ದರ್ಶನ್ 51ನೇ ಚಿತ್ರಕ್ಕೆ ಹೊಸ ನಾಯಕಿ ಎಂಟ್ರಿ

By Pavithra

Recommended Video

ದರ್ಶನ್ 51ನೇ ಚಿತ್ರಕ್ಕೆ ಹೊಸ ನಾಯಕಿ ಎಂಟ್ರಿ | FIlmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 51ನೇ ಸಿನಿಮಾ ಸೆಟ್ಟೇರಿದೆ. ಸಿಂಪಲ್ ಆಗಿ ಮಹೂರ್ತ ಮಾಡಿದ ಚಿತ್ರತಂಡ ಪಾತ್ರವರ್ಗಗಳ ಆಯ್ಕೆ ಮಾಡುವಲ್ಲಿ ಬ್ಯುಸಿ ಆಗಿದೆ. ಮೀಡಿಯಾ ಹೌಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಇನ್ನು ಹೆಸರಿಡದ ಈ ಚಿತ್ರಕ್ಕೆ ಶೈಲಜಾ ನಾಗ್ ಬಂಡವಾಳ ಹಾಕಿದ್ದಾರೆ.

ಕಳೆದವಾರವಷ್ಟೇ ಸಿನಿಮಾತಂಡ ಚಿತ್ರೀಕರಣಕ್ಕಾಗಿ ಲೊಕೇಷನ್ ಹಂಟಿಂಗ್ ನಲ್ಲಿ ಬ್ಯುಸಿ ಆಗಿತ್ತು. ದರ್ಶನ್ ಹುಟ್ಟುಹಬ್ಬಕ್ಕೆ ಸಿನಿಮಾದ ಟೈಟಲ್ ಅನೌನ್ಸ್ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ. ಇವೆಲ್ಲವುದರ ನಡುವೆ ಚಿತ್ರತಂಡ ಸಿನಿಮಾಗೆ ನಾಯಕಿಯನ್ನ ಆಯ್ಕೆ ಮಾಡಿದೆ.

ಎಲ್ಲರಿಗೂ ತಿಳಿದಿರುವಂತೆ ದರ್ಶನ್ ಅಭಿನಯದ 51ನೇ ಸಿನಿಮಾಗೆ ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ನಾಯಕಿ . ಆದರೆ ಚಿತ್ರದಲ್ಲಿ ಡಿ ಬಾಸ್ ಜೊತೆ ಇಬ್ಬರು ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಹಾಗಾದ್ರೆ ಹೊಸ ನಾಯಕಿ ಯಾರು? ದರ್ಶನ್ ಜೊತೆ ಡ್ಯುಯೆಟ್ ಹಾಡುವ ಅವಕಾಶ ಯಾರಿಗೆ ಸಿಕ್ಕಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ದರ್ಶನ್ 51ನೇ ಸಿನಿಮಾಗೆ ಹೊಸ ನಾಯಕಿ

ದರ್ಶನ್ 51ನೇ ಸಿನಿಮಾಗೆ ಹೊಸ ನಾಯಕಿ

ಚಾಲೆಂಜಿಂಗ್ ಸ್ಟಾರ್ ಅಭಿನಯದ 51ನೇ ಚಿತ್ರಕ್ಕೆ ಹೊಸ ನಾಯಕಿಯನ್ನ ಆಯ್ಕೆ ಮಾಡಲಾಗಿದ್ಯಂತೆ. ಈಗಾಗಲೇ ರಶ್ಮಿಕಾ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಅಭಿನಯಿಸುತ್ತಿದ್ದು ಎರಡನೇ ನಾಯಕಿಯೂ ಚಿತ್ರದಲ್ಲಿ ಇರಲಿದ್ದಾರಂತೆ.

ದರ್ಶನ್ ಜೊತೆಯಲ್ಲಿ ತಾನ್ಯ ಹೋಪ್

ದರ್ಶನ್ ಜೊತೆಯಲ್ಲಿ ತಾನ್ಯ ಹೋಪ್

ಕನ್ನಡದ ಹೋಂ ಮಿನಿಸ್ಟರ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿರುವ ತಾನ್ಯ ಹೋಪ್ ದರ್ಶನ್ ಅವರ 51ನೇ ಚಿತ್ರಕ್ಕೆ ನಾಯಕಿಯಾಗುವ ಎಲ್ಲಾ ಸಾಧ್ಯತೆಗಳು ಇವೆಯಂತೆ. ಚಿತ್ರತಂಡ ಇನ್ನೂ ಅಧಿಕೃತವಾಗಿ ಈ ಬಗ್ಗೆ ಎಲ್ಲಿಯೂ ಮಾಹಿತಿ ಹೊರಹಾಕಿಲ್ಲ.

ಮಂಗಳೂರು ಮೂಲದ ನಾಯಕಿ

ಮಂಗಳೂರು ಮೂಲದ ನಾಯಕಿ

ತಾನ್ಯ ಹೋಪ್ ಮಂಗಳೂರು ಮೂಲದ ನಾಯಕಿ. ಈಗಾಗಲೇ ಕನ್ನಡದಲ್ಲಿ ಒಂದು ಸಿನಿಮಾ ತಮಿಳಿನಲ್ಲಿ ಒಂದು ಚಿತ್ರದಲ್ಲಿ ನಟಿಸಿದ್ದು ಎರಡೇ ಚಿತ್ರದಲ್ಲೇ ಡಿ ಬಾಸ್ ಜೊತೆಯಲ್ಲಿ ಆಕ್ಟ್ ಮಾಡುತ್ತಾರೆ ಎಂದು ಸುದ್ದಿ ಆಗಿದೆ.

ಡಿ ಬಾಸ್ ಜೊತೆಯಲ್ಲಿ ಇಬ್ಬರು ನಾಯಕಿಯರು

ಡಿ ಬಾಸ್ ಜೊತೆಯಲ್ಲಿ ಇಬ್ಬರು ನಾಯಕಿಯರು

ಪಿ ಕುಮಾರ್ ನಿರ್ದೇಶನ ಮಾಡುತ್ತಿರುವ ಇನ್ನೂ ಹೆಸರಿಡದ ದರ್ಶನ್ ಚಿತ್ರದಲ್ಲಿ ಇಬ್ಬರು ನಾಯಕಿಯರು ಕಾಣಿಸಿಕೊಳ್ಳಲಿದ್ದಾರೆ. ಫೆಬ್ರವರಿ ಅಂತ್ಯದಿಂದ ಚಿತ್ರೀಕರಣ ಶುರುವಾಗಲಿದ್ದು ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಸಿನಿಮಾ ಟೈಟಲ್ ಅನೌನ್ಸ್ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.

More from Filmibeat

English summary
The new heroine has been selected for Darshan 51 film. Tanya Hope signs her next project paired opposite darshan. Tanya Hope has already acted with Upendra's Home Minister movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X