twitter
    For Quick Alerts
    ALLOW NOTIFICATIONS  
    For Daily Alerts

    ಪಿತೃ ವಾತ್ಸಲ್ಯ, ಅಮ್ಮನ ಮಮತೆ, ತಂಗಿಯ ಅಭಿಮಾನ,

    By Super
    |
    • ಠಪೋರಿ- ಇದೊಂದು ಸಿನಿಮಾ. ಸಿಂಪ್ಲಿ ಮಜಾ ಮಾಡಿ ಅನ್ನುವುದು ಇದರ ಸ್ಲೋಗನ್ನು!
    • ಠಪೋರಿ- ಚಿತ್ರೀಕರಣ ಮುಗಿದಿದೆ; ಮೂವತ್ತೊಂಭತ್ತು ದಿನಗಳಲ್ಲಿ. ಗುಟ್ಟಾಗಿ ಸೆಟ್ಟೇರಿದ ಠಪೋರಿ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದೆ.
    • ಸಾಹಸ ಕಲಾವಿದ ಜಾಲಿ ಬಾಸ್ಟಿನ್‌ ಹಾಡು ಹೇಳುವುದರಲ್ಲೂ ಪಳಗಿದವರು.
    • ಮೇ ತಿಂಗಳಲ್ಲಿ ಠಪೋರಿ ತೆರೆಗೆ.
    • ಡಿಡಿ 'ಸಾಧನೆ"ಯ ಖ್ಯಾತಿಯ ಸುರೇಶ್‌ ಠಪೋರಿ ನಿರ್ದೇಶಕರು.

    - ಇಂತಿಪ್ಪ ವಿಶೇಷಗಳನ್ನು ಒಂದೊಂದಾಗಿ ಬಿಚ್ಚಿಡುತ್ತಾ ಹೋದವರು ಹಂಸಲೇಖಾ. ಸಿಂಪ್ಲಿ ಮಜಾ ಮಾಡಿ ಅನ್ನುವ ಠಪೋರಿಯ ಸ್ಲೋಗನ್ನಿಗನುಗುಣವಾಗಿ ಕಾಂಟ್ರಾಕ್ಟರ್ಸ್‌ ಕ್ಲಬ್ಬಿನ ಆವರಣದ ತುಂಬ ಪೋರ ಪೋರಿಯರು ಎಗ್ಗಿಲ್ಲದೆ ಕುಣಿಯುತ್ತಿದ್ದರು.

    ಠಪೋರಿ ನಂದಿ ಬ್ರಾಂಡ್‌ ಚಿತ್ರ. ಕಿರು ತೆರೆಗೆ ಧಾರಾವಾಹಿಗಳನ್ನು ನಿರ್ಮಿಸಿ ಅನುಭವ ಪಡೆದಿರುವ ನಂದಿ ಮೂವೀಸ್‌ ಠಪೋರಿ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿದೆ. ನೆ.ಲ. ರವಿಶಂಕರ್‌ ಹಾಗೂ ನೆ.ಲ.ಮಹೇಶ್‌ಕುಮಾರ್‌ ಠಪೋರಿ ನಿರ್ಮಾಪಕರು. ಹಂಸಲೇಖಾ ತಮ್ಮ ಅನುಭವವನ್ನು ಧಾರೆಯೆರೆದಿದ್ದಾರೆ. ಹಂಸ್‌ ಮಾತಿನಲ್ಲೇ ಹೇಳುವುದಾದರೆ- ಇದು ಇನ್ನೊಂದು ಪ್ರೇಮಲೋಕ. ಆ ಕಾರಣಕ್ಕಾಗಿಯೇ ಸಿನಿಮಾದ ತುಂಬ ಹುಮ್ಮಸ್ಸು ತುಳುಕುವ ಹೊಸ ಮುಖಗಳು; ಇವರ ನಡುವೆ ತುಂಬು ಕೆನ್ನೆಯ ಹಿರಿನಟಿ ಪ್ರೇಮಾ.

    ಇಷ್ಟಕ್ಕೇ ಠಪೋರಿಯ ವಿಶೇಷಣ ಪೂರ್ಣವಾಗಲಿಲ್ಲ . ಹಂಸ್‌ ಪುತ್ರ ಅಲಂಕಾರ್‌ ಠಪೋರಿ ನಾಯಕರೆನ್ನುವುದೇ ವಿಶೇಷದೊಳಗಿನ ವಿಶೇಷ. ಮೊದಲ ಚಿತ್ರ ಸುಗ್ಗಿ ಚಿತ್ರೀಕರಣ ಮುಗಿದರೂ, ಥಿಯೇಟರ್‌ಗೆ ಬರದೆ- ಮಂಕಾಗಿದ್ದ ಅಲಂಕಾರ್‌, ಠಪೋರಿ ಮೂಲಕ ಎರಡನೇ ಇನಿಂಗ್ಸ್‌ ಪ್ರಾರಂಭಿಸುತ್ತಿದ್ದಾರೆ.

