ಮೂಗುತಿ ಸುಂದರಿಯಾದ ನಟಿ ತಾನ್ಯ ಹೋಪ್
ಹೆಣ್ಣುಮಕ್ಕಳ ಮೂಗಿನ ಮೇಲೆ ಮೂಗುತಿ ಕೂತರೇ ಆ ಮೂಗಿನ ಅಂದ ಜಾಸ್ತಿಯಾಗುತ್ತದೆ. ಸಿನಿಮಾ ನಟಿಯರಿಗೆ ಮೂಗುತಿ ಹೊಸ ಲುಕ್ ನೀಡುತ್ತದೆ. ಈಗ ನಟಿ ತಾನ್ಯ ಹೋಪ್ ಮೂಗುತಿ ಸುಂದರಿಯಾಗಿದ್ದಾರೆ.
ಶ್ರದ್ಧಾ ಶ್ರೀನಾಥ್, ರಚಿತಾ ರಾಮ್, ಹರಿಪ್ರಿಯಾ ಹೀಗೆ ಕನ್ನಡದ ಕೆಲವು ನಟಿಯರು ಮೂಗುತಿ ಧರಿಸಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಆ ಸರದಿ ತಾನ್ಯ ಹೋಪ್ ಅವರದ್ದಾಗಿದೆ.

'ಬಸಣ್ಣಿ ಬಾ ಬಸಣ್ಣಿ ಬಾ..' ಎಂದು ದರ್ಶನ್ ಜೊತೆಗೆ ಕುಣಿದಿದ್ದ ತಾನ್ಯ ಹೋಪ್ ಇದೀಗ ಟಾಲಿವುಡ್ ಸ್ಟಾರ್ ಜೊತೆಗೆ ನಟಿಸುತ್ತಿದ್ದಾರೆ. ನಟ ರವಿತೇಜರ 'ಡಿಸ್ಕೋ ರಾಜ' ಚಿತ್ರದಲ್ಲಿ ತಾನ್ಯ ನಾಯಕಿಯಾಗಿದ್ದಾರೆ. ಈ ಸಿನಿಮಾದ ಪಾತ್ರಕ್ಕಾಗಿ ಮೂಗುತಿ ಧರಿಸಿ ಬೇರೆ ಲುಕ್ ನಲ್ಲಿ ತಾನ್ಯ ಕಾಣಿಸಿಕೊಂಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೂಗುತಿ ಧರಿಸಿದ ಫೋಟೋವನ್ನು ತಾನ್ಯ ಹಂಚಿಕೊಂಡಿದ್ದಾರೆ. ತಾನ್ಯ ಫ್ಯಾನ್ಸ್ ಗಳಿಗೂ ಅವರ ನೋಟ ಬಹಳ ಇಷ್ಟ ಆಗಿದೆ.
ಸದ್ಯ, ತಾನ್ಯ ಕನ್ನಡದಲ್ಲಿ 'ಹೋಪ್ ಮಿನಿಸ್ಟರ್' ಹಾಗೂ 'ಖಾಕಿ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
English summary
Actress Tanya Hope's 'Disco Raja' movie look revealed.


Click it and Unblock the Notifications