ಏನು? ಸಿನಿ ಇಂಡಸ್ಟ್ರಿಗೆ ಶಾಕ್ ನೀಡಿರುವ ತಾನ್ಯ ಹೋಪೆ ಫ್ಯಾಮಿಲಿ ಬ್ಯಾಕ್ ಗ್ರೌಂಡ್ ಏನು?

  ತಾನ್ಯ ಅವರ ಕುರಿತು ಸ್ವತಃ ದರ್ಶನ್ ಮತ್ತು ಅಭಿಷೇಕ್ ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು. 'ತಾನ್ಯ ನೆನಸಿಕೊಂಡರೆ ನನ್ನಂತಹ 500 ಜನ ದರ್ಶನ್ ಅವರನ್ನ ಕೊಂಡುಕೊಳ್ಳಬಹುದು' ಎಂದು ಹೇಳಿದ್ದರು. ಇಷ್ಟೆಲ್ಲಾ ಹೇಳಿದ್ಮೇಲೆ ಅವರ ಬ್ಯಾಗ್ರೌಂಡ್ ಬಗ್ಗೆ ತಿಳಿಯುವ ಕುತೂಹಲ ಹೆಚ್ಚಾಯ್ತು. ಈ ಬಗ್ಗೆ ತಾನ್ಯ ಅವರನ್ನ ಕೇಳಿದಾಗ ಅವರ ಉತ್ತರ ನೋಡಿ ನಿಜಕ್ಕೂ ಆಶ್ಚರ್ಯವಾಯಿತು. ಏನಂದ್ರು? ಮುಂದೆ ಓದಿ....

  'ಅಹಂ' ಇಲ್ಲದ ನಟಿ ತಾನ್ಯ ಹೋಪ್

  'ಅಹಂ' ಇಲ್ಲದ ನಟಿ ತಾನ್ಯ ಹೋಪ್

  ಆಗರ್ಭ ಶ್ರೀಮಂತ ಮನೆತನದ ಹುಡುಗಿಯಾಗಿದ್ದರೂ ತಾನ್ಯ ಹೋಪ್ ಗೆ ಒಂದಿಷ್ಟ ಅಹಂ ಇಲ್ಲ ಎಂಬುದು ಇಂಡಸ್ಟ್ರಿ ಟಾಕ್. ಅಭಿಮಾನಿಗಳು ಎದುರುಗಡೆ ಸಿಕ್ಕಾಗಲೂ ಅಹಂ ತೋರಿಸದೇ ತಾಳ್ಮೆಯಿಂದ ಎಲ್ಲರ ಜೊತೆಯಲ್ಲೂ ಮಾತನಾಡ್ತಾರೆ. ಅಮರ್ ಸಿನಿಮಾ ರಿಲೀಸ್ ದಿನವೂ ಚಿತ್ರಮಂದಿರದ ಬಳಿ ಬಂದಿದ್ದ ತಾನ್ಯ ಹೋಪ್, ಅಲ್ಲಿ ಸೆಲ್ಫಿಗಾಗಿ ಮುಗಿಬಿದ್ದ ಜನರ ಮಧ್ಯೆ ಕೂಲ್ ಆಗಿ ರಿಯಾಕ್ಟ್ ಮಾಡಿದ್ದರು.

  ಒಂದೇ ದಿನ ತಾನ್ಯ 2 ಸಿನಿಮಾ : 'ಯಜಮಾನ'ನಿಗೆ ಬಸಣ್ಣಿಯೇ ಕಾಂಪಿಟೇಶನ್ಒಂದೇ ದಿನ ತಾನ್ಯ 2 ಸಿನಿಮಾ : 'ಯಜಮಾನ'ನಿಗೆ ಬಸಣ್ಣಿಯೇ ಕಾಂಪಿಟೇಶನ್

  ಮನೆಯವರ ಬಗ್ಗೆ ಹೇಳಿಕೊಳ್ಳುವ ಆಸಕ್ತಿ ಇಲ್ಲ

  ಮನೆಯವರ ಬಗ್ಗೆ ಹೇಳಿಕೊಳ್ಳುವ ಆಸಕ್ತಿ ಇಲ್ಲ

  ತಾನ್ಯ ಹೋಪ್ ಮೂಲತಃ ಕರ್ನಾಟಕದವರೇ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದಾರೆ. ಇವರ ತಂದೆ ದೊಡ್ಡ ಉದ್ಯಮಿ ಎಂದು ಹೇಳಲಾಗುತ್ತಿದೆ. ಆದ್ರೆ, ಅವರ ಬಗ್ಗೆ ಆಗಲಿ ಅಥವಾ ತಾಯಿ, ಮನೆಯವರ ಬಗ್ಗೆ ಆಗಲಿ ತಾನ್ಯ ಹೋಪ್ ಏನೂ ಹೇಳಿಕೊಳ್ಳಲ್ಲ. ಯಾರಾದರೂ ಕೇಳಿದ್ರು, ಆ ಬಗ್ಗೆ ಹೆಚ್ಚು ಮಾತನಾಡಲ್ಲ. ಆದರೆ ಇತ್ತೀಚಿಗಿನ ಸಂದರ್ಶನದಲ್ಲಿ ತಮ್ಮ ಬ್ಯಾಗ್ರೌಂಡ್ ಬಗ್ಗೆ ಮಾತನಾಡಿದ್ದಾರೆ.

  ಬ್ಯಾಗ್ರೌಂಡ್ ಕೇಳಿದ್ದಕ್ಕೆ ತಾನ್ಯ ಹೇಳಿದ್ದೇನು?

  ಬ್ಯಾಗ್ರೌಂಡ್ ಕೇಳಿದ್ದಕ್ಕೆ ತಾನ್ಯ ಹೇಳಿದ್ದೇನು?