    ಹಂಸಲೇಖಾ ಪಾಲಿಗೆ ಸುಗ್ಗಿ ದುಬಾರಿಯಾಯಿತು. ಈ ನಾಲ್ಕು ವರ್ಷಗಳಲ್ಲಿ ಅವರು ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ . ಒಂದೆಡೆ, ಕಷ್ಟ ಪಟ್ಟ ದುಡ್ಡು ಕೈ ತಪ್ಪಿದ್ದು , ಇನ್ನೊಂದೆಡೆ ಅವಕಾಶಗಳು ಇಳಿ ಮುಖವಾದದ್ದು- ಈ ಎರಡರ ನಡುವೆ ಅನಾರೋಗ್ಯ. ರವಿಂಚಂದ್ರನ್‌ ಜೊತೆಗಿನ ಗೆಳೆತನ ಕೈ ತಪ್ಪಿದ್ದು ಕೂಡ ಹಂಸಲೇಖಾ ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತು . ಹಂಸಲೇಖಾ ಈಗ ಚೇತರಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಬೈಪಾಸ್‌ ಸರ್ಜರಿ ಮಾಡಿಸಿಕೊಂಡಿರುವ ಅವರ ಹೃದಯದಲ್ಲಿ ಹೊಸ ಪ್ರೇಮಗೀತೆಗಳು ಮೊಳೆಯುತ್ತಿವೆ.

    ಅಲಂಕಾರ್‌ ಹೀರೋ ಆಗುತ್ತಿರುವುದು ಹಂಸ್‌ ಮನೆಯಲ್ಲಿ ಕಳೆದುಹೋದ ಶಾಂತಿಯನ್ನು ಮತ್ತೆ ತಂದಿದೆ. ನಾವೆಲ್ಲ ಈಗ ಖುಷಿಯಾಗಿದ್ದೇವೆ. ಕೆಲವು ದಿನಗಳಿಂದ ಮನೆಯಲ್ಲಿ ಸಂತೋಷ ನೆಲೆಸಿದೆ, ನಗು ಮರಳಿದೆ. ಇದಕ್ಕೆಲ್ಲ ಕಾರಣರಾದ ನೆ.ಲ. ಸೋದರರನ್ನು ನಾನು ಜನ್ಮಪೂರ್ತಿ ಮರೆಯುವಂತೆಯೇ ಇಲ್ಲ ಎಂದರು ಹಂಸ್‌. ವ್ಯಾಯಾಮದಿಂದ ಮೈ ತುಂಬಿಕೊಂಡಿದ್ದ ಅಲಂಕಾರ್‌ನನ್ನು ತಂಗಿ ಕಣ್ತುಂಬಿಕೊಂಡು ನೋಡುತ್ತಿದ್ದಳು. ಅಜ್ಜಿಗೆ ಮಾತು ಮರೆತುಹೋಗಿತ್ತು .

    ಸುಗ್ಗಿಯ ವೈಫಲ್ಯದಿಂದ ಅಲಂಕಾರ್‌ ನೆಲ ಕಚ್ಚಿದ್ದರು. ಒಂದು ವರ್ಷದ ಹಿಂದಷ್ಟೇ ಸಿಗರೇಟು, ಸಂಜೆ ಗೆಳೆಯರೊಂದಿಗೆ ಅಲೆದಾಟ- ಇಂತಿದ್ದ ಅಲಂಕಾರ್‌, ಈಗ ಅಮ್ಮನ ಕೂಸು. ಮಗ ಮೊದಲಿಗಿಂತ ಹೆಚ್ಚು ಊಟ ಮಾಡುತ್ತ , ಮೈ ತುಂಬಿಕೊಂಡಿರುವುದನ್ನು ನೋಡಿ ಲತಾ ಹಂಸಲೇಖಾಗೆ ನೆಮ್ಮದಿ.

    ನಿರ್ದೇಶಕ ಸುರೇಶ್‌ ಬಗ್ಗೆ ಹಂಸಲೇಖಾಗೆ ಇನ್ನಿಲ್ಲದ ಅಭಿಮಾನ. ಠಪೋರಿ ಚೆನ್ನಾಗಿ ಮೂಡಿ ಬಂದಿರುವುದರಲ್ಲಿ ಸುರೇಶ್‌ರ ಅಪಾರ ಶ್ರಮವಿದೆ. ಮೊದಲಿಗಿದ್ದದ್ದು ಎರಡೇ ಹಾಡು, ಈಗ ಹಾಡುಗಳ ಸಂಖ್ಯೆ ಏಳಕ್ಕೇರಿದೆ. ಚಿತ್ರ ಯಶಸ್ಸಾಗುವ ಬಗ್ಗೆ ಚಿತ್ರತಂಡಕ್ಕೆ ಅಪಾರ ನಂಬಿಕೆ. ನಾಳೆ ನಮ್ಮದೇ- ಅನ್ನುವುದು ಅಲಂಕಾರ್‌ ನಂಬಿಕೆ. ಹಂಸಲೇಖಾ ಕೂಡ ಅದೇ ಹುಮ್ಮಸ್ಸಿನಲ್ಲಿದ್ದಾರೆ.

    English summary
    Hamsalekhas son Alankar stars in Tapori
    Tuesday, July 9, 2013, 14:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X