For Quick Alerts
  ALLOW NOTIFICATIONS  
  For Daily Alerts

  ಹಿಂದಿ ವೆಬ್ ಸರಣಿ ಲೋಕಕ್ಕೆ ಎಂಟ್ರಿ ಕೊಟ್ಟ 'ಯಜಮಾನ'ನ ಬಸಣ್ಣಿ

  |

  ಸ್ಯಾಂಡಲ್ ವುಡ್ ನಟಿ ತಾನ್ಯಾ ಹೋಪ್ ಈಗ ವೆಬ್ ಸರಣಿ ಲೋಕಕ್ಕೆ ಕಾಲಿಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕನ್ನಡ ಸೇರಿದಂತೆ, ತಮಿಳು ಮತ್ತು ತೆಲುಗು ಚಿತ್ರರಗಂದಲ್ಲಿ ಬ್ಯುಸಿ ಇರುವ ತಾನ್ಯಾ ಈಗ ಹೊಸ ಪ್ರಯೋಗಕ್ಕೆ ಕೈ ಹಾಕುತ್ತಿದ್ದಾರೆ.

  ಕನ್ನಡದಲ್ಲಿ ಅಮರ್ ಮತ್ತು ಯಜಮಾನ ಸಿನಿಮಾದಲ್ಲಿ ಮಿಂಚಿದ ತಾನ್ಯಾ ಸ್ಯಾಂಡಲ್ ವುಡ್ ನ ಬಸಣ್ಣಿ ಅಂತಾನೆ ಖ್ಯಾತಿಗಳಿಸಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ತಿದ್ದ ತಾನ್ಯಾ ಈಗ ವೆಬ್ ಸರಣಿಗೆ ಎಂಟ್ರಿ ಕೊಡುವ ಮೂಲಕ ತನ್ನ ವ್ಯಾಪ್ತಿಯನ್ನು ಹಿಂದಿಯಲ್ಲೂ ವಿಸ್ತರಿಸಿಕೊಳ್ಳುತ್ತಿದ್ದಾರೆ.

  ಮೊದಲ ಬಾರಿಗೆ ನೆಟ್ ಫ್ಲಿಕ್ಸ್ ಆಫರ್ ಪಡೆದ ಸೌತ್ ಇಂಡಿಯಾ ನಟಿ, ಯಾರಾಕೆ?ಮೊದಲ ಬಾರಿಗೆ ನೆಟ್ ಫ್ಲಿಕ್ಸ್ ಆಫರ್ ಪಡೆದ ಸೌತ್ ಇಂಡಿಯಾ ನಟಿ, ಯಾರಾಕೆ?

  ಅಂದ್ಹಾಗೆ ತಾನ್ಯಾ ಹೊಸ ಸರ್ನಿ ವೆಬ್ ಸಿರೀಸ್ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ. ನೆಟ್ ಫ್ಲಿಕ್ಸ್ ನಿರ್ಮಿಸುವ ಸರಣಿಯಲ್ಲಿ ಕನ್ನಡದ ನಟಿ ತಾನ್ಯಾ ಮಿಂಚಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮೂಲಗಳ ಪ್ರಕಾರ ತಾನ್ಯಾ ಡಿಸೆಂಬರ್ ನಿಂದ ವೆಬ್ ಸರಣಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಂತೆ.

  ತಾನ್ಯಾ ಹಿಂದಿ ಚಿತ್ರದಲ್ಲಿ ಮಿಂಚುವ ಕನಸು ಹೊಂದಿದ್ದಾರೆ. ಒಂದು ವೇಳೆ ಹಿಂದಿ ವೆಬ್ ಸರಣಿ ಸಕ್ಸಸ್ ಆದರೆ ಬಾಲಿವುಡ್ ಗೆ ಎಂಟ್ರಿ ಮತ್ತಷ್ಟು ಹತ್ತಿರವಾಗಲಿದೆ. ತಾನ್ಯಾ ಸದ್ಯ ಕನ್ನಡ ಸೇರಿದಂತೆ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಚಿರಂಜೀವಿ ಸರ್ಜಾ ಅಭಿನಯದ 'ಖಾಕಿ' ಸಿನಿಮಾದಲ್ಲಿ ತಾನ್ಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಟಾಲಿವುಡ್ ನ ಡಿಸ್ಕೋ ರಾಜಾ, ಕಾಲಿವುಡ್ ನ ಧಾರಾಳ ಪ್ರಭು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  Read more about: tanya hope netflix
  English summary
  Kannada Actress Tanya Hope Will Be Making Her Hindi Debut with a NetFlix.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X