  ನಿಮ್ಮ ಬ್ಯಾಗ್ರೌಂಡ್ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ನಿಮ್ಮ ಹಿನ್ನೆಲೆ ಬಗ್ಗೆ ಹೇಳುವಿರ ಎಂದು ಕೇಳಿದ್ದಕ್ಕೆ ಆಕೆ ಕೊಟ್ಟ ಉತ್ತರ ಹೀಗಿತ್ತು. ''ಕನ್ನಡ ಇಂಡಸ್ಟ್ರಿಯಲ್ಲಿ ನಾನೊಬ್ಬ ಕಲಾವಿದೆ ಎಂದಷ್ಟೇ ಗುರುತಿಸಿಕೊಳ್ಳಲು ನಾನು ಇಷ್ಟ ಪಡ್ತೀನಿ'' ಎಂದು ಹೇಳುವ ಮೂಲಕ ಅಚ್ಚರಿ ನೀಡಿದರು. ಇದಕ್ಕೆ ತಾನ್ಯ ಹೋಪ್ ಮತ್ತಷ್ಟು ಇಷ್ಟವಾಗ್ತಾರೆ.

  ಮತ್ತೆ ತೆಲುಗು ಚಿತ್ರರಂಗದತ್ತ ಹೊರಟ 'ಯಜಮಾನ'ನ ಬಸಣ್ಣಿ ಮತ್ತೆ ತೆಲುಗು ಚಿತ್ರರಂಗದತ್ತ ಹೊರಟ 'ಯಜಮಾನ'ನ ಬಸಣ್ಣಿ

  ಇಂಗ್ಲೆಂಡ್ ನಲ್ಲಿ ಓದಿದ್ದು

  ಇಂಗ್ಲೆಂಡ್ ನಲ್ಲಿ ಓದಿದ್ದು

  ಬೆಂಗಳೂರಿನ ಸೇಕ್ರೆಡ್ ಹಾರ್ಟ್ ಬಾಲಕಿಯರ ಶಾಲೆಯಲ್ಲಿ ಓದಿದ್ದ ತಾನ್ಯ ಹೋಪೆ, ಇಂಗ್ಲೆಂಡ್ ನ ವೆಸ್ಟ್ ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಬಹುಶಃ ಬಹಳ ಖಾಸಗಿಯಾಗಿ ಬೆಳೆದ ತಾನ್ಯ ಅವರು ಲೈಫ್ ಸ್ಟೈಲ್ ಕೂಡ ದುಬಾರಿಯಾಗಿಯೇ ಇದ್ದಿರುತ್ತೆ.

  ಮೊದಲ ಸಿನಿಮಾ ತೆಲುಗು

  ಮೊದಲ ಸಿನಿಮಾ ತೆಲುಗು

  ಪುಣೆಯಲ್ಲಿ ಮಾಡಲಿಂಗ್ ತರಬೇತಿ ಪಡೆದುಕೊಂಡಿದ್ದಾರೆ. 2015ರಲ್ಲಿ ಫೆಮಿನಾ ಮಿಸ್ ಇಂಡಿಯಾ ಕೊಲ್ಕತ್ತಾ ಮುಡಿಗೇರಿಸಿಕೊಂಡ ತಾನ್ಯ 2016ರಲ್ಲಿ ಸಿನಿಮಾರಂಗಕ್ಕೆ ಪ್ರವೇಶ ಮಾಡಿದರು. ಅಪ್ಪಟ್ಲೋ ಒಕ್ಕಡುಂಡೆವಾಡು ಚಿತ್ರದ ಮೂಲಕ ಟಾಲಿವುಡ್ ಗೆ ತಾನ್ಯ ಎಂಟ್ರಿಯಾದರು. ಎಸಿಪಿ ಪಾತ್ರದಲ್ಲಿ ಮೊದಲ ಸಲ ನಟಿಸಿದರು.

  ಕನ್ನಡದಲ್ಲೇ ಹೆಚ್ಚು ನಟನೆ

  ಕನ್ನಡದಲ್ಲೇ ಹೆಚ್ಚು ನಟನೆ

  ಯಜಮಾನ ಬಳಿಕ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಸಿನಿಮಾದಲ್ಲಿ ನಟಿಸಿದ ತಾನ್ಯ, ಅಭಿಷೇಕ್ ಅಂಬರೀಶ್ ಅವರ ಚೊಚ್ಚಲ ಸಿನಿಮಾ ಅಮರ್ ಗೆ ನಾಯಕಿಯಾಗಿದ್ದಾರೆ. ಉಪೇಂದ್ರ ಅಭಿನಯಿಸುತ್ತಿರುವ ಹೋಮ್ ಮಿನಿಸ್ಟರ್ ಚಿತ್ರಕ್ಕೂ ಇವರೇ ಹೀರೋಯಿನ್. ಚಿರು ಸರ್ಜಾ ಜೊತೆ ಖಾಕಿ ಸಿನಿಮಾ ಮಾಡ್ತಿದ್ದಾರೆ. ಹೀಗೆ, ಪರಭಾಷೆ ಸುತ್ತಿ ಬಂದ ಕನ್ನಡದ ಹುಡುಗಿ ಈಗ ಸ್ಯಾಂಡಲ್ ವುಡ್ ನಲ್ಲೇ ನೆಲೆ ಕಂಡುಕೊಂಡಿದ್ದಾರೆ.

  English summary
  Tanya Hope is an Indian film actress born in Bengaluru, Karnataka, India who appears in south Indian films. Hope started modeling and became Miss India Kolkata 2015. Tanya hope reaction about her family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X